ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಯತ್ನಾಳ್/ ನಾನು ಪಕ್ಷದ ವಿರುದ್ಧವಾಗಿ ಎಲ್ಲಿಯೂ ಮಾತನಾಡಿಲ್ಲ/ ನನ್ನಿಂದ ಪಕ್ಷದ ಘನತೆಗೆ ಧಕ್ಕೆ ಆಗಿಲ್ಲ/ ನೆರೆ ಸಂತ್ರಸ್ತರ ನೆರವಿಗೆ ನಿಂತಿದ್ದೇನೆ
ವಿಜಯಪುರ[ಅ. 08] ಸಂತ್ರಸ್ತರಿಗಾಗಿ ಶಾಸಕ ಯತ್ನಾಳ್ ಪತ್ರ ಸಮರ ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮೀತ್ ಶಾ, ಬಿಜೆಪಿ ಕಾರ್ಯಕಾರಿ ಸಮಿತಿ ಅಧ್ಯಕ್ಷ ಜೆ. ಪಿ.ನಡ್ಡಾಗೆ ನೇರವಾಗಿ ಪತ್ರ ಬರೆದಿದ್ದಾರೆ,
ಹಾಗಾದರೆ ಈ ಪತ್ರದಲ್ಲಿ ಯತ್ನಾಳ್ ಏನು ಹೇಳಿದ್ದಾರೆ? ಅಕ್ಟೋಬರ್ 5 ರಂದು ಬರೆದಿರುವ ಪತ್ರದಲ್ಲಿನ ಅವರ ಮಾತುಗಳನ್ನು ಕೇಳಿ..
undefined
ವಿಜಯಪುರ ನಗರ ಬಿಜೆಪಿ ಶಾಸಕರು ಪತ್ರ ಬರೆದಿದ್ದು, ಕರ್ನಾಟಕದಲ್ಲಿ ನೆರೆಯಿಂದಾಗಿ ಸಾಕಷ್ಟು ಜನ್ರ ಸಂತ್ರಸ್ತರಾಗಿದ್ದಾರೆ. ಇಲ್ಲಿನ ಜನರೂ ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹಾಗಾಗಿ ತಾವು ಆದಷ್ಟು ನೆರೆ ಪರಿಹಾರವನ್ನು ನೀಡಬೇಕು ಎಂದು ನಾನೊಬ್ಬ ಜನಪ್ರತಿನಿಧಿಯಾಗಿ ಆಗ್ರಹಿಸಿದ್ದೆ.
ಸಂತ್ರಸ್ತರ ಪರವಾಗಿ ಮಾತನಾಡಿದ್ದ ಯತ್ನಾಳ್ ಗೆ ನೋಟಿಸ್
ಇದರಲ್ಲಿ ಯಾವುದೇ ರಾಜಕೀಯ ಹೇಳಿಕೆ ವಿಚಾರವಿರಲಿಲ್ಲ. ನಾನು ಹಾಗೂ ಕರ್ನಾಟಕದ ಜನತೆ ನಿಮ್ಮನ್ನು ಇಷ್ಟಪಡುತ್ತೇವೆ ಹಾಗೂ ಗೌರವಿಸುತ್ತೇವೆ. ಆ ಕಾರಣದಿಂದಲೇ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಅತಿ ಹೆಚ್ಚಿನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದೇವೆ. ಪ್ರಧಾನಿ ಮೋದಿ ಅವರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ನಿಮ್ಮಲ್ಲಿ ಕಂಡಿದ್ದೇವೆ. ನಿಮ್ಮಿಂದಲೇ ಇಂದು ಇಡಿ ದೇಶ ಅತ್ಯುನ್ನತವಾಗಿ ಬೆಳವಣಿಗೆ ಆಗುತ್ತಿದೆ
ನಾನು ಮಾತನಾಡಿದ್ದು ಸಂತ್ರಸ್ತರಿಗೆ ಸಹಾಯ ಮಾಡಿ ಎಂಬುದಾಗಿದೆ ಹೊರತಾಗಿ ಪಕ್ಷದ ವರ್ಚಸ್ಸು ಮತ್ತು ನಾಯಕರ ಅವಹೇಳನಕ್ಕೆ ಕಾರಣವಾಗಿಲ್ಲ. ನಾನು ನೀಡಿದ ಹೇಳಿಕೆಯಿಂದ ಪಕ್ಷದ ಘನತೆ ಹೆಚ್ಚಿದೆ ಹೊರತಾಗಿ ಪಕ್ಷಕ್ಕೆ ಧಕ್ಕೆ ಆಗಿಲ್ಲ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗಲೂ ಸಹ ನಾನು ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಿಸುವ ಸಲುವಾಗಿ ಹೋರಾಟ ಮಾಡಿದ್ದೇನೆ. ಆಗ ನಾನು ಎಂಪಿ ಸ್ಥಾನಕ್ಕೆ ರಾಜೀನಾಮೆ ಸಹ ನೀಡಲು ಮುಂದಾಗಿದ್ದೆ. ಆ ವೇಳೆ ವಾಜಪೇಯಿ ಅವರು ಸ್ಪಂದಿಸಿದ್ದರು. ಈಗಲೂ ಸಹ ನಾನು ಸಂತ್ರಸ್ತಗೆ ಪರಿಹಾರ ಸಿಗಬೇಕು ಎಂದು ಮಾತನಾಡಿದ್ದೇನೆ.
ಪಕ್ಷದ ವಿರುದ್ಧ ಹಾಗೂ ನಾಯಕರ ವಿರುದ್ಧ ಮಾತನಾಡಿಲ್ಲ. ಆದರೆ ಇದೀಗ ನನಗನ್ನಿಸುತ್ತೆ ನನ್ನ ಬಗ್ಗೆ ಕೆಟ್ಟ ಭಾವನೆ ಮೂಡುವಂತೆ ಕೆಲವರು ಹೀಗೆ ಮಾಡಿದ್ದಾರೆ. ನಾನು ನಿಮ್ಮನ್ನು ವೖಯಕ್ತಿವಾಗಿ ಭೇಟಿಯಾಗಿ ಸಂತ್ರಸ್ತರ ಕುರಿತು ವಿಷಯವನ್ನು ಮಾತನಾಡ ಬಯಸುತ್ತೇನೆ. ನಿಮ್ಮನ್ನು ಭೇಟಿಯಾಗಿ ಈ ವಿಚಾರ ಮಾತನಾಡಲು ಅವಕಾಶ ನೀಡಲು ವಿನಂತಿಸುತ್ತಿದ್ದೇನೆ ಎಂದು ಕೇಳಿಕೊಂಡಿದ್ದಾರೆ.