ಬೆಂ. ದಕ್ಷಿಣದಂತೆ ಗೋವಾದಲ್ಲೂ ಬಿಜೆಪಿಗೆ ಟ್ರಬಲ್‌!

Published : Apr 26, 2019, 08:53 AM IST
ಬೆಂ. ದಕ್ಷಿಣದಂತೆ ಗೋವಾದಲ್ಲೂ ಬಿಜೆಪಿಗೆ ಟ್ರಬಲ್‌!

ಸಾರಾಂಶ

ಗೋವಾದಲ್ಲೂ ಬಿಜೆಪಿಗೆ ಬೆಂ. ದಕ್ಷಿಣ ರೀತಿ ಟ್ರಬಲ್‌| ಪಣಜಿ ಬೈ ಎಲೆಕ್ಷನ್‌ಗೆ ಪರ್ರಿಕರ್‌ ಪುತ್ರ ಸೇರಿ ಇಬ್ಬರ ಹೆಸರು ಶಿಫಾರಸು| ತೇಜಸ್ವಿನಿಗೆ ಟಿಕೆಟ್‌ ನಿರಾಕರಿಸಿದ್ದ ಹೈಕಮಾಂಡ್‌ ಈಗ ಏನು ಮಾಡುತ್ತೆ?

ಪಣಜಿ[ಏ.26]:  ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ ಪರ್ರಿಕರ್‌ ನಿಧನದಿಂದ ತೆರವಾಗಿರುವ ಪಣಜಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಪರ್ರಿಕರ್‌ ಹಿರಿಯ ಪುತ್ರ ಉತ್ಪಲ್‌ ಸೇರಿ ಇಬ್ಬರ ಹೆಸರನ್ನು ಗೋವಾ ಬಿಜೆಪಿ ಘಟಕ ಅಂತಿಮಗೊಳಿಸಿದೆ. ಈ ಪೈಕಿ ಒಬ್ಬರನ್ನು ಆಯ್ಕೆ ಮಾಡುವ ಹೊಣೆಯನ್ನು ಬಿಜೆಪಿ ಸಂಸದೀಯ ಮಂಡಳಿ ಸಭೆಯ ವಿವೇಚನೆಗೆ ಬಿಟ್ಟಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ದಿವಂಗತ ಅನಂತ ಕುಮಾರ್‌ ಅವರ ಪತ್ನಿಗೆ ಕುಟುಂಬ ರಾಜಕಾರಣದ ಹೆಸರಿನಲ್ಲಿ ಟಿಕೆಟ್‌ ನಿರಾಕರಿಸಿದ್ದ ಬಿಜೆಪಿ, ಪರ್ರಿಕರ್‌ ಪುತ್ರನ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಉತ್ಪಲ್‌ ಪರ್ರಿಕರ್‌ ಹಾಗೂ ಸಿದ್ಧಾಥ್‌ರ್‍ ಕುಂಕೋಲಿಯೆಂಕರ್‌ ಹೆಸರನ್ನು ರಾಜ್ಯ ಬಿಜೆಪಿ ಘಟಕ ಬಿಜೆಪಿ ಸಂಸದೀಯ ಮಂಡಳಿ ಸಭೆಗೆ ರವಾನಿಸಿದೆ ಎಂದು ಗೋವಾ ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಮೇ 19ರಂದು ಉಪಚುನಾವಣೆ ನಡೆಯಲಿದೆ. 38 ವರ್ಷದ ಉತ್ಪಲ್‌ ಅವರು ಅಮೆರಿಕದಲ್ಲಿ ವ್ಯಾಸಂಗ ಮಾಡಿ ಸದ್ಯ ಉದ್ಯಮ ನಡೆಸುತ್ತಿದ್ದಾರೆ. 2015, 2017ರಲ್ಲಿ ಪಣಜಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಿದ್ಧಾಥ್‌ರ್‍ ಅವರು ಪರ್ರಿಕರ್‌ ವಿಧಾನಸಭೆ ಪ್ರವೇಶಕ್ಕಾಗಿ 2017ರಲ್ಲಿ ರಾಜೀನಾಮೆ ನೀಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಲ್ಯಾಣ ಕರ್ನಾಟಕ ನಾಡು ಈಗ ಗಾಂಜಾ ನೆಲೆವೀಡು: ನಶೆಯಲ್ಲಿ ತೇಲುತ್ತಿರೋ ಯುವ ಜನಾಂಗ
ದುಡಿಯುವ ಮಹಿಳೆಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು