
ಸಿಡ್ನಿ (ಏ. 02): ಚೆಂಡು ವಿರೂಪ ಪ್ರಕರಣದ ರೂವಾರಿ ಆಸ್ಟ್ರೇಲಿಯಾದ ಮಾಜಿ ಉಪನಾಯಕ ಡೇವಿಡ್ ವಾರ್ನರ್ ಪತ್ನಿ ಕ್ಯಾಂಡಿಸ್ ನನ್ನ ಕಡೆಯಿಂದ ತಪ್ಪಾಗಿದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸಿಡ್ನಿ ಸಂಡೇ ಟೆಲಿಗ್ರಾಫ್‌ಗೆ ನೀಡಿದ ಸಂದರ್ಶನದಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ವಾರ್ನರ್ ಪತ್ನಿ ಕ್ಯಾಂಡಿಸ್ ತಮ್ಮನ್ನೇ ದೂಷಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ತೀವ್ರ ಮುಜುಗರಕ್ಕೀಡಾಗಿದ್ದೇನು. ಈ ಪ್ರಕರಣ ನನ್ನನ್ನು ಕೊಲ್ಲುತ್ತಿದೆ ಎಂದಿದ್ದಾರೆ. ಚೆಂಡು ವಿರೂಪಗೊಳಿಸುವುದಕ್ಕೂ ಮುನ್ನ ಮೊದಲ ಟೆಸ್ಟ್‌ನಲ್ಲಿ ತಮ್ಮ ಪತಿ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕ್ವಿಂಟನ್ ಡಿ ಕಾಕ್ ವಾರ್ನರ್ ವಿರುದ್ಧ ಜಗಳಕ್ಕಿಳಿದಿದ್ದರು. ಈ ಮೂಲಕ ನಾನು ನನ್ನ ಗಂಡನ ತಪ್ಪನ್ನು ಸಮರ್ಥಿಸಲು ಬಯಸುತ್ತಿಲ್ಲ. ಆದರೆ ವಾರ್ನರ್ ನನ್ನನ್ನು ಮತ್ತು ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕ್ವಿಂಟನ್ ಅವರೊಂದಿಗಿನ ವಿವಾದವನ್ನು ಕ್ಯಾಂಡಿಸ್ ನೆನಪಿಸಿಕೊಂಡರು. ಆದರೆ ವಾರ್ನರ್ ಆಟವನ್ನಾಡದೆ ಮನೆಗೆ ಬಂದು ನನ್ನನ್ನು ನೋಡಿ ಕಣ್ಣೀರು ಹಾಕುವ ದೃಶ್ಯವನ್ನು ನೋಡಲಾಗುವುದಿಲ್ಲ. ಹಾಗೆ ಮಗಳು
ನನ್ನನ್ನು ನೋಡಿದರೂ ನನ್ನ ತಲೆಯಲ್ಲಿ ಮತ್ಯಾವುದೊ ಯೋಚನೆ ಬಂದು ನೋವನ್ನುಂಟು ಮಾಡುತ್ತಿದೆ ಎಂದು ಕ್ಯಾಂಡಿಸ್ ಕಳೆದ ಕೆಲ ದಿನಗಳಿಂದ ತಮಗಾಗುತ್ತಿರುವ ನೋವನ್ನು ಬಿಚ್ಚಿಟ್ಟಿದ್ದಾರೆ.
ಈ ಪ್ರಕರಣದಿಂದಾಗಿ ಜನರು ನಮ್ಮನ್ನು ನೋಡುತ್ತಿರುವ ದೃಷ್ಟಿಕೋನ ಬದಲಾಗಿದೆ. ಅಭಿಮಾನಿಗಳು ನಮ್ಮನ್ನ ನೋಡಿ ನಗುತ್ತಿದ್ದಾರೆ ಎಂದು ಅನಿಸುತ್ತಿದೆ ಎಂದು ಕ್ಯಾಂಡಿಸ್ ಹೇಳಿದರು. ಚೆಂಡು ವಿರೂಪಗೊಳಿಸಿದ ತಪ್ಪಿಗೆ ಶನಿವಾರ ಕ್ಷಮೆ ಕೇಳಿದ್ದ ವಾರ್ನರ್, ಈ ಪ್ರಕರಣದಿಂದ ಉದ್ಬವಿಸಿರುವ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಇನ್ನೂ ಸಿಕ್ಕಿಲ್ಲ ಎಂದು ಟ್ವೀಟ್ ಮಾಡಿದ್ದರು. ಸಮಯ ಬಂದಾಗ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುವುದಾಗಿಯೂ ವಾರ್ನರ್ ಹೇಳಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಪತಿ ವಾರ್ನರ್ ಅವರನ್ನು ಇಲ್ಲಿ ಬಲಿಪಶು ಮಾಡಲಾಗಿದೆ
ಎಂದು ಕ್ಯಾಂಡಿಸ್ ಹೇಳಿದ್ದಾರೆ.
ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದು, ತೀವ್ರವಾಗಿ ಮನನೊಂದಿರುವ ತಮ್ಮ ಪತಿ ವಾರ್ನರ್ ಅವರ ಮೇಲೆ ಅನುಕಂಪವನ್ನು ತೋರಿಸಬೇಕು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಅಭಿಮಾನಿಗಳಲ್ಲಿ ಕ್ಯಾಂಡಿಸ್ ಬೇಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.