ಪಿಸ್ತೂಲ್ ಪರವಾನಗಿ ಕೋರಿ ಕರಂದ್ಲಾಜೆ ಅರ್ಜಿ

Published : Dec 17, 2017, 10:14 AM ISTUpdated : Apr 11, 2018, 12:43 PM IST
ಪಿಸ್ತೂಲ್ ಪರವಾನಗಿ ಕೋರಿ ಕರಂದ್ಲಾಜೆ ಅರ್ಜಿ

ಸಾರಾಂಶ

ಪಿಎಫ್‌'ಐ ಹಾಗೂ ಕೆಎಫ್‌'ಡಿ ಸಂಘಟನೆಗಳನ್ನು ನಿಷೇಧಿಸುವಂತೆ ಶೋಭಾ ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಆತ್ಮರಕ್ಷಣೆಗಾಗಿ ಪಿಸ್ತೂಲ್ ಹೊಂದಲು ಪರವಾನಗಿ ಬೇಕೆಂದು ಅರ್ಜಿ ಯಲ್ಲಿ ಉಲ್ಲೇಖಿಸಿದ್ದಾರೆ.

ಬೆಂಗಳೂರು(ಡಿ.17): ಜೀವ ಬೆದರಿಕೆ ಹಾಗೂ ಆತ್ಮ ರಕ್ಷಣೆ ಹಿನ್ನೆಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಪಿಸ್ತೂಲ್ ಪರವಾನಗಿ ಕೋರಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ.

ಶೋಭಾ ಕರಂದ್ಲಾಜೆ ಅವರು ರಾಜ್ಯದಲ್ಲಿ ನಡೆಯುವ ಹಲವು ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ಹತ್ಯೆ ಹಿಂದೆ ಭಯೋತ್ಪಾದಕರ ಕೈವಾಡ ಇದೆ. ಹೀಗಾಗಿ ಪಿಎಫ್‌'ಐ ಹಾಗೂ ಕೆಎಫ್‌'ಡಿ ಸಂಘಟನೆಗಳನ್ನು ನಿಷೇಧಿಸುವಂತೆ ಶೋಭಾ ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಆತ್ಮರಕ್ಷಣೆಗಾಗಿ ಪಿಸ್ತೂಲ್ ಹೊಂದಲು ಪರವಾನಗಿ ಬೇಕೆಂದು ಅರ್ಜಿ ಯಲ್ಲಿ ಉಲ್ಲೇಖಿಸಿದ್ದಾರೆ.

ಶೋಭಾ ಅವರು ಸಲ್ಲಿಸಿರುವ ಅರ್ಜಿ ಹಾಗೂ ಕೇಂದ್ರ ಗುಪ್ತದಳದ ವರದಿ, ಕೆಲ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬನ್ನೇರುಘಟ್ಟದಲ್ಲಿ ಅಪರೂಪದ ಅತಿಥಿ, ಆಫ್ರಿಕಾದಿಂದ ಆಗಮಿಸಿದ ಕ್ಯಾಪುಚಿನ್ ಕೋತಿಗಳು!
ದೇಶದಲ್ಲಿ ದಯನೀಯ ಸ್ಥಿತಿಗಿಳಿದ ಅನ್ನದಾತ, ಸಾಲ ಮರುಪಾವತಿಸಲು ಕಿಡ್ನಿ ಮಾರಿದ ರೈತ!