
ಪಾಟ್ನಾ[ಮಾ.28]: ಬಿಹಾರದ ನಕ್ಸಲ್ ಪೀಡಿತ ಪ್ರದೇಶ ಡೂಮರಿಯಾ ಠಾಣೆಯಲ್ಲಿ ಮಂಗಳವಾರ ರಾತ್ರಿ ನಕ್ಸಲರು ಸ್ಫೋಟಕವನ್ನೆಸೆದು ಮಾಜಿ ವಿಧಾನ ಪರಿಷತ್ ಸದಸ್ಯ ಅನುಜ್ ಕುಮಾರ್ ಸಿಂಗ್ ಮನೆಯನ್ನು ಧ್ವಂಸಗೊಳಿಸಿದ್ದಾರೆ. ನಕ್ಸಲರು ನಡೆಸಿದ ಈ ದಾಳಿಗೆ ಬಿಜೆಪಿ ನಾಯಕನ ಮನೆ ಸಂಪೂರ್ಣ ನಾಶವಾಗಿದೆ. ಮಧ್ಯರಾತ್ರಿ ನಡೆದ ಈ ಡೈನಮೇಟ್ ದಾಳಿಗೆ ಆಸುಪಾಸಿನ ಪ್ರದೇಶ ಕಂಪಿಸಿದೆ.
ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ನಕ್ಸಲೀಯರು ಈ ದಾಳಿ ನಡೆಸಿ ಸರ್ಕಾರಕ್ಕೆ ಬಹಿರಂಗವಾಗಿ ಸವಾಲೊಡ್ಡಿದೆ. ಹೀಗಿರುವಾಗ ಶಾಂತಿಯುತ ಮತದಾನ ನಡೆಸುವುದು ಇಲ್ಲಿನ ಸರ್ಕಾರಕ್ಕೆ ಎದುರಾದ ಬಹುದೊಡ್ಡ ಸಮಸ್ಯೆಯಾಗಿದೆ. ನಕ್ಸಲರು ಕಳೆದ ಬಹಳಷ್ಟು ಸಮಯದಿಂದ ಮಾಜಿ MLC ಅನುಜ್ ಕುಮಾರ್ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ. ನಕ್ಸಲರು ನಡೆಸಿದ ಈ ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.
ದಾಳಿಗೂ ಮುನ್ನ MLC ಅನುಜ್ ಕುಮಾರ್ ಮನೆಯಲ್ಲಿದ್ದ ಕುಟುಂಬ ಸದಸ್ಯರನ್ನು ಹೊರಗೆ ಎಳೆತಂದು ಭರ್ಜರಿಯಾಗಿ ಥಳಿಸಿದ್ದಾರೆ ಎನ್ನಲಾಗಿದೆ. ದಾಳಿ ಬಳಿಕ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸುಮಾರು 50ಕ್ಕೂ ಅಧಿಕ ನಕ್ಸಲೀಯರು ಈ ದಾಳಿಯಲ್ಲಿ ಭಾಗಿಯಾಗಿದ್ದರೆನ್ನಲಾಗಿದೆ. ಪೊಲೀಸರಿಗೆ ಈ ದಾಳಿ ವಿಚಾರ ತಿಳಿಯುತ್ತಿದ್ದಂತೆಯೇ ನಾಯಕನ ಮನೆಗೆ ದೌಡಾಯಿಸಿ, ತನಿಖೆ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.