ಇನ್ಯಾವ ಅಧಿಕಾರ ಬೇಕು ನನಗೆ..ನಿಮ್ಮ ಪ್ರೀತಿ ಸಾಕು: ಬಂಡಾಯಕ್ಕೆ ಜಗ್ಗೇಶ್ ತೆರೆ

Published : Sep 24, 2019, 03:20 PM ISTUpdated : Sep 24, 2019, 03:26 PM IST
ಇನ್ಯಾವ ಅಧಿಕಾರ ಬೇಕು ನನಗೆ..ನಿಮ್ಮ ಪ್ರೀತಿ ಸಾಕು: ಬಂಡಾಯಕ್ಕೆ  ಜಗ್ಗೇಶ್ ತೆರೆ

ಸಾರಾಂಶ

ಒಂದೆಡೆ ಅನರ್ಹ ಶಾಸಕರ ಕಗ್ಗಂಟು ಬಿಜೆಪಿಗೆ ತಲೆ ನೋವಾಗಿದ್ದರೆ, ಇತ್ತ ಉಪ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ಆಂತರಿಕ ಅಸಮಾಧನ ಕೂಡ ಸ್ಫೋಟಗೊಂಡಿದೆ. ಇದೀಗ ಯಶವಂತಪುರ ಪಕ್ಷೇತ್ರದ ಪೈಕಿ ಅಸಾಮಾಧಾನ ಹೊರಹಾಕಿದ್ದ ಜಗ್ಗೇಶ್. ಇದೀಗ ತಾವೇ ಅದಕ್ಕೆ ತೆರೆ ಎಳೆದದ್ದಾರೆ.  

ಬೆಂಗಳೂರು, (ಸೆ.24): ಉಪಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಗರಂ ಆಗಿ ಟ್ವೀಟ್ ಮಾಡಿದ್ದ ಮಾಜಿ ಶಾಸಕ, ನಟ ಜಗ್ಗೇಶ್ ಈಗ ಕೂಲ್-ಕೂಲ್ ಆಗಿ ಟ್ವೀಟ್ ಮಾಡಿದ್ದಾರೆ.

ಈ ಮೂಲಕ ಯಶವಂತಪುರ ಯಶವಂತಪುರ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಲ್ಲಿ ಭುಗಿಲೆದ್ದಿದ್ದ ಬಂಡಾಯದ ಬಿಸಿ ತಣ್ಣಗಾಗಿದೆ. 

2018ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ, ವಿಧಾನಪರಿಷತ್ ಸದಸ್ಯರಾದ ಜಗ್ಗೇಶ್,  ವಲಸೆ ಬಂದಿರುವ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಗಳ ಬಗ್ಗೆ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದರು.

 'ಟಿಕೆಟ್ ಕೊಡಿ, ನಾವು ಗೆಲ್ಲಿಸುತ್ತೇವೆ': ಜಗ್ಗೇಶ್ ಸ್ಪರ್ಧೆಗೆ ಬಿಜೆಪಿಯಲ್ಲಿ ಒತ್ತಡ!

 'ಬೈ ಎಲೆಕ್ಷನ್ ಬಂತು! 2018ರಲ್ಲಿ ಕಡೆಘಳಿಗೆ ಅಭ್ಯರ್ಥಿಯಾದ ನಾನು ಮಾಜಿ ಶಾಸಕ, ವಿಧಾನ ಪರಿಷತ್ ಸದಸ್ಯ. ತನು, ಮನ, ಧನ ಕಳೆದುಕೊಂಡು 9 ದಿನದಲ್ಲಿ 60,400 ಮತಗಳನ್ನು ಪಡೆದ ಅಭ್ಯರ್ಥಿ ನಾನು! ಮೌನವಾಗಿ ಇರಲೋ? ವಲಸೆ ಬಂದವರಿಗಾಗಿ ನಾನು ಪಕ್ಕ ಸರಿಯಲೋ..? ಇಲ್ಲಾ ಮೌನವಾಗಿ ತ್ಯಾಗಿಯಾಗಲೋ..? ಕಾಡಿನಲ್ಲಿ ಕಳೆದುಹೋದ ಮಗುವಂತಾಗಿರುವೆ! ಎಂದು ಟ್ವೀಟ್ ಮಾಡಿ ಅಸಮಧಾನ ಹೊರಹಾಕಿದ್ದರು.

ಆದ್ರೆ ಇದೀಗ ಕೂಲ್‌ ಆಗಿರುವ ನಾನು ಬಂಡಾಯಗಾರನಲ್ಲ ಎಂದು ಟ್ವೀಟ್ ಮೂಲಕ ಪ್ರತಿಕ್ರಯಿದ ಜಗ್ಗೇಶ್, ಮಾಧ್ಯಮಮಿತ್ರರಿಗೆ ನನ್ನ ವಿನಂತಿ.  ನಾನು ಇರುವ ಪಕ್ಷವನ್ನ ಶಿಸ್ತಿನಿಂದ ಹಿಂಬಾಲಿಸುತ್ತಿರುವೆ. ಪಕ್ಷ ನನಗೆ ನೆರಳು ಕೊಡುವ ಮರದಂತೆ. ನಾನು ಮರದ ಕೆಳಗೆ ಕೂರುವೆ ವಿನಹ ರಂಬೆ ಕಡಿಯುವ  ಕಾರ್ಯಮಾಡುವುದಿಲ್ಲ. ನಮ್ಮ ಪಕ್ಷದ ಸಿದ್ಧಾಂತ ದೇಶ ಮೊದಲು ಅಂದಮೇಲೆ ನಾವು ಎಲ್ಲಾ ತ್ಯಾಗಕ್ಕು ಸಿದ್ಧ ಎಂದು ಟ್ವೀಟ್ ಮಾಡಿದ್ದಾರೆ.

ಇದರಿಂದ  ಒಂದು ಮಟ್ಟಿಗೆ ಯಶವಂತಪುರ ಕ್ಷೇತ್ರದ ಬೈ ಎಲೆಕ್ಷನ್ ಬಂಡಾಯ ಬಿಸಿ ತಣ್ಣಗಾದಂತಾಗಿದೆ. ಕಾಂಗ್ರೆಸ್ ಅನರ್ಹ  ಶಾಸಕ ಎಸ್.ಟಿ.ಸೋಮಶೇಖರ್ ಅವರಿಗೆ ಯಶವಂತಪುರ ಟಿಕೆಟ್ ನೀಡುವ ಹಿಲ್ಲೆಲೆಯಲ್ಲಿ ಜಗ್ಗೇಶ್ ವಲಸೆ ಬಂದವರಿಗಾಗಿ ನಾನು ಪಕ್ಕ ಸರಿಯಲೋ..? ಎಂದು ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದರು.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!