ಪೌರತ್ವ ಕಾಯ್ದೆ ಜಾರಿಯಿಂದ ಬಿಜೆಪಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪಕ್ಷ 90 ನಾಯಕರು ದಿಢೀರ್ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ರೇಪ್ ಆರೋಪಿಗೆ ಪ್ರಮಾಣವಚನ ಸ್ವೀಕರಿಸಲು 2 ದಿನದ ಪರೋಲ್ ಸಿಕ್ಕಿದೆ. ಸಚಿವರಾದರೂ ಮರಳಿ ಜೈಲಿಗೆ ಹೋಗಬೇಕು ಅನ್ನೋ ಆದೇಶ ಬಂದಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸಿದೆ. ಹೆಸರು ಬದಲಾಯಿಸಿಕೊಂಡ ರಚಿತಾ ರಾಮ್, ದಾಖಲೆ ಬರೆದ ಕಿಯಾ ಕಾರ್ನಿವಲ್ ಕಾರು ಸೇರಿದಂತೆ ಜನವರಿ 24ರ ಟಾಪ್ 10 ಸುದ್ದಿ ಇಲ್ಲಿದೆ.
ಅಡ್ವಾಣಿ ಜೊತೆ ಸಂಬಂಧವಿದ್ದಿದ್ದು ನಿಜ, 'ರಾ' ನಿಂದ ಬಚಾವ್ ಮಾಡಿದ್ದೇ ಅವರು: ಮುತ್ತಪ್ಪ ರೈ
ಮುತ್ತಪ್ಪ ರೈನಂತ ವ್ಯಕ್ತಿ ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟೋದು ಇಲ್ಲ. ನಾನು ಇದುವರೆಗೂ ನ್ಯಾಯಕ್ಕಾಗಿ ಹೋರಾಡಿದ್ದೇನೆ ಎನ್ನುವುದರಿಂದ ಹಿಡಿದು ಅಫಘಾನಿಸ್ತಾನದ ಜೊತೆಗಿನ ನಂಟು, ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ಜೊತೆಗಿನ ಸಂಬಂಧ, 'ರಾ' ನಿಂದ ಅವರು ಬಚಾವ್ ಮಾಡಿದ್ದು ಹೇಗೆ, ಸುತ್ತಮುತ್ತಲಿನವರಿಂದ ಆದ ಮೋಸ ಎಲ್ಲದರ ಬಗ್ಗೆ ಥ್ರಿಲ್ಲಿಂಗ್ ವಿಚಾರವನ್ನು ಸುವರ್ಣ ನ್ಯೂಸ್ ಜೊತೆ ಮುತ್ತಪ್ಪ ರೈ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ..!
ಪೌರತ್ವ ಕಾಯ್ದೆ ತಂದ ಬಿಜೆಪಿಗೆ ಬಿಗ್ ಶಾಕ್: 90 ನಾಯಕರ ರಾಜೀನಾಮೆ!
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ಕಾಯ್ದೆಯನ್ನು ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯ ತೀವ್ರವಾಗಿ ವಿರೋಧಿಸುತ್ತಿದೆ. ಹೀಗಿರುವಾಗ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತರು ಈ ವಿಚಾರವಾಗಿ, ಪಕ್ಷವನ್ನು ಬೆಂಬಲಿಸಬೇಕೋ ಅಥವಾ ತಮ್ಮ ಸಮುದಾಯದ ಬೆಂಬಲಕ್ಕೆ ನಿಲ್ಲಬೇಕೋ ಎಂಬ ಗೊಂದಲ್ಲಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಬಿಜೆಪಿಗೆ ಬಹುದೊಡ್ಡ ಆಘಾತವೊಂದು ಬಂದೆರಗಿದೆ.
ರೇಪ್ ಆರೋಪಿ, ಸಂಸದನಿಗೆ ಪ್ರಮಾಣವಚನಕ್ಕೆ ಸಿಕ್ತು 2 ದಿನದ ಪರೋಲ್!
ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದ BSP ಸಂಸದ ಅತುಲ್ ರಾಯ್‌ಗೆ ಅಲಹಾಬಾದ್ ಹೈಕೋರ್ಟ್ ಎರಡು ದಿನಗಳ ಪರೋಲ್ ಮಂಜೂರು ಮಾಡಿದೆ. ಅತುಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಮೇಶ್ ಸಿನ್ಹಾ ಜನವರಿ 29ರಂದು ಪೊಲೀಸ್ ಭದ್ರತೆಯೊಂದಿಗೆ ದೆಹಲಿಗೆ ತೆರಳಿ, ಬಳಿಕ 31 ಜನವರಿಯಂದು ಪ್ರಮಾಣ ವಚನ ಸ್ವೀಕರಿಸಿ ಬಳಿಕ ಮರಳಿ ಜೈಲಿಗೆ ಬರಬೇಕೆಂದು ಆದೇಶಿಸಿದ್ದಾರೆ.
ಬಿಜೆಪಿಗೆ ಜೈ ಎಂದ ರಾಜ್ ಠಾಕ್ರೆ: ಕೇಸರಿ ಧ್ವಜ ಅನಾವರಣ!
ಹಿಂದುತ್ವವನ್ನೇ ಮುಖ ಮಾಡಿಕೊಂಡ ಶಿವಸೇನೆ ಅಚ್ಚರಿಯ ರೀತಿಯಲ್ಲಿ ಕಾಂಗ್ರೆಸ್, ಎನ್‌ಸಿಪಿ ಜೊತೆ ಕೈಜೋಡಿಸಿದ ಬೆನ್ನಲ್ಲೇ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಪಕ್ಷದ ನೇತಾರ ರಾಜ್ ಠಾಕ್ರೆ ಅವರು ಸಂಪೂರ್ಣ ಕೇಸರಿ ಇರುವ ಪಕ್ಷದ ಹೊಸ ಧ್ವಜವನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಸಿಎಎ ಹಾಗೂ NRCಗೂ ಪರೋಕ್ಷ ಬೆಂಬಲ ಸೂಚಿಸಿದ್ದಾರೆ.
ಇಂಡೋ-ಕಿವೀಸ್ ಟಿ20: ರೋಚಕ ಜಯ ಸಾಧಿಸಿದ ಟೀಂ ಇಂಡಿಯಾ
ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಗೆಲುವಿನೊಂದಿಗೆ ವಿರಾಟ್ ಪಡೆ 2019ರ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡಿದೆ.
'ಏಪ್ರಿಲ್ ಡಿಸೋಜಾ' ಎಂದು ಹೆಸರು ಬದಲಾಯಿಸಿಕೊಂಡ ರಚಿತಾ ರಾಮ್!
ಚಂದನವನದಲ್ಲಿ ಹಲವು ದಿನಗಳ ಹಿಂದೆಯೇ ಸುದ್ದಿ ಆಗಿದ್ದ ರಚಿತಾ ರಾಮ್ ಅಭಿನಯದ ಮಹಿಳಾ ಪ್ರಧಾನ ಚಿತ್ರ ‘ಏಪ್ರಿಲ್’ಗೆ ಕೊನೆಗೂ ಮುಹೂರ್ತ ಮುಗಿದಿದೆ. ಇತ್ತೀಚೆಗೆ ಬೆಂಗಳೂರಿನ ಬನಶಂಕರಿ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯದ ಚಿತ್ರತಂಡ ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣಕ್ಕೆ ಚಾಲನೆ ನೀಡಿತು.
ಸ್ಯಾಂಡಲ್‌ವುಡ್ ಕೃಷ್ಣ ಅಜಯ್ ರಾವ್ 'ಸಪ್ನಾ' ಸುಂದರಿ ಇವರು..!
'Excuse Me' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಜಯ್ ರಾವ್ ಡಿಸೆಂಬರ್ 18, 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಯ ಮುದ್ದು ಮಗಳು ಈಗಾ ಸೋಷಿಯಲ್ ಮೀಡಿಯಾ ಸ್ಟಾರ್ ಕಿಡ್. ಅಷ್ಟಕ್ಕೂ ಅಜಯ್ ರಾವ್ ಪತ್ನಿ ಸಪ್ನಾ ಹೇಗಿದ್ದಾರೆ ನೋಡಿದ್ದೀರಾ? ಈ ಸ್ಟೋರಿಯಲ್ಲಿದೆ ಹೆಚ್ಚಿನ ವಿವರ.
ತೆರಿಗೆಗಳ್ಳರ ಸ್ವರ್ಗದಲ್ಲಿ ನಿತ್ಯಾ ಹಣ ವ್ಯವಹಾರ?
ಅತ್ಯಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ದೇಶದಿಂದ ಪರಾರಿಯಾಗಿ ತಲೆಮರೆಸಿಕೊಂಡಿರುವ ಬಿಡದಿ ಧ್ಯಾನಪೀಠದ ವಿವಾದಿತ ಸ್ವಾಮಿ ನಿತ್ಯಾನಂದ ತೆರಿಗೆ ಕಳ್ಳರ ಸ್ವರ್ಗವೆಂದೇ ಕುಖ್ಯಾತವಾಗಿರುವ, ಯಾವುದೇ ರೀತಿಯನ್ನು ತೆರಿಗೆ ಹೇರದ ಪೆಸಿಫಿಕ್ ಸಾಗರದ ದ್ವೀಪರಾಷ್ಟ್ರ ವಾನ್‌ವಾಟೂನಲ್ಲಿ ಬ್ಯಾಂಕ್ ಖಾತೆ ಹೊಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಒಂದೇ ದಿನದಲ್ಲಿ ದಾಖಲೆ ಬರೆದ ಇನೋವಾ ಪ್ರತಿಸ್ಪರ್ಧಿ ಕಿಯಾ ಕಾರ್ನಿವಲ್!
ಟೊಯೊಟಾ ಇನೋವಾ ಕಾರಿಗೆ ಪೈಪೋಟಿ ನೀಡಲು ಕಿಯಾ ಮೋಟಾರ್ಸ್ ಕಾರ್ನಿವಲ್ ಕಾರು ಬಿಡುಗಡೆ ಮಾಡುತ್ತಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಅಟೋ ಎಕ್ಸ್ಪೋದಲ್ಲಿ ಕಾರ್ನಿವಲ್ ಕಾರು ಬಿಡುಗಡೆಯಾಗಲಿದೆ. ಇದೀಗ ಲಾಂಚ್‌ಗೂ ಮುನ್ನವೇ ಕಾರ್ನಿವಲ್ ದಾಖಲೆ ಬರೆದಿದೆ.
ವಯಸ್ಸೇ ಆಗದ ಚೆಲುವೆಗೆ ಐದನೇ ಮದುವೆ!
ಪಮೇಲಾ ಆಂಡರ್‌ಸನ್ ಎಂಬ ಚೆಲುವೆ ಐದನೇ ಮದುವೆಯಾಗುತ್ತಿದ್ದಾಳೆ, ಪಕ್ಕದಲ್ಲಿ 23 ವರ್ಷ ವಯಸ್ಸಿನ ಮಗ. ಗಂಡನಾದವನು ಮೂವತ್ತೈದು ವರ್ಷಗಳಿಂದ ಪರಿಚಿತ. ಐದು ಮದುವೆಯಾಗಿದ್ದರೂ, ಈತ ನಾಲ್ಕನೇ ಗಂಡ. ಏನೀ ಚೆಲುವೆಯ ಜೀವನೋತ್ಸಾಹ?