
ನವದೆಹಲಿ[ಮೇ.27]: ಗುರುಗ್ರಾಮದಲ್ಲಿ ಟೊಪ್ಪಿ ತೆಗೆ ಹಾಗೂ ಜೈ ಶ್ರೀ ರಾಮ್ ಹೇಳು ಎಂದು ಒತ್ತಾಯಿಸಿ ಮುಸ್ಲಿಂ ವ್ಯಕ್ತಿಯ ಮೇಲೆ ನಡೆಸಿದ ಪುಂಡರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಸಂಸದ ಗೌತಮ್ ಗಂಭೀರ್ ಒತ್ತಾಯಿಸಿದ್ದಾರೆ.
ಭರ್ಜರಿಯಾಗಿ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ ಗಂಭೀರ್
ಇತ್ತೀಚೆಗಷ್ಟೇ ಪೂರ್ವದೆಹಲಿಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಬೇರಿ ಬಾರಿಸಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗಂಭೀರ್, ನಮ್ಮದು ಜಾತ್ಯಾತೀತ ರಾಷ್ಟ್ರ. ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಮುಸ್ಲಿಂ ವ್ಯಕ್ತಿಗೆ ಟೊಪ್ಪಿ ತೆಗಿ, ಜೈ ಶ್ರೀರಾಮ್ ಹೇಳು ಎಂದು ಒತ್ತಾಯಿಸಿರುವುದು ನಿಜಕ್ಕೂ ಶೋಚನೀಯ ಸಂಗತಿ. ಈ ಘಟನೆಯಲ್ಲಿ ಭಾಗಿಯಾದರ ವಿರುದ್ಧ ಗುರುಗ್ರಾಮದ ಸಂಬಂಧಪಟ್ಟ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜತೆಗೆ ಭಾರತವು ಜಾವೇದ್ ಅಖ್ತರ್ ಬರೆದ ಓ ಪಾಲನ್ ಹಾರೆ, ನಿರ್ಗುಣ್ ಔರ್ ನ್ಯಾರೇ ಎಂಬ ಪ್ರಾರ್ಥನೆ ಬರೆದ ಹಾಗೆಯೇ ರಾಕೇಶ್ ಓಂ ಪ್ರಕಾಶ್ ಮೆಹ್ರಾ ದಿಲ್ಲಿ 6 ಚಿತ್ರದಲ್ಲಿ ಅರ್ಜ್ಹಿಯಾ ಹಾಡನ್ನು ಬರೆದಿದ್ದನ್ನು ನೋಡಿದ್ದೇವೆ ಎಂದು ಹೇಳಿದ್ದಾರೆ.
ಗೌತಮ್ ಗಂಭೀರ್ ಮೂರ್ಖ-ನೂತನ ಸಂಸದನ ತಿವಿದ ಶಾಹಿದ್ ಆಫ್ರಿದಿ!
ಇನ್ನೊಂದು ಟ್ವೀಟ್’ನಲ್ಲಿ ಜಾತ್ಯತೀತತೆ ಎಂದರೆ ಪ್ರಧಾನ ಮಂತ್ರಿ ನರೇಂದ್ರ ಮಂತ್ರಿ ಅವರ, ಸಬ್ ಕಾ ಸಾತ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸವೇ ಆಗಿದೆ. ಈ ವಿಚಾರವನ್ನು ಬರೀ ಗುರುಗ್ರಾಮ ಘಟನೆಗೆ ಸೀಮಿತಗೊಳಿಸುತ್ತಿಲ್ಲ. ಜಾತಿ-ಧರ್ಮದ ಆಧಾರದ ಮೇಲೆ ನಡೆಸಲಾಗುವ ದಬ್ಬಾಳಿಕೆಗಳಾಗುತ್ತಿರುವುದು ಶೋಚನೀಯವಾಗಿದೆ. ಭಾರತದ ಸತ್ವವು ಸಹಿಷ್ಣುತೆ ಹಾಗೂ ಸಹಬಾಳ್ವೆಯ ಆಧಾರದ ಮೇಲೆ ನಿಂತಿದೆ ಎಂದು ಹೇಳಿದ್ದಾರೆ.
ರಾಷ್ಟ್ರರಾಜಧಾನಿಯ ಸಮೀಪದಲ್ಲೇ 25 ವರ್ಷದ ಮುಸ್ಲಿಂ ವ್ಯಕ್ತಿಯು ನಮಾಝ್ ಮುಗಿಸಿ ವಾಪಾಸ್ ಆಗುವ ವೇಳೆ 5 ಜನರ ಗುಂಪು ಟೊಪ್ಪಿ ತೆಗೆಯಲು ಹಾಗೂ ಜೈ ಶ್ರೀರಾಮ್ ಎಂದು ಹೇಳಲು ಒತ್ತಾಯಿಸಿರುವುದಾಗಿ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.