
ಅದೃಷ್ಟ ಅಂದರೆ 28 ವರ್ಷದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರದ್ದು. ಗೆದ್ದು ಬಂದ 4 ದಿನದಲ್ಲೇ ದಿಲ್ಲಿಯ ಆಂಗ್ಲ ಮಾಧ್ಯಮಗಳು ತೇಜಸ್ವಿ ಬೆನ್ನುಹತ್ತಿದ್ದು, ನಿರರ್ಗಳ ಭಾಷೆ ಬಳಸುವ ಮತ್ತು ಸ್ಫುರದ್ರೂಪಿ ಆಗಿರುವ ತೇಜಸ್ವಿ ಸೂರ್ಯರನ್ನು ತಮ್ಮ ತಮ್ಮ ಸ್ಟುಡಿಯೋಗಳಿಗೆ ಚರ್ಚೆಗೆ ಒಯ್ಯಲು ಹಾತೊರೆಯುತ್ತಿವೆ.
ದಕ್ಷಿಣದಿಂದ ಅಸ್ಖಲಿತ ಇಂಗ್ಲಿಷ್ ಮಾತನಾಡುವ ಬಿಜೆಪಿ ವಕ್ತಾರ ಒಬ್ಬ ದಿಲ್ಲಿ ಮಾಧ್ಯಮಗಳಿಗೆ ಬೇಕಿತ್ತು. ಆ ಶೂನ್ಯವನ್ನು ತೇಜಸ್ವಿ ತುಂಬಲಿದ್ದಾರೆ. ಇಲ್ಲವಾದರೆ ಬಹುತೇಕ ದಕ್ಷಿಣದ ನಾಯಕರಿಗೆ ಹಿಂದಿ ಕೂಡ ಹರಕುಮುರುಕು, ಇಂಗ್ಲಿಷ್ ಕೂಡ ಅಷ್ಟಕಷ್ಟೇ. ತೇಜಸ್ವಿಗೆ ಆ ಸಮಸ್ಯೆಯಿಲ್ಲ. ಆದರೆ ದಿಲ್ಲಿ ಆಂಗ್ಲ ಮಾಧ್ಯಮಗಳು ಎಷ್ಟುಬೇಗ ತಲೆ ಮೇಲೆ ಮೆರೆಸುತ್ತವೆಯೋ ಅಷ್ಟೇ ಬೇಗ ಬಿಸಾಕುತ್ತವೆ. ಆ ಬಗ್ಗೆ ಗಮನ ಇರುವುದು ಒಳ್ಳೆಯದು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.