ಕಾಂಗ್ರೆಸ್ ಮಣಿಸಲು ಬಿಜೆಪಿ ಸಜ್ಜು; ರಾಜ್ಯದಲ್ಲಿ 1 ತಿಂಗಳು ಠಿಕಾಣಿ ಹೂಡಲಿದ್ದಾರೆ ಅಮಿತ್ ಶಾ

Published : Feb 14, 2018, 09:44 AM ISTUpdated : Apr 11, 2018, 12:51 PM IST
ಕಾಂಗ್ರೆಸ್ ಮಣಿಸಲು ಬಿಜೆಪಿ ಸಜ್ಜು; ರಾಜ್ಯದಲ್ಲಿ  1 ತಿಂಗಳು ಠಿಕಾಣಿ ಹೂಡಲಿದ್ದಾರೆ ಅಮಿತ್ ಶಾ

ಸಾರಾಂಶ

ರಾಜಕೀಯ ಚಾಣಕ್ಯ ಎಂದೇ ಖ್ಯಾತವಾಗಿರುವ ಬಿಜೆಪಿ ಅಧ್ಯಕ್ಷ ಅಮಿತ್  ಶಾ ಕರ್ನಾಟಕದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುಮಾರು  ಒಂದು ತಿಂಗಳ ಕಾಲ ರಾಜ್ಯದಲ್ಲೇ ವಾಸ್ತವ್ಯ ಹೂಡುವ ಸಾಧ್ಯತೆಯಿದೆ. ಜತೆಗೆ ಫೆ. 19  ರಿಂದ ಮೂರು ದಿನಗಳ ಕಾಲ ಕರಾವಳಿ ಭಾಗದಲ್ಲಿ  ಪ್ರವಾಸ ನಡೆಸಲಿರುವ ಅಮಿತ್ ಶಾ, ಅದೇ ಮಾದರಿಯಲ್ಲಿ ಇತರ  ಕಂದಾಯ ವಿಭಾಗಗಳಲ್ಲೂ 3-4  ದಿನ ಪ್ರವಾಸ ನಡೆಸಿ ಚುನಾವಣೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಉದ್ದೇಶಿಸಿ ದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು (ಫೆ.14): ರಾಜಕೀಯ ಚಾಣಕ್ಯ ಎಂದೇ ಖ್ಯಾತವಾಗಿರುವ ಬಿಜೆಪಿ ಅಧ್ಯಕ್ಷ ಅಮಿತ್  ಶಾ ಕರ್ನಾಟಕದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುಮಾರು  ಒಂದು ತಿಂಗಳ ಕಾಲ ರಾಜ್ಯದಲ್ಲೇ ವಾಸ್ತವ್ಯ ಹೂಡುವ ಸಾಧ್ಯತೆಯಿದೆ.
ಜತೆಗೆ ಫೆ. 19  ರಿಂದ ಮೂರು ದಿನಗಳ ಕಾಲ ಕರಾವಳಿ ಭಾಗದಲ್ಲಿ  ಪ್ರವಾಸ ನಡೆಸಲಿರುವ ಅಮಿತ್ ಶಾ, ಅದೇ ಮಾದರಿಯಲ್ಲಿ ಇತರ  ಕಂದಾಯ ವಿಭಾಗಗಳಲ್ಲೂ 3-4  ದಿನ ಪ್ರವಾಸ ನಡೆಸಿ ಚುನಾವಣೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಉದ್ದೇಶಿಸಿ ದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು 4 ದಿನಗಳ ಹೈದ್ರಾಬಾದ್-ಕರ್ನಾಟಕ ಪ್ರದೇಶದ ಪ್ರವಾಸವನ್ನು ಮುಗಿಸಿ ವಾಪಸಾಗಿದ್ದು, ಮತ್ತೆ ಇದೇ ತಿಂಗಳ 24 ರಿಂದ ಮುಂಬೈ ಕರ್ನಾಟಕ  ಪ್ರದೇಶದಲ್ಲಿ ಪಕ್ಷ ಸಂಘಟನೆಗಾಗಿ ಸಂಚರಿಸಲಿದ್ದಾರೆ. ಅದರ ಬೆನ್ನಲ್ಲೇ ಅಮಿತ್ ಶಾ ಕೂಡ ವಿಭಾಗವಾರು ಪ್ರವಾಸ ನಡೆಸುವುದು ಸೂಕ್ತ ಎಂಬ  ನಿಲುವಿಗೆ ಬಂದಿದ್ದಾರೆ ಎನ್ನಲಾಗಿದೆ. ಸದ್ಯದ ಮಾಹಿತಿ ಅನುಸಾರ ಮೇ ಮೊದಲ ವಾರದಲ್ಲಿ ಚುನಾವಣೆ ನಡೆಯಬಹುದು ಎಂಬ ಮಾಹಿತಿಯಿದೆ.  ಹೀಗಾಗಿ, ಫೆಬ್ರವರಿ ಸೇರಿದಂತೆ ಮಾರ್ಚ್ ಮತ್ತು ಏಪ್ರಿಲ್ನ್‌ಲ್ಲಿ ಒಟ್ಟು 30 ದಿನಗಳ ಕಾಲವಾದರೂ ಕರ್ನಾಟಕದಲ್ಲೇ ಪ್ರವಾಸ ನಡೆಸುವ ಮೂಲಕ  ತಮ್ಮ ‘ಕಾಂಗ್ರೆಸ್ ಮುಕ್ತ ಕರ್ನಾಟಕ’ ಸಂಕಲ್ಪ ಈಡೇರಿಕೆಗೆ ಪ್ರಯತ್ನಿಸಲು  ತೀರ್ಮಾನಿಸಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಎದುರಿಸುವುದು ಸುಲಭವಲ್ಲ?: ಆರಂಭದಲ್ಲಿ ಕರ್ನಾಟಕ ಸುಲಭದ ತುತ್ತಾಗಲಿದೆ ಎಂಬ ವಿಶ್ವಾಸದಲ್ಲಿದ್ದ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಇದೀಗ ವಾಸ್ತವದ ಅರಿವಾಗತೊಡಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ
ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ