ಶ್ರೀರಾಮಗೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಮನೆ ಕೊಡಿ: ಬಿಜೆಪಿ ಸಂಸದ

By Web DeskFirst Published Dec 29, 2018, 11:21 AM IST
Highlights

 ‘ರಾಮ ಲಲ್ಲಾ’(ರಾಮನ ವಿಗ್ರಹ)ನಿಗೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂದು ಬಿಜೆಪಿ ಸಂಸದರೊಬ್ಬರು ಆಗ್ರಹಿಸಿದ್ದಾರೆ.

ನವದೆಹಲಿ[ಡಿ.29]: ಉತ್ತರ ಪ್ರದೇಶದ ವಿವಾದಿತ ಅಯೋಧ್ಯೆಯಲ್ಲಿ ಮೇಲ್ಛಾವಣಿ ಇಲ್ಲದ ಟೆಂಟ್‌ನಲ್ಲಿರುವ ‘ರಾಮ ಲಲ್ಲಾ’(ರಾಮನ ವಿಗ್ರಹ)ನಿಗೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಆಡಳಿತಾರೂಢ ಪಕ್ಷದ ಸಂಸದ ಹರಿ ನಾರಾಯಣ ರಾಜ್‌ಭರ್‌ ಆಗ್ರಹಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಮಾತನಾಡಿದ ರಾಜ್‌ಭರ್‌ ಅವರು, ‘ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ.

ಹಾಗೆಯೇ, ಟೆಂಟ್‌ನಲ್ಲಿ ತೀವ್ರ ಗಾಳಿ, ಮಳೆ ಮತ್ತು ಭಾರೀ ಬಿಸಿಲಿನಲ್ಲಿರುವ ರಾಮಲಲ್ಲಾಗೂ ಒಂದು ಮನೆ ಕಟ್ಟಿಸಿಕೊಡಬೇಕು,’ ಎಂದು ಆಗ್ರಹಿಸಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಪರ ಧ್ವನಿ ವ್ಯಕ್ತಪಡಿಸಿದ್ದಾರೆ.

click me!