
ಬೆಂಗಳೂರು[ಏ. 09] ಆದಾಯ ತೆರಿಗೆ ಇಲಾಖೆ ದಾಳಿಗೂ ಮುನ್ನವೇ ದಾಳಿಯಾಗಲಿದೆ ಎಂದು ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ಮಂಗಳವಾರ ದೂರು ನೀಡಿದೆ.
ಆಡಳಿತದಲ್ಲಿ ಕುಮಾರಸ್ವಾಮಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಜನರಿಗೆ ನೀಡಿದ್ದ ವಚನಗಳನ್ನು ಪಾಲಿಸುವುದರಲ್ಲಿ ವಿಫಲರಾಗಿದ್ದಾರೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.
'ಸಿನಿಮಾದವರ ಮೇಲಾದರೆ ಅಲ್ಲ, ಬೆಂಬಲಿಗರ ಮೇಲಾದರೆ ಹೌದು!'
ಐಟಿ ದಾಳಿ ಆಗುವ ವಿಚಾರ ನನಗೆ ಗೊತ್ತಿತ್ತು ಎಂದು ಹೇಳಿ ಸರಕಾರದ ರಹಸ್ಯ ಕಾಪಾಡುವುದರಲ್ಲಿ ಸಿಎಂ ವಿಫಲರಾಗಿದ್ದಾರೆ. 2019ರ ವೇಳೆಗೆ ಸರ್ಜಿಕಲ್ ದಾಳಿಯಾಗುತ್ತದೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷದ ವಾತಾವರಣ ನಿರ್ಮಾಣ ಆಗುತ್ತದೆ ಎಂದು ಎರಡು ವರ್ಷದ ಹಿಂದೆಯೇ ನಿವೃತ್ತ ಸೈನ್ಯಾಧಿಕಾರಿ ತನಗೆ ಹೇಳಿದ್ದರು ಎನ್ನುವ ಮೂಲಕ ರಹಸ್ಯ ಬಿಟ್ಟುಕೊಟ್ಟಿದ್ದು ಸಿಎಂ ಕುಮಾರಸ್ವಾಮಿ ಮೇಲೆ ಕಾನೂನು ಅನ್ವಯ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಮನವಿ ಸಲ್ಲಿಕೆ ವೇಳೆ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ರಾಜ್ಯ ಬಿಜೆಪಿ ಸಹವಕ್ತಾರ ಎ.ಹೆಚ್.ಆನಂದ, ವಕೀಲ ಶ್ರೀ ವಿನೋದ್ ಕುಮಾರ್ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.