
ಅಹಮದಾಬಾದ್[ಮೇ.25]: ಪ್ರಸಕ್ತ ಲೋಕಸಭಾ ಚುನಾವಣೆ ಹಲವು ವಿಶಿಷ್ಟ ದಾಖಲೆಗಳಿಗೆ ಸಾಕ್ಷಿಯಾಗಿದೆ. ಗುಜರಾತ್ ರಾಜ್ಯದಲ್ಲಿ ಒಟ್ಟು 26 ಲೋಕಸಭಾ ಕ್ಷೇತ್ರಗಳಿದ್ದು, ಇಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್ ಮಾಡಿದೆ.
ಇಲ್ಲಿ ಗೆಲುವು ಕಂಡ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳ ಸೋತ ಅಭ್ಯರ್ಥಿಯ ನಡುವಿನ ಅಂತರ 1ಲಕ್ಷ ಮತವನ್ನು ದಾಟಿದೆ. ಅತಿ ಕಡಿಮೆ ಎಂದರೆ 1.27 ಲಕ್ಷದಿಂದ ಗರಿಷ್ಟ6.89 ಲಕ್ಷಗಳಷ್ಟು ಲೀಡ್ ಪಡೆದಿರುವುದು ಹೊಸ ದಾಖಲೆ ಎನಿಸಿದೆ.
ಇದು ಒಂದೆರಡಲ್ಲ ಗುಜರಾತ್‌ನಲ್ಲಿ ಲೋಕಸಭಾ ಕಣಕ್ಕಿಳಿದ ಎಲ್ಲಾ 26 ಅಭ್ಯರ್ಥಿಗಳದ್ದೂ ಇದೇ ಸಾಧನೆ. ನೌಸಾರಿ ಕ್ಷೇತ್ರದ ಸಿ.ಆರ್. ಪಾಟ್ಝೀ್ಛ್ಛಗೆಲುವಿನ ಅಂತರ ಬರೋಬ್ಬರಿ 6,89,668 ಲಕ್ಷ. ಇನ್ನು ಅತಿ ಕಡಿಮೆ ಅಂತರದ ಗೆಲುವು ದಾಖಲಿಸಿದ ದಾಹೋದ್ ಕ್ಷೇತ್ರದ ಜಸ್ವಂತಿನ್ ಭಬೋರ್ ಗೆಲುವಿನ ಅಂತರ 1,27,596ಲಕ್ಷ ಮತಗಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.