ಸೀಟು ಹಂಚಿಕೆ ಬಿಕ್ಕಟ್ಟಿನ ಮಧ್ಯೆ ಮತ್ತೊಮ್ಮೆ ನಾನೇ ಎಂದ ಮಾಹಾ ಸಿಎಂ

By Web Desk  |  First Published Sep 21, 2019, 9:46 PM IST

ಮಹಾರಾಷ್ಟ್ರ ವಿಧಾನಸಭೆಗಳಿಗೂ ಚುನಾವಣೆ ದಿನಾಂಕ ಘೋಷಣೆಯಾಗಿದ್ದೇ ತಡ ಮತ್ತೊಮ್ಮೆ ನಾನೇ  ಮುಖ್ಯಮಂತ್ರಿ ಎಂದು ಮಾಹಾ ಸಿಎಂ ಘೋಷಿಸಿಕೊಂಡಿದ್ದಾರೆ. 


ಮುಂಬೈ, [ಸೆ.21]: ಮಹಾರಾಷ್ಟ್ರ ವಿಧಾನಸಭೆಗಳಿಗೂ  ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಒಟ್ಟು 288 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಜತೆದೊಂದಿಗೆ ಚುನಾವಣೆ ಅಖಾಡಕ್ಕಿಳಿಯಲು ನಿರ್ಧರಿಸಿದೆ. ಆದ್ರೆ ಇದಕ್ಕೆ ಶಿವಸೇನೆ ಹೊಸ ಕ್ಯಾತೆ ತೆಗೆದಿದೆ.

Tap to resize

Latest Videos

ಬೈ ಎಲೆಕ್ಷನ್ ಗೌಪ್ಯ ಸಭೆ: ಅನರ್ಹ ಶಾಸಕರು ದುಂಬಾಲು, ದೆಹಲಿಗೆ ಯಡಿಯೂರಪ್ಪ ದೌಡು..!

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ  ಹೆಚ್ಚು ಸ್ಥಾನ ನೀಡುವಂತೆ ಶಿವಸೇನೆ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಡಿಮ್ಯಾಂಡ್ ಮಾಡಿದ್ದಾರೆ. ಇದರಿಂದ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಮತ್ತೆ ನಾನೇ ಸಿಎಂ ಎಂದು ಘೋಷಿಸಿಕೊಂಡ ಫಡ್ನಾವಿಸ್
ತಾವು ಕೇಳಿದಷ್ಟು ಸ್ಥಾನ ಸಿಗದೆ ಇದ್ದಲ್ಲಿ ಬಿಜೆಪಿ ಮೈತ್ರಿಯಿಂದ ಹೊರ ಬರುವುದಾಗಿ ಉದ್ಧವ್ ಠಾಕ್ರೆ ಬಹಿರಂಗವಾಗಿಯೇ ಹೇಳಿದ್ದಾರೆ. ಹೀಗಿರುವಾಗ ಇಂದು [ಶನಿವಾರ] ಚುನಾವಣೆ ಘೋಷಣೆಯಾಗಿದ್ದೇ ತಡ ಮತ್ತೆ ನಾನೇ ಮುಖ್ಯಮಂತ್ರಿಯಾಗುತ್ತೇನೆಂದು ಹಾಲಿ ಸಿಎಂ  ದೇವೇಂದ್ರ ಫಡ್ನವಿಸ್ ಘೋಷಿಸಿಕೊಂಡಿದ್ದಾರೆ. ಹಾಗಾದ್ರೆ ಮಾಹಾ ಸಿಎಂ ಏನೆಲ್ಲ ಹೇಳಿದ್ದಾರೆ ಎನ್ನುವುದನ್ನು ಈ ಕೆಳಗಿನಂತಿದೆ.  

ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಜಂಟಿಯಾಗಿ ಸ್ಪರ್ಧಿಸಲಿದ್ದು, ಈ ಬಾರಿಯೂ  ಗೆದ್ದು ಮತ್ತೆ ತಾವೇ ಮುಖ್ಯಮಂತ್ರಿಗಳಾಗುವುದಾಗಿ ಫಡ್ನವಿಸ್ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಬಿಜೆಪಿ 162 ಕ್ಷೇತ್ರಗಳಲ್ಲಿ ಹಾಗೂ ಶಿವಸೇನೆ 126 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ ಎಂಬ ಮಾಧ್ಯಮದವರ ಪ್ರಶ್ನೆಯನ್ನು ತಳ್ಳಿಹಾಕಿದ ಮಹಾ ಸಿಎಂ, ಸೀಟು ಹಂಚಿಕೆ ಕುರಿತು ಅಂತಿಮವಾಗಿಲ್ಲ. ಇನ್ನೂ ಮಾತುಕತೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆಗೆ ಘೋಷಣೆಯಾಗಿದ್ದು, ಅಕ್ಟೋಬರ್ 21ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಮತ್ತು ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟವಾಗಲಿದೆ.

click me!