‘ಬರ್ತ್ ಡೇ ಡಿಪ್ಲೊಮೆಸಿ’: ಚೀನಾ ಅಧ್ಯಕ್ಷರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಮೋದಿ

By Suvarna Web DeskFirst Published Jul 25, 2017, 11:07 AM IST
Highlights

ಭಾರತ ಹಾಗೂ ಚೀನಾ ನಡುವೆ ಡೋಕ್ಲಾಮ್ ಬಿಕ್ಕಟ್ಟು ಮುಂದುವರಿರುವ ನಡುವೆಯೇ, ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಶೀ ಜಿನ್’ಪಿಂಗ್ ಹಾಗೂ ಪ್ರೀಮಿಯರ್ ಲೀ ಕೆಕ್ಯಾಂಗ್ ಅವರಿಗೆ ಹುಟ್ಟು ಹಬ್ಬದ ಶುಭಾಶಯವನ್ನು ಕೋರಿದ್ದಾರೆ.

ಬೀಜಿಂಗ್: ಭಾರತ ಹಾಗೂ ಚೀನಾ ನಡುವೆ ಡೋಕ್ಲಾಮ್ ಬಿಕ್ಕಟ್ಟು ಮುಂದುವರಿರುವ ನಡುವೆಯೇ, ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಶೀ ಜಿನ್’ಪಿಂಗ್ ಹಾಗೂ ಪ್ರೀಮಿಯರ್ ಲೀ ಕೆಕ್ಯಾಂಗ್ ಅವರಿಗೆ ಹುಟ್ಟು ಹಬ್ಬದ ಶುಭಾಶಯವನ್ನು ಕೋರಿದ್ದಾರೆ.

ಚೀನಾದ ಪ್ರಮುಖ ಸಾಮಾಜಿಕ ಜಾಲತಾಣವಾಗಿರುವ ಸೀನಾ ವೈಬೋ ಮೂಲಕ ಜೂ.15ರಂದು ಶೀ ಜಿನ್’ಪಿಂಗ್’ಗೆ ಜನ್ಮದಿನದ ಶುಭಾಶಯ ಕೋರಿರುವ ಮೋದಿ, ಇತ್ತೀಚೆಗೆ ಆಸ್ತಾನದಲ್ಲಿ ನಡೆದ ಎಸ್’ಸಿಓ ಶೃಂಗಸಭೆಯಲ್ಲಿ ಭೇಟಿಯಾಗಿದ್ದೆವು, ಹಾಗೂ ಭಾರತ-ಚೀನಾ ಸಂಬಧಗಳನ್ನು ಇನ್ನೂ ಸದೃಢಗೊಳಿಸುವ ಬಗ್ಗೆ ಚರ್ಚಿಸಿದ್ದೆವು ಎಂದು ಹೇಳಿದ್ದಾರೆ.

ಅದೇ ರೀತಿ ಕಳೆದ ಜು. 1 ರಂದು ಚೀನಾ ಪ್ರೀಮಿಯರ್ ಲೀ ಕೆಕ್ಯಾಂಗ್ ಅವರ ಹುಟ್ಟುಹಬ್ಬಕ್ಕೂ ಮೋದಿ ಶುಭ ಕೋರಿದ್ದಾರೆ.

ಚೀನಾದ ಟ್ವಿಟರ್’ನಂತಿರುವ ಸೀನಾ ವೈಬೋದಲ್ಲಿ ಪ್ರಧಾನಿ ಮೋದಿ ಖಾತೆ ಹೊಂದಿದ್ದು, ಸುಮಾರು 1,69,119 ಮಂದಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಮೋದಿ ಸೀನಾ ವೈಬೋದಲ್ಲಿ ಸಕ್ರಿಯರಾಗಿದ್ದು, ಅಗ್ಗಾಗೆ ಪೋಸ್ಟ್’ಗಳನ್ನು ಹಾಕುತ್ತಾರೆ. ಡೋಕ್ಲಾಮ್ ಬಿಕ್ಕಟ್ಟು ಆರಂಭವಾದ ಬಳಿಕ ಸುಮಾರು 6 ಪೋಸ್ಟ್’ಗಳನ್ನು ಪ್ರಧಾನಿ ಮೋದಿ ಹಾಕಿದ್ದು, ಸುಮಾರು 1089 ಪ್ರತಿಕ್ರಿಯೆಗಳು ಬಂದಿವೆ. ಅವರಲ್ಲಿ ಕೆಲವರು ಮಾತ್ರ ಡೋಕ್ಲಾಮ್ ಬಗ್ಗೆ ಪ್ರಸ್ತಾಪಿಸಿದ್ದು, ಭಾರತವು ತನ್ನ ಸೆನೆಯನ್ನು ಹಿಂದೆ ಕರೆಸಿಕೊಳ್ಳಬೇಕೆಂದು ಹೇಳಿದ್ದಾರೆ.

ಅಂತರಾಷ್ಟ್ರೀಯ ಯೋಗ ದಿನ, ಜೂ. 25ರಂದು ಮಾವೋ ಶಿಯಾನ್ ಪ್ರದೇಶದಲ್ಲಿ ನಡೆದ ಬೃಹತ್ ಗುಡ್ಡ ಕುಸಿತ ಸಂದರ್ಭದಲ್ಲೂ ಮೋದಿ ಪೋಸ್ಟ್’ಗಳನ್ನು ಹಾಕಿದ್ದರು.

click me!