ಕೊಟ್ಯಂತರ ರು. ನೀರಾವರಿ ಹಗರಣ : ಕಾಂಗ್ರೆಸ್ ಶಾಸಕ ಅರೆಸ್ಟ್

ನೀರಾವರಿ ಯೋಜನೆಯೊಂದರಲ್ಲಿ ಭಾರೀ ಭ್ರಷ್ಟಾಚಾರ ಎಸಗಿದ ಆರೋಪದ ಅಡಿಯಲ್ಲಿ ಕಾಂಗ್ರೆಸ್ ಶಾಸಕರೋರ್ವರನ್ನು ಬಂಧನಕ್ಕೆ ಒಳಪಡಿಸಲಾಗಿದೆ. 


ರಾಜ್ ಕೋಟ್ : ಗುಜರಾತ್ ನ ಮೋರ್ಬಿ ಪೊಲೀಸರು ಭಾನುವಾರ ಕಾಂಗ್ರೆಸ್ ಶಾಸಕ  ಪರಷೋತ್ತಮ್ ಸಬರಿಯಾ ಅವರನ್ನು ಬಂಧಿಸಿದ್ದಾರೆ. 

1 ಕೋಟಿಗೂ ಅಧಿಕ ಮೊತ್ತದ ನೀರಾವರಿ ಹಗರದಲ್ಲಿ ಭ್ರಷ್ಟಾಚಾರ ಎಸಗಿದ ಆರೋಪದ ಅಡಿಯಲ್ಲಿ ಸಬರಿಯಾ ಅವರನ್ನು ಬಂಧಿಸಲಾಗಿದೆ. 

Latest Videos

ನಿರಾವರಿ ಯೋಜನೆಯ ಸಂಬಂಧ ಶಾಸಕರು ಎಂಜಿನಿಯನರ್ ಬಳಿ 35 ಲಕ್ಷ ರು. ಸ್ವೀಕರಿಸಿದ ಆರೋಪ ಎದುರಿಸುತ್ತಿದ್ದಾರೆ. ಒಟ್ಟು 1.12 ಕೋಟಿ  ನೀರಾವರಿ ಯೋಜನೆಯ ಹೆಸರಲ್ಲಿ  ಹಣ ಪಡೆದು ಭ್ರಷ್ಟಾಚಾರ ಎಸಗಲಾಗಿದೆ ಎನ್ನುವ ಆರೋಪ ಎದುರಾಗಿದೆ. 

ಶಾಸಕರೊಂದಿಗೆ ಭರತ್ ಗಣೇಸಿಯಾ ಎನ್ನುವವರನ್ನು ಕೂಡ ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ. 

click me!