
ಹೈದರಾಬಾದ್: ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿ ಕಾರ್ಯನಿರ್ವ ಹಿಸುವ ಸಂಸ್ಥೆಯೊಂದರ ಅಧ್ಯಕ್ಷಗಿರಿ ಕೊಡಿಸುವು ದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ 2.17 ಕೋಟಿ ರು. ವಂಚಿಸಿದ ಆರೋಪವೊಂದು ಕರ್ನಾಟಕದ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಮತ್ತು ಅವರ ಆಪ್ತರ ಮೇಲೆ ಕೇಳಿಬಂದಿದೆ.
ಅಲ್ಲದೆ ಆರೋಪಿಗಳ ಮೇಲೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಹಿಯನ್ನು ನಕಲು ಮಾಡಿದಂಥ ಗಂಭೀರ ಆರೋಪವನ್ನೂ ಮಾಡಲಾಗಿದೆ. ಈ ಸಂಬಂಧ ರಾವ್ ಹಾಗೂ ಇತರೆ 8 ಜನರ ವಿರುದ್ಧ ಕೇಸು ದಾಖಲಿಸಲಾಗಿದೆ.
ಆದರೆ, ತಮ್ಮ ವಿರುದ್ಧದ ಈ ಗಂಭೀರ ಆರೋಪವನ್ನು ತಳ್ಳಿ ಹಾಕಿರುವ ಮುರಳೀಧರ ರಾವ್ ಅವರು, ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಏನೀ ಪ್ರಕರಣ?: ಫಾರ್ಮಾ ಎಕ್ಸಿಲ್ ಎಂಬ ಕಂಪನಿಯ ಅಧ್ಯಕ್ಷರನ್ನಾಗಿ ಮಾಡುವುದಾಗಿ ಹೇಳಿ ರಾವ್ ಅವರ ಆಪ್ತರು ತಮ್ಮಿಂದ 2.17 ಕೋಟಿ ರು. ಹಣ ಪಡೆದಿದ್ದರು. ಅಲ್ಲದೆ ಹಣ ಪಡೆಯುವ ಮುನ್ನ ತಮ್ಮನ್ನು ನಂಬಿಸುವ ಸಲುವಾಗಿ, ನೇಮಕಾತಿ ಪತ್ರವನ್ನು ತೋರಿಸಿದ್ದರು. ಅದರಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಹಿ ಕೂಡಾ ಇತ್ತು.
ಆದರೆ ಹಣ ನೀಡಿದ ಬಳಿಕ ನಮಗೆ ವಂಚಿಸಲಾಗಿದೆ. ಬಳಿಕ ಹಣ ಕೇಳಿದರೆ ರಾವ್ ಮತ್ತು ಅವರ ಆಪ್ತರು ನಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂತ್ರಸ್ತ ಮಹಿಪಾಲ್ ರೆಡ್ಡಿ ಎಂಬುವವರು ಆರೋಪಿಸಿದ್ದಾರೆ.
ಇದೀಗ ಮಹಿಪಾಲ್ ಅವರ ಪತ್ನಿ ನೀಡಿದ ದೂರಿನ ಮೇರೆಗೆ ನ್ಯಾಯಾಲಯ ನೀಡಿದ ನಿರ್ದೇಶನದಿಂದಾಗಿ ಮಂಗಳವಾರವೇ ಮುರಳೀಧರ ರಾವ್ ಹಾಗೂ ಇತರ 8 ಮಂದಿ ವಿರುದ್ಧ ವಂಚನೆ, ನಕಲು ಸೇರಿದಂತೆ ಇತರ ಐಪಿಸಿ ಸೆಕ್ಷನ್‌ಗಳಡಿ ಕೇಸ್ ದಾಖಲಿಸಿ ಕೊಳ್ಳಲಾಗಿದೆ ಎಂದಿದ್ದಾರೆ ಪೊಲೀಸರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.