'ಮಸೀದಿ ಕೆಡವಿ, ಅಲ್ಲಿ ಹಿಂದೂ ದೇವರುಗಳ ವಿಗ್ರಹ ಸಿಗದಿದ್ದರೆ ನನ್ನನ್ನ ನೇಣಿಗೇರಿಸಿ'

By Web DeskFirst Published Nov 24, 2018, 7:47 PM IST
Highlights

ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್  ಅವರು ನವದೆಹಲಿಯಲ್ಲಿರುವ ಜಾಮಾ ಮಸೀದಿ ಬಗ್ಗೆ ಮಾತನಾಡಿ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. 

ನವದೆಹಲಿ, [ನ.24]: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮತ್ತೊಂದೆಡೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಗಳು ಜೋರಾಗಿವೆ.  

ಈ ನಡುವೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ನವದೆಹಲಿಯಲ್ಲರಿವ ಜಾಮಾ ಮಸೀದಿ ಬಗ್ಗೆ ವಿವದಾತ್ಮ ಹೇಳಿಕೆ ನೀಡಿದ್ದು, ಈ ಹೇಳಿಕೆ ಫುಲ್ ವೈರಲ್ ಆಗಿದೆ.

ನವದೆಹಲಿಯಲ್ಲಿರುವ ಜಾಮಾ ಮಸೀದಿಯನ್ನು ಕೆಡವಿ, ಅದರಡಿಯಲ್ಲಿ ಹಿಂದು ದೇವರ ವಿಗ್ರಹಗಳು ಲಭಿಸದಿದ್ದರೆ ನನ್ನನ್ನು ನೇಣಿಗೇರಿಸಿ ಎಂದು ಮಹಾರಾಜ್ ಹೇಳಿದ್ದಾರೆ.

: BJP MP Sakshi Maharaj says in Unnao "Rajneeti mein jab aaya to pehla mera statement tha Mathura mein, Ayodhya Mathura Kashi ko chhodo Dilli ki Jama Masjid todo, agar seedhion mein murtiyaan na nikle to mujhe faansi pe latka dena." (22.11.2018) pic.twitter.com/9pywDQ2flB

— ANI UP (@ANINewsUP)

ಕೆಲವು ವರ್ಷಗಳ ಹಿಂದೆ ಸಾಕ್ಷಿ ಮಹಾರಾಜ್ ಅವರು, ಜಾಮಾ ಮಸೀದಿ ಹಿಂದೆ ದೇಗುಲವಾಗಿತ್ತು. ಮೊಘಲರು ಅದನ್ನು ಕೆಡವಿ, ಮಸೀದಿ ನಿರ್ವಿುಸಿದ್ದಾರೆ. ಹಾಗಾಗಿ, ಅಲ್ಲಿ ಹುಡುಕಿದರೆ, ದೇವರ ವಿಗ್ರಹಗಳು ಸಿಗುತ್ತವೆ ಎಂದು ಹೇಳಿದ್ದರು. 

ಈಗಲೂ ತಾವು ಆ ಮಾತಿಗೆ ಬದ್ಧವಾಗಿರುವುದಾಗಿ  ಘಂಟಾಘೋಷವಾಗಿ  ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧವಾಗಿದೆ. ಪಕ್ಷದ ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

click me!