ನಾನು ಡಿಸಿಎಂ ಆಗಿದ್ದಾಗ ಧರಂ ನೀಡಿದ್ದ ಸ್ವಾತಂತ್ರ್ಯ ಮರೆಯಲಾರೆ

By Suvarna Web DeskFirst Published Jul 28, 2017, 10:51 AM IST
Highlights

ಧರ್ಮಸಿಂಗ್‌ರ ಸಚಿವ ಸಂಪುಟದಲ್ಲಿ ಉಪಮುಖ್ಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಸಂದರ್ಭದಲ್ಲಿ ಅವರು ನನಗೆ ನೀಡಿದ ಸ್ವಾತಂತ್ರ್ಯ ಹಾಗೂ ತೋರಿದ ಪ್ರೀತಿಯನ್ನು ನಾನೆಂದೂ ಮರೆಯಲಾರೆ. ಪ್ರೀತಿಯ ಕಾರಂಜಿಯಂತಿದ್ದ ಧರ್ಮಸಿಂಗ್ ಇಂದು ನಿಧನರಾಗಿದ್ದಾರೆ. ನಾವೆಲ್ಲರೂ ದುಃಖದ ಸಾಗರದಲ್ಲಿದ್ದೇವೆ. ಅಜಾತ ಶತ್ರು ಧರ್ಮಸಿಂಗ್ ಅವರ ಎಳೆ ನಗೆ ಹಾಗೂ ಮಮತೆಯ ನೋಟ ಇನ್ನು ನಮ್ಮೆಲ್ಲರಿಗೂ ಕೇವಲ ನೆನಪು ಮಾತ್ರ ಎಂಬುದು ನನ್ನಲ್ಲಿ ಏಕಕಾಲಕ್ಕೆ ನೋವು, ದುಃಖವನ್ನೂ ತಂದಿದೆ.

ಬೆಂಗಳೂರು(ಜು.28): ಧರ್ಮಸಿಂಗ್‌ರ ಸಚಿವ ಸಂಪುಟದಲ್ಲಿ ಉಪಮುಖ್ಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಸಂದರ್ಭದಲ್ಲಿ ಅವರು ನನಗೆ ನೀಡಿದ ಸ್ವಾತಂತ್ರ್ಯ ಹಾಗೂ ತೋರಿದ ಪ್ರೀತಿಯನ್ನು ನಾನೆಂದೂ ಮರೆಯಲಾರೆ. ಪ್ರೀತಿಯ ಕಾರಂಜಿಯಂತಿದ್ದ ಧರ್ಮಸಿಂಗ್ ಇಂದು ನಿಧನರಾಗಿದ್ದಾರೆ. ನಾವೆಲ್ಲರೂ ದುಃಖದ ಸಾಗರದಲ್ಲಿದ್ದೇವೆ. ಅಜಾತ ಶತ್ರು ಧರ್ಮಸಿಂಗ್ ಅವರ ಎಳೆ ನಗೆ ಹಾಗೂ ಮಮತೆಯ ನೋಟ ಇನ್ನು ನಮ್ಮೆಲ್ಲರಿಗೂ ಕೇವಲ ನೆನಪು ಮಾತ್ರ ಎಂಬುದು ನನ್ನಲ್ಲಿ ಏಕಕಾಲಕ್ಕೆ ನೋವು, ದುಃಖವನ್ನೂ ತಂದಿದೆ.

ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಏಳು ಬಾರಿ ಗೆಲುವು ಸಾಧಿಸಿದ್ದ ಧರ್ಮಸಿಂಗ್ ಅವರು ಒಮ್ಮೆ ಗುಲ್ಬರ್ಗಾ ಹಾಗೂ ಮತ್ತೊಮ್ಮೆ ಬೀದರ್ ಕ್ಷೇತ್ರದಿಂದ ಲೋಕಸಭೆಯನ್ನು ಪ್ರವೇಶಿಸಿದ್ದರು. ಡಿ.ದೇವರಾಜ ಅರಸು, ಆರ್. ಗುಂಡೂರಾವ್, ಎಸ್. ಬಂಗಾರಪ್ಪ, ಎಂ.ವೀರಪ್ಪ ಮೊಯ್ಲಿ ಹಾಗೂ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರಗಳಲ್ಲಿ ‘ರ್ಮಸಿಂಗ್ ಅವರು ಸೇವೆ ಸಲ್ಲಿಸಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ‘ರ್ಮಸಿಂಗ್ ಅವರು ನಿರ್ವಹಿಸದ ಖಾತೆಗಳೇ ಇಲ್ಲ. ಅಬಕಾರಿ, ಗೃಹ, ಸಮಾಜ ಕಲ್ಯಾಣ, ನಗರಾಭಿವೃದ್ಧಿ, ಕಂದಾಯ ಹಾಗೂ ಲೋಕೋಪಯೋಗಿ ಸೇರಿದಂತೆ ಪ್ರಮುಖ ಖಾತೆ ಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು.

ನಂತರ ಮುಖ್ಯಮಂತ್ರಿ ಪದವಿ ಅಲಂಕರಿಸಿ ಜನಪ್ರಿಯ ಮುಖ್ಯಮಂತ್ರಿ ಎನಿಸಿದ್ದರು. ಪಕ್ಷೇತರ ಅ‘್ಯರ್ಥಿಯಾಗಿ ಅಂದಿನ ಗುಲ್ಬರ್ಗಾ ನಗರಸಭೆ ಸದಸ್ಯರಾಗಿ ಪ್ರಪ್ರಥಮ ಬಾರಿಗೆ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದ ‘ರ್ಮ ಸಿಂಗ್ ಅವರು ಐದೂವರೆ ದಶಕಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿದ್ದರು. ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಧರ್ಮಸಿಂಗ್‌ರವರು ಹೊಂದಿದ್ದ ಸ್ನೇಹ ಮತ್ತು ಒಡನಾಟ ಕೇವಲ ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲ. ರಾಷ್ಟ್ರ ರಾಜಕಾರಣದ ಗಮನವನ್ನೂ ಸೆಳೆದಿತ್ತು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಹಿಡಿದು ಅಧಿನಾಯಕ ರವರೆಗೆ ಎಲ್ಲರ ಪ್ರೀತಿ ಮತ್ತು ವಿಶ್ವಾಸಕ್ಕೆ ಪಾತ್ರರಾಗಿದ್ದ ‘ರ್ಮಸಿಂಗ್ ಅವರು, ಪ್ರತಿಪಕ್ಷಗಳ ಎಲ್ಲಾ ನಾಯಕರು ಕೂಡ ಗೌರವಿಸುವ, ಮೆಚ್ಚುವ ವ್ಯಕ್ತಿತ್ವ ಹೊಂದಿದ್ದರು. ಕಿರಿಯರಿಂದ ಹಿರಿಯರವರೆಗೂ ಎಲ್ಲರನ್ನೂ ಪ್ರೀತಿಸುತ್ತಿದ್ದರು. ‘ರ್ಮಸಿಂಗ್ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.

 

click me!