
ವಾಷಿಂಗ್ಟನ್[ನ.18]: ಎಚ್1ಬಿ ವೀಸಾದಾರರ ಸಂಗಾತಿಗಳು ಹೊಂದಿರುವ ಎಚ್4 ವೀಸಾ ರದ್ದುಗೊಳಿಸಲು ಹೊರಟಿರುವ ಡೊನಾಲ್ಡ್ ಟ್ರಂಪ್ ಸರ್ಕಾರದ ವಿರುದ್ಧ ಅಮೆರಿಕ ಸಂಸದರಲ್ಲೇ ಅಪಸ್ವರ ಸೃಷ್ಟಿಯಾಗಿದ್ದು, ಟ್ರಂಪ್ ಅವರ ಈ ನಡೆಯ ವಿರುದ್ಧ ಮಸೂದೆಯೊಂದನ್ನು ಅಮೆರಿಕದ ಸಂಸತ್ತಿನಲ್ಲಿ ಇಬ್ಬರು ಸಂಸದರು ಮಂಡಿಸಿದ್ದಾರೆ.
ಎಚ್4 ವೀಸಾ ಇದ್ದರೆ ಎಚ್1ಬಿ ವೀಸಾದಾರರ ಸಂಗಾತಿಗಳು ಕೂಡ ಅಮೆರಿಕದಲ್ಲಿ ಕೆಲಸ ಮಾಡಬಹುದಾಗಿದೆ. ಆದರೆ ಈ ವೀಸಾ ರದ್ದುಗೊಳಿಸಲು ಟ್ರಂಪ್ ಮುಂದಾಗಿದ್ದಾರೆ. ಇದರಿಂದಾಗಿ ಅಮೆರಿಕ ಕಂಪನಿಗಳಿಗೆ ಸಿಗಬಹುದಾಗಿದ್ದ ಲಾಭವನ್ನು ದೇಶ ಕಳೆದುಕೊಳ್ಳಲಿದೆ. ಈ ಲಾಭವನ್ನು ಬೇರೆ ದೇಶಗಳು ಬಳಸಿಕೊಂಡು, ಅಮೆರಿಕ ಉದ್ಯಮಗಳ ವಿರುದ್ಧವೇ ಸೆಣಸಬಹುದು. ಹೀಗಾಗಿ ಎಚ್4 ವೀಸಾ ರದ್ದುಗೊಳಿಸುವ ಪ್ರಸ್ತಾಪ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಮಸೂದೆ ಪಾಸಾದರೆ ಎಚ್4 ವೀಸಾ ರದ್ದುಗೊಳಿಸುವ ಟ್ರಂಪ್ ಕ್ರಮಕ್ಕೆ ಬ್ರೇಕ್ ಬೀಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ