ಮಿ. ಕಾಂಡೋಮ್ ಬಗ್ಗೆ ಬಿಲ್ ಗೇಟ್ಸ್ ಲೆಟರ್

By Web DeskFirst Published Oct 29, 2018, 2:24 PM IST
Highlights

ತಂತ್ರಜ್ಞಾನ ಕ್ಷೇತ್ರದ ದಿಗ್ಗಜ, ಸಾಮಾಜ ಸೇವಕ ಹಾಗೂ ಲೇಖಕರಾದ ಬಿಲ್ ಗೇಟ್ಸ್ ಅವರು ಮಿ. ಕಾಂಡೋಮ್ ಬಗ್ಗೆ ಪತ್ರವೊಂದನ್ನು ಬರೆದಿದ್ದಾರೆ. 

ವಾಷಿಂಗ್ಟನ್ :  ಸಮಾಜ ಸೇವಕ, ಲೇಖಕ,  ತಂತ್ರಜ್ಞಾನ ಕ್ಷೇತ್ರದಲ್ಲಿ ದಿಗ್ಗಜ ಎನಿಸಿಕೊಂಡಿರುವ ಬಿಲ್ ಗೇಟ್ಸ್ ಅವರು ಥಾಯ್ಲೆಂಡ್ ವ್ಯಕ್ತಿಯೋರ್ವರ ಬಗ್ಗೆ ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. 

ಆ ವ್ಯಕ್ತಿಯ ಬಗ್ಗೆ ಬಿಲ್ ಗೇಟ್ಸ್ ತಮ್ಮ ಪತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ಥಾಯ್ಲೆಂಡ್ ನಲ್ಲಿ  ಗರ್ಭನಿರೋಧಕ ಮತ್ತು ಏಡ್ಸ್ ಕುರಿತಾಗಿ ಜಾಗೃತಿ ಮೂಡಿಸಿದ ಮೇಚಾಯ್ ಬಗ್ಗೆ ತಮ್ಮ ಲೇಖನವನ್ನು ಬರೆದು ಬಿಲ್ ಗೇಟ್ಸ್ ಇನ್ ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಿ. ಕಾಂಡೋಮ್, ಕಾಂಡೋಮ್ ಕಿಂಗ್  ಎಂದು ಕರೆಸಿಕೊಳ್ಳುವ ಮೆಚಾಯ್ ದೇಶದಲ್ಲಿ ಸುರಕ್ಷಿತ ಲೈಂಗಿಕತೆ ಬಗ್ಗೆ ಜಾಗೃತಿ ಮೂಡಿಸಲು ಕೆಲಸ ಮಾಡಿದ್ದರು. ಈ ಬಗ್ಗೆ ಬಿಲ್ ಗೇಟ್ಸ್ ಅವರು ತಮ್ಮ ಲೇಖನದಲ್ಲಿ ವಿವರಣೆ ನೀಡಿದ್ದಾರೆ.  

ಸದ್ಯ ಇಲ್ಲಿನ ಜನರು ಕೂಡ ಕಾಂಡೋಮ್ ಗೆ ಕಾಂಡೋಮ್ ಎಂದು ಕರೆಯದೇ ಮೆಚಾಯ್ ಎಂದೇ ಕರೆಯುತ್ತಾರೆ.

 

click me!