ಕಮ್ಮಿ ರೇಟಿಗೆ ಗೋಮಾಂಸ ಕೊಡ್ತೇವೆ: ಬಿಜೆಪಿ ಮುಖಂಡನ ಆಶ್ವಾಸನೆ

By Suvarna Web DeskFirst Published May 30, 2017, 11:32 AM IST
Highlights

'ಬಿಜೆಪಿ ಮುಂದಿನ ವರ್ಷ ಅಧಿಕಾರಕ್ಕೆ ಬಂದರೆ ಗೋಮಾಂಸ ಮಾರಾಟದ ಮೇಲಿನ ನಿರ್ಬಂಧ ತೆಗೆದು ಹಾಕುತ್ತೇವೆ. ಇದರಿಂದ ಗೋಮಾಂಸ ದರ ಇಳಿಯಲಿದೆ'

ಶಿಲ್ಲಾಂಗ್‌: ‘ಗೋಮಾಂಸವು ಮೇಘಾಲಯದ ಗಾರೋ ಬುಡಕಟ್ಟು ಜನರ ನಿತ್ಯದ ಆಹಾರ. ಆದರೆ ಗೋವಧೆಯ ಮೇಲೆ ನಿರ್ಬಂಧಗಳು ಇರುವ ಕಾರಣ ಬೆಲೆ ಜಾಸ್ತಿ ಇದೆ. ಬಿಜೆಪಿ ಮುಂದಿನ ವರ್ಷ ಅಧಿಕಾರಕ್ಕೆ ಬಂದರೆ ಗೋಮಾಂಸ ಮಾರಾಟದ ಮೇಲಿನ ನಿರ್ಬಂಧ ತೆಗೆದು ಹಾಕುತ್ತೇವೆ. ಇದರಿಂದ ಗೋಮಾಂಸ ದರ ಇಳಿಯಲಿದೆ' ಎಂದು ಮೇಘಾಲಯ ಬಿಜೆಪಿ ಮುಖಂಡ ಬರ್ನಾರ್ಡ್‌ ಮರಕ್‌ ಹೇಳಿದ್ದಾರೆ.

ಮರಕ್‌ ಅವರ ಹೇಳಿಕೆ ಬಿಜೆಪಿಗೆ ಮುಜುಗರ ತಂದಿದೆ. ಮೇಘಾಲಯದಲ್ಲಿ ಕ್ರೈಸ್ತ ಸಮುದಾಯದವರೇ ಹೆಚ್ಚಿದ್ದು, ಅಲ್ಲಿ ಗೋಮಾಂಸವೇ ಪ್ರಮುಖ ಖಾದ್ಯವಾಗಿದೆ. ಬಿಜೆಪಿ ಆಡಳಿತದ ಗೋವಾದಲ್ಲೂ ಕ್ರೈಸ್ತರೇ ಹೆಚ್ಚಿದ್ದು, ಅಲ್ಲೂ ಕೂಡ ಗೋಮಾಂಸ ಗರಿಷ್ಠ ಪ್ರಮಾಣದಲ್ಲಿ ಬಳಕೆಯಾಗುತ್ತದೆ.

click me!