
ಶಿವಮೊಗ್ಗ(ಅ.07): ವೈನ್ ಶಾಪ್'ನಲ್ಲಿ ಸಣ್ಣ ಮಕ್ಕಳಿಗೆ ಮದ್ಯಕೊಟ್ಟು ಮಜತೆಗೆದುಕೊಳ್ಳುವ ಅಮಾನವೀಯ ಘಟನೆ ನಡೆದಿದೆ. ಇನ್ನೂ ಶಾಲೆಗೆ ಹೋಗುವ ಮಕ್ಕಳು ಬಾರ್'ವೊಂದರಲ್ಲಿ ಕಂಠ ಪೂರ್ತಿ ಎಣ್ಣೆ ಕುಡಿಯುತ್ತಿದ್ದಾರೆ. ಬಾರ್'ನಲ್ಲಿದ್ದ ಕುಡುಕರು ಹುಡುಗರ ಚಟ ನೋಡಿ ಕಿಕ್ಕೇರಸಿಕೊಂಡು ಮತ್ತೆ ಮದ್ಯಪಾನ ಮಾಡಿಸುತ್ತಾರೆ.
ಹೌದು ಹೀಗೆ ಬಾಲಕರಿಗೆ ಕುಡಿಸಿ ಮಜಾ ತೆಗೆದುಕೊಂಡ ಅಮಾನವೀಯ ಘಟನೆ ನಡೆದಿದ್ದು ಪ್ರಜ್ಞಾವಂತರ ಜಿಲ್ಲೆ ಶಿವಮೊಗ್ಗ ಜಿಲ್ಲೆಯ ಅರಳಹಳ್ಳಿಯಲ್ಲಿ ನಡೆದಿದೆ. ಮೊನ್ನೆ ಗಣಪತಿ ಹಬ್ಬದ ಸಂದರ್ಭದಲ್ಲಿ ಊರೊಳಗೆ ಗಣಪತಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಗ್ರಾಮದ ಯುವಕರ ಮಧ್ಯೆ ಗಲಾಟೆ ನಡೆದ ಪರಿಣಾಮ ಈ ವಿಡಿಯೋ ಹೊರ ಬಂದಿದೆ.
ಶಾಲಾ ಬಾಲಕರಿಗೆ ಕುಡಿಸಿ ಇವರು ಕಿಕ್ಕೇರಿಸಿಕೊಂಡು ತೂರಾಡುವುದನ್ನು ನೋಡಿ ಮಜಾ ತೆಗೆದುಕೊಳ್ಳುವ ಮೂಲಕ ಬಾಲಕರಲ್ಲಿ ಕಡಿತದ ಚಟ ಅಂಟಿಸಿಕೊಳ್ಳುವಂತೆ ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸದ್ಯ ಬಾರ್ ನ್ನು ಬಂದ್ ಮಾಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.