ಸಿದ್ದರಾಮಯ್ಯ ವಿರುದ್ಧ ದಾಖಲೆ ಬಿಡುಗಡೆ ಮಾಡಲು ಹೋಗಿ ಪೇಚಿಗೆ ಸಿಕ್ಕ ಬಿಜೆಪಿ

By Suvarna Web DeskFirst Published Oct 7, 2017, 3:28 PM IST
Highlights

ಪತ್ರಿಕಾಗೋಷ್ಠಿಯಲ್ಲೇ ಇದ್ದ ಈಶ್ವರಪ್ಪ ಈ ವಿಚಾರ ತಿಳಿದು ಪೇಚಿಗೆ ಸಿಲುಕಿದಂತಿತ್ತು. ದೂರವಾಣಿ ನೆಪದಲ್ಲಿ ಅಲ್ಲಿಂದ ಎದ್ದುಹೋಗಲೂ ಈಶ್ವರಪ್ಪ ಯತ್ನಿಸಿದ್ದುಂಟು. ಆದರೆ, ವಿಧಾನಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಅವರು ಈಶ್ವರಪ್ಪನವರ ಕೈಹಿಡಿದು ಕುಳ್ಳಿರಿಸಿದರು.​

ಬೆಂಗಳೂರು(ಅ. 07): ಸಿಎಂ ಸಿದ್ದರಾಮಯ್ಯ ಕುಟುಂಬದ ಭ್ರಷ್ಟಾಚಾರ ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎಂದು ಹೇಳಿಕೊಂಡು ಬಂದಿದ್ದ ಬಿಜೆಪಿ ಈಗ ತಾನೇ ಪೇಚಿಗೆ ಸಿಕ್ಕಿದೆ. ಸಿಎಂ ಪುತ್ರನ ವಿರುದ್ಧ ಹೊಸ ಜಮೀನು ಹಗರಣದ ದಾಖಲೆಗಳ ಬದಲು ಹಳೆಯ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕ ಬಿ.ಜೆ.ಪುಟ್ಟಸ್ವಾಮಿಯವರು ದಾಖಲೆಗಳನ್ನು ಬಿಡುಗಡೆ ಮಾಡಿದರು. ಆದರೆ, ಈ ಹಿಂದೆ ಬಿಜೆಪಿಯೇ ಬಿಡುಗಡೆ ಮಾಡಿದ್ದ ದಾಖಲೆಗಳು ಅವಾಗಿದ್ದವು.

ಪತ್ರಿಕಾಗೋಷ್ಠಿಯಲ್ಲೇ ಇದ್ದ ಈಶ್ವರಪ್ಪ ಈ ವಿಚಾರ ತಿಳಿದು ಪೇಚಿಗೆ ಸಿಲುಕಿದಂತಿತ್ತು. ದೂರವಾಣಿ ನೆಪದಲ್ಲಿ ಅಲ್ಲಿಂದ ಎದ್ದುಹೋಗಲೂ ಈಶ್ವರಪ್ಪ ಯತ್ನಿಸಿದ್ದುಂಟು. ಆದರೆ, ವಿಧಾನಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಅವರು ಈಶ್ವರಪ್ಪನವರ ಕೈಹಿಡಿದು ಕುಳ್ಳಿರಿಸಿದರು.

ಏನದು ಭೂಹಗರಣ?
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿರಿಯ ಪುತ್ರ ಡಾ. ಯತೀಂದ್ರ ಅವರಿಗೆ ಕಾನೂನು ಬಾಹಿರವಾಗಿ ಭೂಮಿ ಮಂಜೂರು ಮಾಡಲಾಗಿದೆ ಎಂಬ ಆರೋಪವಿದೆ. ಯತೀಂದ್ರ ಅವರ ಒಡೆತನದ ಶಾಂತಾ ಇಂಡಸ್ಟ್ರೀಸ್ ಸಂಸ್ಥೆಗೆ ಹೆಬ್ಬಾಳ ಫ್ಲೈಓವರ್ ಬಳಿ 2.50 ಎಕರೆ ಜಮೀನು ನೀಡಲಾಗಿದೆ. ಇದರ ಮೌಲ್ಯ ಏನಿಲ್ಲವೆಂದರೂ 200 ಕೋಟಿ ರೂ ಎನ್ನಲಾಗಿದೆ. ಸಿಎಂ ಅಧಿಕಾರ ದುರುಪಯೋಗದಿಂದ ಈ ಕೆಲಸ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಹಗರಣದ ದಾಖಲೆಗಳನ್ನೇ ಬಿಜೆ ಪುಟಸ್ವಾಮಿ ಇಂದು ಬಿಡುಗಡೆ ಮಾಡಿದ್ದು.

click me!