‘ಪ್ರಧಾನಿ ಕೀರ್ತಿ ಸಹಿಸದೇ ಲಘುವಾಗಿ ಮಾತಾಡ್ತಾರೆ ರಮ್ಯಾ’

Published : Nov 02, 2018, 02:07 PM ISTUpdated : Nov 02, 2018, 02:09 PM IST
‘ಪ್ರಧಾನಿ ಕೀರ್ತಿ ಸಹಿಸದೇ ಲಘುವಾಗಿ ಮಾತಾಡ್ತಾರೆ ರಮ್ಯಾ’

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಮ್ಯಾ ಅವಹೇಳನಕಾರಿ ಟ್ವೀಟ್ ಮಾಡಿರುವ ಸಂಬಂಧ ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಕೀರ್ತಿ ಸಹಿಸದೇ ಇಂತಹ ಹೇಳಿಕೆ ನೀಡುತ್ತಾರೆ ಎಂದು ಹೇಳಿದ್ದಾರೆ. 

ತುಮಕೂರು : ಮೋದಿಯನ್ನು ಹಕ್ಕಿ ಹಿಕ್ಕೆಗೆ ಹೋಲಿಸಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿಕಾರಿದ್ದಾರೆ. 

 "ರಮ್ಯಾ ಹುಟ್ಟೇ ಹೇಗೆಂದು ಗೊತ್ತಿಲ್ಲ. ರಾಷ್ಟ್ರೀಯ ಪಕ್ಷದ ಅಧ್ಯಕ್ಷರೊಂದಿಗೆ "ಓಡಾಡ್ತಾರೆ  ಮೋದಿಯವರು ಪ್ರತಿಮೆ ಪಕ್ಷದಲ್ಲಿ ನಿಂತಾಗ ಪುಟ್ಟದಾಗಿಯೇ ಕಾಣ್ತಾರೆ.  ಪ್ರಧಾನಿಯವರ ಕೀರ್ತಿ ದೊಡ್ಡದು,ಇದನ್ನು ಸಹಿಸದೆ ಲಘುವಾಗಿ ಮಾತನಾಡಿದ್ದಾರೆ ಎಂದು ತುಮಕೂರಿನಲ್ಲಿ ಶಿವಣ್ಣ ಹೇಳಿದ್ದಾರೆ.

ರಮ್ಯಾಗೆ ಲಘುವಾಗಿ ಮಾತನಾಡಿಯೇ ರೂಢಿ.  ರಮ್ಯಾ ರಾಷ್ಟ್ರೀಯ ಪಕ್ಷದ ಜೊತೆಗೆ ಓಡಾಡುತ್ತಾರೆ ಅದರ ಬಗ್ಗೆ ನಾವು ಮಾತನಾಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ.  

ಅಲ್ಲದೇ ರಮ್ಯಾ ಬಗ್ಗೆ ಮಾತನಾಡಲು ನಾಚಿಕೆಯಾಗುತ್ತೆ ಎಂದಿರುವ ಅವರು ಈಗ ಮೀಟೂ ಚಳುವಳಿ ನಡೆಯುತ್ತಿದೆ ಇಂತಹ ಸಂದರ್ಭದಲ್ಲಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Ballari Clash: ಮೃತನ ದೇಹದಲ್ಲಿ ಸಿಕ್ಕ ಬುಲೆಟ್‌ ಪೊಲೀಸರದ್ದಲ್ಲ: ಎಡಿಜಿಪಿ ಸ್ಪಷ್ಟನೆ
ಗಾಂಧಿ ಕುಟುಂಬದಲ್ಲಿ ರಾಹುಲ್ - ಪ್ರಿಯಾಂಕಾ ಬೇರೆ ಬೇರೆ ಬಣವೇಕೆ ?