ಕೇಂದ್ರದ ರೈತ-ವಿರೋಧಿ ಧೋರಣೆ ಟೀಕಿಸಿದ ರೈತ ಮುಖಂಡನಿಗೆ ಕೆನ್ನೆಗೆ ಬಾರಿಸಿದ ಬಿಜೆಪಿ ನಾಯಕಿ!

By Suvarna Web DeskFirst Published Mar 9, 2018, 3:54 PM IST
Highlights
  • ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಬಿಜೆಪಿ ನಾಯಕಿಯೊಬ್ಬಳು ರೈತ ಮುಖಂಡನಿಗೆ ಕೆನ್ನೆ ಬಾರಿಸಿರುವ ಘಟನೆ
  • ಕುಲಾಂತರಿ ತಳಿಗಳ ಬಗ್ಗೆ ಕೇಂದ್ರದ ನೀತಿಯನ್ನು ಟೀಕಿಸಿ ಕರಪತ್ರ ವಿತರಿಸುತ್ತಿದ್ದ ರೈತ ಮುಖಂಡ 

ಚೆನ್ನೈ: ಬಿಜೆಪಿ ಮುಖಂಡನೊಬ್ಬ ಪೆರಿಯಾರ್ ಪ್ರತಿಮೆ ಧ್ವಂಸಗೊಳಿತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಘಟನೆ ಇನ್ನೂ ಚರ್ಚೆಯಾಗುತ್ತಿರುವ ಬೆನ್ನಲ್ಲೇ, ಬಿಜೆಪಿ ನಾಯಕಿಯೊಬ್ಬಳು ರೈತ ಮುಖಂಡನಿಗೆ ಕೆನ್ನೆ ಬಾರಿಸಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ.

ಕುಲಾಂತರಿ ತಳಿಗಳ ಬಗ್ಗೆ ಕೇಂದ್ರದ ನೀತಿಯನ್ನು ಟೀಕಿಸಿ ಅಯ್ಯಕಾನು ಎಂಬ ರೈತ ಮುಖಂಡ ತಿರುಚೆಂಡೂರ್ ದೇವಸ್ಥಾನದ ಬಳಿ  ಕರಪತ್ರಗಳನ್ನು ವಿತರಿಸುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಜಿಲ್ಲೆಯ ಬಿಜೆಪಿ ಮುಖಂಡೆ ನೆಲ್ಲಾಯಮ್ಮಲ್ ರೈತಮುಖಂಡರೊಂದಿಗೆ ವಾಗ್ವಾದಕ್ಕಿಳಿದಿದ್ದಾಳೆ.

ಆ ನಡುವೆ ರೈತ ಮುಖಂಡನನ್ನು ನಿಂದಿಸಿದ್ದಾಳೆ. ಪ್ರತಿಯಾಗಿ ರೈತ ಮುಖಂಡನೂ ಕೂಡ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾನೆ.

ಇಡೀಯ ಘಟನೆ ಕ್ಯಾಮೆರದಲ್ಲಿ ದಾಖಲಾಗಿದ್ದು, ಬಿಜೆಪಿ ನಾಯಕಿ ಕೈಯಲ್ಲಿ ಚಪ್ಪಲಿ ಹಿಡಿದು, ರೈತ ಮುಖಂಡನಿಗೆ ಬೆದರಿಕೆ ಹಾಕಿರುವುದು ಸೆರೆಯಾಗಿದೆ.

click me!