’ಹಾಯ್ ಬೆಂಗಳೂರು’ ಹೆಸರಿನಲ್ಲಿ ಶಾಸಕಗೆ ಬ್ಲಾಕ್‌ಮೇಲ್; ಪತ್ರಕರ್ತ ಬಂಧನ

By Web DeskFirst Published Apr 19, 2019, 4:12 PM IST
Highlights

ಹಾಯ್ ಬೆಂಗಳೂರು ಪತ್ರಿಕೆ ಹೆಸರಿನಲ್ಲಿ  ಮಾಜಿ ಸಚಿವ ರಾಮ್‌ದಾಸ್‌ಗೆ ಬ್ಲಾಕ್‌ಮೇಲ್ | ಪತ್ರಕರ್ತ ಪ್ರದೀಪ್ ಬಂಧನ | ರವಿ ಬೆಳಗೆರೆ ಹೆಸರು ಬಲವಾಗಿ ಕೇಳಿ ಬರುತ್ತಿದೆ. 

ಮೈಸೂರು (ಏ. 19): 'ಹಾಯ್ ಬೆಂಗಳೂರು' ಪತ್ರಿಕೆ ಹೆಸರಿನಲ್ಲಿ ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕ ರಾಮದಾಸ್ ಗೆ ಬ್ಲಾಕ್ ಮೇಲ್ ಮಾಡಲಾಗಿದ್ದು,  ಬ್ಲಾಕ್ ಮೇಲೆ ಮಾಡಿದ ಪತ್ರಕರ್ತನನ್ನು ಬಂಧಿಸಲಾಗಿದೆ. 

ಸಚಿವ ರಾಮ್ ದಾಸ್ ಗೆ 25 ಲಕ್ಷ ಹಣಕ್ಕೆ ಮೈಸೂರು ಪತ್ರಕರ್ತ ಪ್ರದೀಪ್ ಹಾಗೂ ಮೈಸೂರು ಜಯದೇವ ಆಸ್ಪತ್ರೆಯ ವೈದ್ಯ ಮಧು ಎಂಬುವವರು ಡಿಮ್ಯಾಂಡ್ ಇಟ್ಟಿದ್ದಾರೆ.  ಹಣ ಕೊಡುವ ಸಂಧರ್ಭದಲ್ಲಿ‌ ಪೊಲೀಸರ ಮೂಲಕ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. 

"ಅಣ್ಣ ಹೆಣ್ಣು ಪ್ರಾಯ, ತಮ್ಮ ಮಣ್ಣು ಪ್ರಾಯ" ಎಂಬ ಶೀರ್ಷಿಕೆ ಅಡಿಯಲ್ಲಿ ಲೇಖನ ಪ್ರಕಟವಾಗಿತ್ತು. ಬ್ಲಾಕ್ ಮೇಲ್ ಮಾಡಿದ್ದ ಪ್ರದೀಪ್ ಬಂಧನವಾಗಿದ್ದು  ಡಾ.ಮಧುಗೆ ಜಾಮೀನು ನೀಡಲಾಗಿದೆ.  ಪಬ್ಲೀಷರ್ ರವೀಶ್, ಎಕ್ಸಿಕ್ಯೂಟಿವ್ ಎಡಿಟರ್ ಶರತ್, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕುವೆಂಪು ನಗರ ಪೊಲೀಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಡೀ‌ ಪ್ರಕರಣದಲ್ಲಿ ಪತ್ರಕರ್ತ ರವಿ ಬೆಳಗೆರೆ ಹೆಸರು ಪದೇ ಪದೇ ಕೇಳಿ ಬಂದಿದೆ.

‘ ಈ ಬಗ್ಗೆ ನಾನು ರವಿ ಬೆಳಗೆರೆಯವರಿಗೆ ಸ್ಪಷ್ಟನೆ ನೀಡುವಂತೆ ಪತ್ರ ಬರೆದಿದ್ದೇನೆ. ಇದು ಚುನಾವಣೆಯಲ್ಲಿ ನನ್ನನ್ನು ಕುಗ್ಗಿಸುವ ತಂತ್ರ. ಈ ಬಗ್ಗೆ ಮತ್ತಷ್ಟು ತನಿಖೆಯಾಗಬೇಕು. ನನ್ನ ಆಪ್ತ ಸಹಾಯಕ ಮುದ್ದು ಕೃಷ್ಣರಿಂದ ದೂರು ದಾಖಲಿಸಿದ್ದೇನೆ‘ ಎಂದು ಶಾಸಕ ರಾಮದಾಸ್ ಹೇಳಿಕೆ.

click me!