ಬಿಜೆಪಿಯಿಂದ ಪ್ರಜಾತಂತ್ರದ ಕಗ್ಗೊಲೆ: ಶಿವಸೇನೆ

Published : Mar 16, 2017, 07:29 AM ISTUpdated : Apr 11, 2018, 12:36 PM IST
ಬಿಜೆಪಿಯಿಂದ ಪ್ರಜಾತಂತ್ರದ ಕಗ್ಗೊಲೆ: ಶಿವಸೇನೆ

ಸಾರಾಂಶ

ಬಿಜೆಪಿಯು ಮೂರು ರಾಜ್ಯಗಳಲ್ಲಿ ಸೋಲನ್ನನುಭವಿಸಿದೆ. ಆದರೆ ಪಕ್ಷದ ನಾಯಕರು ಆ ಬಗ್ಗೆ ಚರ್ಚಿಸಲು ಸಿದ್ಧರಿಲ್ಲವೆಂದು ಶಿವಸೇನೆ ಹೇಳಿದೆ.

ಮುಂಬೈ (ಮಾ.16):  ಗೋವಾದಲ್ಲಿ ಬಿಜೆಪಿ ಸರ್ಕಾರ ರಚನೆಯನ್ನು ಪ್ರಜಾಪ್ರಭುತ್ವದ ಕಗ್ಗೊಲೆಯೆಂದು ಮಿತ್ರಪಕ್ಷ ಶಿವಸೇನೆ ಬಣ್ಣಿಸಿದೆ.

ಅಧಿಕಾರ ಪಡೆಯಲು ಬಜೆಪಿ ನಡೆಸಿರುವ  ಕಸರತ್ತನ್ನು ಪ್ರಜಾತಂತ್ರದ ಕಗ್ಗೊಲೆಯೆಂದು ಹೇಳದೇ ಬೇರೆ ವಿಧಿಯಿಲ್ಲ. ಈ ಮುಂಚೆಯೂ ಅಂತಹ ಬೆಳವಣಿಗೆಗಳು ನಡೆದಿವೆ. ಅಂತ ವಿದ್ಯಾಮಾನಗಳನ್ನು ಸಹಿಸಿಕೊಳ್ಳುವ ಶಕ್ತಿ ನಮ್ಮ ಪ್ರಜಾತಂತ್ರಕ್ಕಿರಲಿ ಎಂದು ಆಶಿಸುತ್ತೇವೆ, ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ.

ಬಿಜೆಪಿಯು ಮೂರು ರಾಜ್ಯಗಳಲ್ಲಿ ಸೋಲನ್ನನುಭವಿಸಿದೆ. ಆದರೆ ಪಕ್ಷದ ನಾಯಕರು ಆ ಬಗ್ಗೆ ಚರ್ಚಿಸಲು ಸಿದ್ಧರಿಲ್ಲವೆಂದು ಶಿವಸೇನೆ ಹೇಳಿದೆ.

ಗೋವಾದಲ್ಲಿ ಕಾಂಗ್ರೆಸ್’ಗೆ 17  ಸ್ಥಾನಗಳನ್ನು ನೀಡುವ ಮೂಲಕ ಜನತೆ ಬಿಜೆಪಿಯನ್ನು ತಿರಸ್ಕರಿಸಿದೆ. ಅದು ಯಾರ ಸೋಲು ಎಂದು ಶಿವಸೇನೆ ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿಕೆಟ್ ಇಲ್ಲದ ಪ್ರಯಾಣಿಕರಿಂದ ಈ ವರ್ಷ ಭಾರತೀಯ ರೈಲ್ವೇ ವಸೂಲಿ ಮಾಡಿದ ದಂಡ ಎಷ್ಟು?
ರಾಯಚೂರು ಲೋಕಾ ದಾಳಿ, ಎಇಇ ವಿಜಯಲಕ್ಷ್ಮಿ ಮನೆಯಲ್ಲಿ ಸಿಕ್ತು ಲೆಕ್ಕವಿಲ್ಲದಷ್ಟು ಆಸ್ತಿ, ಚಿನ್ನ! ಬೆಳಗ್ಗಿನಿಂದ ಇನ್ನೂ ಮುಗಿಯದ ಶೋಧ!