ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದ ನಿತೀಶ್ ಕುಮಾರ್!

Published : Jul 28, 2017, 01:20 PM ISTUpdated : Apr 11, 2018, 01:07 PM IST
ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದ ನಿತೀಶ್ ಕುಮಾರ್!

ಸಾರಾಂಶ

ವಿಶ್ವಾಸಮತದಲ್ಲಿ  ಬಿಹಾರ ಸಿಎಂ ನಿತೀಶ್​ ಕುಮಾರ್​ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದಾರೆ. ಇವರ ಈ ಗೆಲುವಿನಿಂದ ಆರ್;ಜೆಡಿ ಹಾಗೂ ಕಾಂಗ್ರೆಸ್'ಗೆ ಭಾರೀ ಮುಖಭಂಗವಾಗಿದೆ.

ಬಿಹಾರ(ಜು.28): ವಿಶ್ವಾಸಮತದಲ್ಲಿ  ಬಿಹಾರ ಸಿಎಂ ನಿತೀಶ್​ ಕುಮಾರ್​ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದಾರೆ. ಇವರ ಈ ಗೆಲುವಿನಿಂದ ಆರ್;ಜೆಡಿ ಹಾಗೂ ಕಾಂಗ್ರೆಸ್'ಗೆ ಭಾರೀ ಮುಖಭಂಗವಾಗಿದೆ.

ಬಿಹಾರದಲ್ಲಿ ಇಂದು ನಡೆದ ವಿಶೇಷ ಅಧಿವೇಶನದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದಿಂದ ಬಹುಮತ ಸಾಬೀತಾಗಿದೆ. ಒಟ್ಟು 243 ಸದಸ್ಯರ ಸಂಖ್ಯಾ ಬಲವನ್ನು ಬಿಹಾರ ವಿಧಾನಸಭೆ ಹೊಂದಿದ್ದು, ಸರ್ಕಾರ ರಚನೆಗೆ 122 ಶಾಸಕರ ಬೆಂಬಲ ಅಗತ್ಯವಿತ್ತು. ಆದರೆ ಇದಕ್ಕೂ ಹೆಚ್ಚು ಅಂದರೆ  131 ಶಾಸಕರ ಬಲದೊಂದಿಗೆ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಸಿಎಂ ನಿತೀಶ್ ಕುಮಾರ್ ಯಶಸ್ವಿಯಾಗಿದ್ದಾರೆ.

ಈ ಮೂಲಕ ಬಿಜೆಪಿ ಬೆಂಬಲದೊಂದಿಗೆ ಮತ್ತೆ ಬಿಹಾರ ಸಿಎಂ ಗದ್ದುಗೆಗೇರಿರುವ ಜೆಡಿಯುನ ನಿತೀಶ್‌ ಕುಮಾರ್‌ ಇಂದು ತಮ್ಮ ಅಗ್ನಿಪರೀಕ್ಷೆಯಲ್ಲಿ ಗೆದ್ದಿದ್ದಾರೆ.  

 

 

 

 

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

20 ವರ್ಷದ ಮಗನ ಮುಂದೆ 10 ವರ್ಷದ ಕಿರಿಯ ನಟಿಯನ್ನು ಮದುವೆ ಆಗೋಕೆ ರೆಡಿಯಾದ್ರಾ Actor Dhanush?
ನರೇಗಾ ಬಳಿಕ ಯುಪಿಎ ಕಾಲದ ಇನ್ನೆರಡು ಕಾಯ್ದೆಗೆ ತಿದ್ದುಪಡಿ? ಆರ್‌ಟಿಐ, ಆಹಾರ ಭದ್ರತಾ ಕಾಯ್ದೆಯ ಮೇಲೆ ಕೇಂದ್ರದ ಕಣ್ಣು!