ಬೆಂಗಳೂರಿಗೆ ಮೋದಿ ಆಗಮನ : ಹೇಗೆ ಸಜ್ಜಾಗಿದೆ ಅರಮನೆ ಮೈದಾನ..?

By Suvarna Web DeskFirst Published Feb 4, 2018, 9:25 AM IST
Highlights

ಬಿಜೆಪಿ ಸಮಾವೇಶದಲ್ಲಿ ಅಡುಗೆ ವ್ಯವಸ್ಥೆಯನ್ನು ಸಹ ಸುವ್ಯವಸ್ಥಿತವಾಗಿ ಮಾಡಲಾಗಿದೆ. ಅಡುಗೆ ತಯಾರಿಸಲು 600 ಕ್ಕೂ ಹೆಚ್ಚು ಬಾಣಸಿಗರನ್ನು ನಿಯೋಜಿಸಲಾಗಿದೆ. ಊಟದ ವ್ಯವಸ್ಥೆಯಲ್ಲಿ ಯಾವುದೇ ಗೊಂದಲವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಊಟಕ್ಕೆ 250 ಕೌಂಟರ್‌ಗಳನ್ನು ತೆರೆಯಲಾಗಿದೆ. ಪ್ರತಿ ಕೌಂಟರ್‌ಗೆ ಐವರು ಕೆಲಸ ಮಾಡಲಿದ್ದಾರೆ.

ಬೆಂಗಳೂರು : ಬಿಜೆಪಿ ಸಮಾವೇಶದಲ್ಲಿ ಅಡುಗೆ ವ್ಯವಸ್ಥೆಯನ್ನು ಸಹ ಸುವ್ಯವಸ್ಥಿತವಾಗಿ ಮಾಡಲಾಗಿದೆ. ಅಡುಗೆ ತಯಾರಿಸಲು 600 ಕ್ಕೂ ಹೆಚ್ಚು ಬಾಣಸಿಗರನ್ನು ನಿಯೋಜಿಸಲಾಗಿದೆ. ಊಟದ ವ್ಯವಸ್ಥೆಯಲ್ಲಿ ಯಾವುದೇ ಗೊಂದಲವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಊಟಕ್ಕೆ 250 ಕೌಂಟರ್‌ಗಳನ್ನು ತೆರೆಯಲಾಗಿದೆ. ಪ್ರತಿ ಕೌಂಟರ್‌ಗೆ ಐವರು ಕೆಲಸ ಮಾಡಲಿದ್ದಾರೆ.

ಲಕ್ಷಾಂತರ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೆಲವರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ತಕ್ಷಣ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮಿನಿ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಡಾ.ವಾಸು ದೇವ ಅವರ ತಂಡವು ಇದರ ಉಸ್ತುವಾರಿ ನೋಡಿಕೊಳ್ಳ ಲಿದೆ.  2 ಹಾಸಿಗೆಯ 4 ಆಸ್ಪತ್ರೆಗಳು ನಿರ್ಮಾಣವಾಗಿವೆ. ಸಂಚಾರ ದಟ್ಟಣೆಯ ನಿರ್ವಹಣೆಯನ್ನು ಪಾಲಿಕೆಯ ಮಾಜಿ ಸದಸ್ಯ ಕೆ.ರಾಮಮೂರ್ತಿ ಮತ್ತು ಸೋಮಶೇಖರ್ ಅವರಿಗೆ ವಹಿಸಲಾಗಿದೆ.

300ಕ್ಕೂ  ಹೆಚ್ಚು ಟಾಯ್ಲೆಟ್ : ಅರಮನೆ ಮೈದಾನದಲ್ಲಿ ಸ್ವಚ್ಛತೆಗಾಗಿ ಪಾಲಿಕೆ ಸದಸ್ಯ ಮಂಜುನಾಥ್ ಅವರನ್ನು ನಿಯೋಜಿಸಲಾಗಿದೆ. 250 ಶೌಚಾಲಯಗಳು ಮತ್ತು 75  ಇ-ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. 42 ಆಟೋ ಟಿಪ್ಪರ್, 6-7 ಕಾಂಪ್ಯಾಕ್ಟರ್‌ಗಳನ್ನು ಸ್ವಚ್ಛತೆಗಾಗಿ ಇಡಲಾಗಿದೆ. ಅಲ್ಲದೇ, 80 ಮಂದಿಯನ್ನು ಇದಕ್ಕಾಗಿ ನಿಯೋಜನೆ ಮಾಡಲಾಗಿದೆ. ಕಸದ ಸ್ವಚ್ಛತೆಗಾಗಿ 200 ಖಾಸಗಿ ಕಾರ್ಮಿಕರು ಕಾರ್ಯ ನಿರ್ವಹಿಸಲಿದ್ದಾರೆ. ಅರ್ಧ ಎಕರೆಯಲ್ಲಿ ನಾಲ್ಕು ಅಡುಗೆ ಮನೆ ನಿರ್ಮಿಸಲಾಗಿದೆ. ನೀರಿನ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಮಾಡಲಾಗಿ ದೆ.  16 ಲಕ್ಷ ನೀರಿನ ಪ್ಯಾಕೆಟ್ ತರಿಸಲಾಗುತ್ತಿದೆ.

ಇದರ ಉಸ್ತುವಾರಿಯನ್ನು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿರ್ವಹಿಸಲಿದ್ದು, ಅವರೊಂದಿಗೆ ಸುಮಾರು ಎರಡು ಸಾವಿರ ಕಾರ್ಯಕರ್ತರು ಕಾರ್ಯ ನಿರ್ವಹಿಸಲಿದ್ದಾರೆ. ಸಮಾವೇಶಕ್ಕೆ ಆಗಮಿಸುವವರು ಸಾಮಾಜಿಕ ಜಾಲತಾಣದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ 15 ಸಾವಿರಕ್ಕೂ ಹೆಚ್ಚು ಟೆಕ್ಕಿಗಳು ನೋಂದಣಿ ಮಾಡಿಕೊಂಡಿದ್ದಾರೆ.

click me!