'ಬಿಜೆಪಿಯವರೇ ಯಡಿಯೂರಪ್ಪ ವಿರುದ್ದ ಮತ ಹಾಕಬಹುದು!'

Published : Jul 28, 2019, 11:37 AM IST
'ಬಿಜೆಪಿಯವರೇ ಯಡಿಯೂರಪ್ಪ ವಿರುದ್ದ ಮತ ಹಾಕಬಹುದು!'

ಸಾರಾಂಶ

ಯಡಿಯೂರಪ್ಪ ನಾಳೆ ವಿಶ್ವಾಸಮತ ಯಾಚನೆ ವಿಚಾರ| ಬಿಜೆಪಿಯವರೇ ಯಡಿಯೂರಪ್ಪ ವಿರುದ್ದ ಮತ ಹಾಕಬಹುದು| ಈ ಬಗ್ಗೆ ನನಗೆ ಮಾಹಿತಿತೂ ಇಲ್ಲ ನಿರೀಕ್ಷೆಯೂ ಇಲ್ಲ| ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.

ಮೈಸೂರು[ಜು.28]: ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಹೈಡ್ರಾಮಾ ಕೊನೆಯ ಹಂತಕ್ಕೆ ತಲುಪಿದ್ದು, ನಾಳೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ. ಸದ್ಯ ಈ ಕುರಿತಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಬಿಜೆಪಿಯವರೇ ಯಡಿಯೂರಪ್ಪ ವಿರುದ್ದ ಮತ ಹಾಕಬಹುದು ಎಂದು ಬಾಂಬ್ ಹಾಕಿದ್ದಾರೆ.

ತಮ್ಮ ಮಗ ರಾಕೇಶ್ ಮೂರನೇ ವರ್ಷದ ಪುಣ್ಯ ತಿಥಿಗೆ ಮೈಸೂರಿಗೆ ತೆರಳಿರುವ ಸಿದ್ದರಾಮಯ್ಯ ಮಾಧ್ಯಮಗಳಿಗೆ ಯಡಿಯೂರಪ್ಪ ವಿಶ್ವಾಸಮತ ಯಾಚನೆ ಕುರಿತಾಗಿ ಪ್ರತಿಕ್ರಿಯಿಸಿಸುತ್ತಾ ' ಬಿಜೆಪಿಯವರೇ ಯಡಿಯೂರಪ್ಪ ವಿರುದ್ದ ಮತ ಹಾಕಬಹುದು. ಈ ಬಗ್ಗೆ ನನಗೆ ಮಾಹಿತಿಯೂ ಇಲ್ಲ, ನಿರೀಕ್ಷೆಯೂ ಇಲ್ಲ. 221 ರಲ್ಲಿ 111 ಸ್ಥಾನ ಬಿಜೆಪಿಗೆ ಎಲ್ಲಿ ಇದೆ? ನೀವು ಅವರಿಗೆ ಕೇಳಬೇಕು. ' ಎನ್ನುವ ಮೂಲಕ ಬಾಂಬ್ ಸಿಡಿಸಿದ್ದಾರೆ.

ಅತೃಪ್ತರ ಕರೆ ವಿಚಾರವಾಗಿ ಸ್ಪಷ್ಟನೆ ನಿಡಿರುವ ಸಿದ್ದರಾಮಯ್ಯ 'ಅತೃಪ್ತ ನಾಯಕರು ಕರೆ ಮಾಡಿದ್ದರು ಅಂತಾ ಹೇಳಿದ್ದೇನೆ, ಪದೇ ಪದೇ ಆ ವಿಚಾರ ಪ್ರಸ್ತಾಪ ಬೇಡ. ಕರೆ ಮಾಡಿಲ್ಲ ಅಂತಾ ಹೇಳಿರುವವರು ನನಗೆ ಕರೆ ಮಾಡಿಲ್ಲ' ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು