ಅಯ್ಯಪ್ಪ ಭಕ್ತರಿಗೆ ಇದೀಗ ಹೊಸ ಆತಂಕ

By Web DeskFirst Published Nov 24, 2018, 1:24 PM IST
Highlights

ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ದೇಶದ ವಿವಿಧೆಡೆಯಿಂದ ಭಕ್ತಾದಿಗಳು ಆಗಮಿಸುತ್ತಿರುವ ಹೊತ್ತಿನಲ್ಲೇ ಅವರಿಗೆ ಇದೀಗ ಮತ್ತೊಂದು ಆತಂಕ ಎದುರಾಗಿದೆ.

ನಿಲಾಕ್ಕಲ್(ಕೇರಳ): ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ದೇಶದ ವಿವಿಧೆಡೆಯಿಂದ ಭಕ್ತಾದಿಗಳು ಆಗಮಿಸುತ್ತಿರುವ ಹೊತ್ತಿನಲ್ಲೇ, ಕುಡಿದ ಮತ್ತಿನಲ್ಲಿರುವ ಆನೆಗಳ ಹಿಂಡು ಭಕ್ತಾದಿಗಳ ಮೇಲೆ ಎರಗಬಹುದು ಎಂಬ ಆತಂಕ ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿ
ಗಳಲ್ಲಿ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹಗಲು-ರಾತ್ರಿಯೆನ್ನದೇ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. 

ಟ್ರಾವಂಕೂರು ದೇವಸ್ವಂ ಮಂಡಳಿಯ ಪಾಕಶಾಲೆ ಯಿಂದ ಬಿಡುಗಡೆಯಾಗುವ ಕಾಕಂಬಿಯನ್ನು ಪಕ್ಕದಲ್ಲೇ ಇರುವ ಗುಂಡಿಗೆ ಬಿಡಲಾ ಗುತ್ತದೆ. ಆದರೆ ಈ ವರ್ಷ ಭಾರೀ ಮಳೆಯಿಂದಾಗಿ, ಗುಂಡಿಯಲ್ಲಿನ ಮತ್ತು ಬರಿಸುವ ಸಾಮರ್ಥ್ಯ ಹೊಂದಿರುವ ಕಾಕಂಬಿ ಹೊರಗೆ ಹರಿದು ಹೋಗುತ್ತಿದೆ. 

ಇದನ್ನು ಪತ್ತೆ ಮಾಡಿರುವ ಆನೆಗಳನ್ನು ಕಾಕಂಬಿ ಮಿಶ್ರಿತ ನೀರು ಸೇವನೆ ಮಾಡು ತ್ತಿವೆ. ಪರಿಣಾಮ ಮತ್ತೇರಿದ ಸ್ಥಿತಿಗೆ ತಲುಪಿರುವ ಆನೆಗಳು ಅರಣ್ಯ ಅಧಿಕಾರಿಗಳನ್ನು ಕಂಡರೂ ಹೆದರುತ್ತಿಲ್ಲ. ಹೀಗಾಗಿ ಅವು ಅಯ್ಯಪ್ಪ ಭಕ್ತರ ಮೇಲೂ ದಾಳಿ ನಡೆಸಬಹುದು ಎಂಬ ಕಾರಣಕ್ಕಾಗಿ ಅರಣ್ಯಾಧಿಕಾರಿಗಳು ಕಣ್ಣಲ್ಲಿ ಕಣ್ಣಿಟ್ಟು ಆನೆಗಳನ್ನು ಕಾವಲು ಕಾಯುತ್ತಿದ್ದಾರೆ.

click me!