ಪಾಕ್ ಪರ ಗೂಢಚರ್ಯೆ: ಬಿಜೆಪಿ ನಾಯಕನ ಬಂಧು ಸೆರೆ

Published : Feb 10, 2017, 06:08 PM ISTUpdated : Apr 11, 2018, 01:03 PM IST
ಪಾಕ್ ಪರ ಗೂಢಚರ್ಯೆ: ಬಿಜೆಪಿ ನಾಯಕನ ಬಂಧು ಸೆರೆ

ಸಾರಾಂಶ

ಇದರ ಬೆನ್ನಲ್ಲೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್, ‘ಬಂಧಿತರಲ್ಲಿ ಯಾರೂ ಮುಸ್ಲಿಮರಿಲ್ಲ. ಓರ್ವ ವ್ಯಕ್ತಿ ಬಿಜೆಪಿ ಸದಸ್ಯ. ಇದನ್ನು ಬಿಜೆಪಿಗರು ಅರಿಯಲಿ’ ಎಂದಿದ್ದಾರೆ. ಆದರೆ ಬಂಧಿತನು ಬಿಜೆಪಿ ಕಾರ್ಯಕರ್ತನಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಭೋಪಾಲ(ಫೆ.10): ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐಗೆ ಮಾಹಿತಿ ರವಾನಿಸುತ್ತಿದ್ದ 11 ಗೂಢಚಾರರನ್ನು ಮಧ್ಯಪ್ರದೇಶ ಭಯೋತ್ಪಾದನೆ ನಿಗ್ರಹ ದಳ ಗುರುವಾರ ಬಂಸಿದೆ. ವಿಶೇಷವೆಂದರೆ ಈ ಗೂಢಚಾರರಲ್ಲಿ ಬಿಜೆಪಿ ಕಾರ್ಪೋರೇಟರ್ ಒಬ್ಬರ ಮೈದುನ ಇದ್ದಾನೆ.

ಇದರ ಬೆನ್ನಲ್ಲೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್, ‘ಬಂಧಿತರಲ್ಲಿ ಯಾರೂ ಮುಸ್ಲಿಮರಿಲ್ಲ. ಓರ್ವ ವ್ಯಕ್ತಿ ಬಿಜೆಪಿ ಸದಸ್ಯ. ಇದನ್ನು ಬಿಜೆಪಿಗರು ಅರಿಯಲಿ’ ಎಂದಿದ್ದಾರೆ. ಆದರೆ ಬಂಧಿತನು ಬಿಜೆಪಿ ಕಾರ್ಯಕರ್ತನಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಬಂತರು ಚೀನಾದ ಉಪಕರಣಗಳು ಮತ್ತು ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ಕಾಲ್ ಸೆಂಟರ್‌ಗಳನ್ನು ನಡೆಸುತ್ತಿದ್ದರು. ಭಾರತದ ಮಿಲಿಟರಿ ಕಾರ್ಯಾಚರಣೆಯ ಕುರಿತಂತೆ ಬೇಹುಗಾರಿಕೆ ನಡೆಸಿ ಮಾಹಿತಿಯನ್ನು ಐಎಸ್‌ಐಗೆ ರವಾನಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಮೂವರು ಆರೋಪಿಗಳನ್ನು ಭೋಪಾಲ್, ಒಬ್ಬನನ್ನು ಸತ್ನಾದಲ್ಲಿ, ಇಬ್ಬನನ್ನು ಜಬಲ್ಪುರ ಮತ್ತು ಐದು ಮಂದಿಯನ್ನು ಗ್ವಾಲಿಯರ್‌ದಲ್ಲಿ ಬಂಸಲಾಗಿದೆ.

ಸತ್ನಾದಲ್ಲಿ ಬಂಧಿತನಾದ ಬಲರಾಮ್ ಎಂಬಾತ ಈ ದಂಧೆಯ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ. ಬಂಧಿತರಿಂದ ಚೀನಾದ ಸಲಕರಣೆಗಳು, ಸಿಮ್ ಬಾಕ್ಸ್‌ಗಳು, ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಡಾಟಾ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರತೀಯ ಟೆಲಿಗ್ರ್'ಮ್ ಕಾಯ್ದೆ, ಭಾರತೀಯ ದಂಡ ಸಹಿತೆಯ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಟಿಎಸ್ ಮುಖ್ಯಸ್ಥ ಶಮಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲಿಯೋನಲ್ ಮೆಸ್ಸಿಗೆ ಪಾಸ್ ವೈಡ್ ಪಾಸ್ ಕೊಟ್ಟು ವೈರಲ್ ಆದ ಸಿಎಂ ರೇವಂತ್ ರೆಡ್ಡಿ
ಕುಂಟುನೆಪ ಹೇಳಂಗಿಲ್ಲ, ಈ ದೇಶಗಳ ನಾಗರಿಕರಿಗೆ ಮಿಲಿಟರಿ ಸೇವೆ ಕಡ್ಡಾಯ! ಭಾರತದಲ್ಲಿ ಇದು ಜಾರಿಯಾದ್ರೆ?