ಕುಟುಂಬ ರಾಜಕಾರಣ ಅಪವಾದ ತಪ್ಪಿಸಲು ಬಿಜೆಪಿ ಹೊಸ ತಂತ್ರ!

By Web DeskFirst Published Apr 2, 2019, 4:31 PM IST
Highlights

ಇತ್ತೀಚಿಗೆ ಕುಟುಂಬ ರಾಜಕಾರಣದ ಬಗ್ಗೆ ಅಪಸ್ವರಗಳೆದ್ದಿದೆ. ಇಂತಹ ಅಪವಾದಗಳಿಂದ ತಪ್ಪಿಸಿಕೊಳ್ಳಲು ಬಿಜೆಪಿ ಹೊಸ ತಂತ್ರ ಬಳಸಿದೆ. ಏನದು? ಇಲ್ಲಿದೆ ನೋಡಿ. 

ಈಗ ಮಹಾರಾಷ್ಟ್ರದಲ್ಲಿ ವಾಟ್ಸ್‌ಆ್ಯಪ್‌ನಲ್ಲಿ, ಮಕ್ಕಳ ಕಳ್ಳರು ಓಡಾಡುತ್ತಿದ್ದಾರೆ ಹುಷಾರು ಎಂಬ ಜೋಕ್ ಚಾಲ್ತಿಯಲ್ಲಿದೆ. ಇದಕ್ಕೆ ಕಾರಣ ಬಿಜೆಪಿ 15 ದಿನಗಳಲ್ಲಿ ಬಹಳಷ್ಟು ಕಾಂಗ್ರೆಸ್ ನಾಯಕರ ಪುತ್ರರನ್ನು ಸೆಳೆದು ಟಿಕೆಟ್ ಕೊಡುತ್ತಿರುವುದು. 

ಬೆಂಗಳೂರು ಗ್ರಾಮಾಂತರದಿಂದ ರಾಹುಲ್ ಗಾಂಧಿ ಏಕೆ ಸ್ಪರ್ಧಿಸಲಿಲ್ಲ?

ವಿಧಾನಸಭೆ ವಿಪಕ್ಷ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಪುತ್ರ ಸುಜಯನನ್ನು ಸೆಳೆದ ಬಿಜೆಪಿ ಮೊದಲ ಪಟ್ಟಿಯಲ್ಲಿಯೇ ಶಿರಡಿ ಸೀಟು ಕೊಟ್ಟಿತ್ತು. ನಂತರ ಕಾಂಗ್ರೆಸ್ ಸಂಸದ ವಿಜಯ ಸಿಂಗ್ ಮೋಹಿತೆ ಪಾಟೀಲ್ ಮಗ ರಂಜಿತ್‌ನನ್ನು ಕರೆದುಕೊಂಡು ಹೋಗಿ ಮುಂದೆ ಸೋಲಾಪುರಕ್ಕೆ ಶಿಂಧೆ ಮಗಳ ವಿರುದ್ಧ ಎಂಎಲ್‌ಎ ಟಿಕೆಟ್ ಕೊಡುವುದಾಗಿ ಹೇಳಿದೆ. 

ನರೇಂದ್ರ ಮೋದಿ ಉತ್ತರಾಧಿಕಾರಿ ಯಾರು?

ಹೀಗೆ ಹಲವಾರು ಜಿಲ್ಲಾ ನಾಯಕರ ಪುತ್ರರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಿದ್ದಾರೆ. ನಾಯಕರ ಮಕ್ಕಳು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಬಂದು ಟಿಕೆಟ್ ಪಡೆದರೆ ಅದು ವಂಶವಾದ ಅಲ್ಲ ಎಂದು ಬಿಜೆಪಿ ತರ್ಕ ಇರಬಹುದೋ ಏನೋ ಯಾರಿಗೆ ಗೊತ್ತು. 

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ 

click me!