(ವಿಡಿಯೋ)ಆತ್ಮಹತ್ಯೆಗೆ ಯತ್ನಿಸಿದ ಬಿಗ್ ಬಾಸ್ ವಿನ್ನರ್ ಪ್ರಥಮ್: Facebookನಲ್ಲಿ ಲೈವ್ ವಿಡಿಯೋ

Published : Apr 04, 2017, 05:09 PM ISTUpdated : Apr 11, 2018, 12:43 PM IST
(ವಿಡಿಯೋ)ಆತ್ಮಹತ್ಯೆಗೆ ಯತ್ನಿಸಿದ ಬಿಗ್ ಬಾಸ್ ವಿನ್ನರ್ ಪ್ರಥಮ್: Facebookನಲ್ಲಿ ಲೈವ್ ವಿಡಿಯೋ

ಸಾರಾಂಶ

ಒಳ್ಳೆ ಹುಡುಗ ಪ್ರಥಮ್  ತಪ್ಪು  ಎಸಗಿ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಕೇಸ್ ಜಡಿಸಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳ ಸ್ನೇಹಿತ ಕಮ್ ಸಿನೆಮಾ ನಿರ್ದೇಶಕ  ಲೋಕಲ್​​ ಲೋಕಿ ಮೇಲೆ ಪ್ರಥಮ್ ಹಲ್ಲೆ ಮಾಡಿರುವ ಆರೋಪ ಎದುರಾಗಿದೆ. ಈ ಬಗ್ಗೆ  ನಿರ್ದೇಶಕ ಲೋಕಿ ದೂರು ದಾಖಲಿಸಿದ್ದಾರೆ.

ಬೆಂಗಳೂರು(ಎ.05): ಒಳ್ಳೆ ಹುಡುಗ ಪ್ರಥಮ್  ತಪ್ಪು  ಎಸಗಿ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಕೇಸ್ ಜಡಿಸಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳ ಸ್ನೇಹಿತ ಕಮ್ ಸಿನೆಮಾ ನಿರ್ದೇಶಕ  ಲೋಕಲ್​​ ಲೋಕಿ ಮೇಲೆ ಪ್ರಥಮ್ ಹಲ್ಲೆ ಮಾಡಿರುವ ಆರೋಪ ಎದುರಾಗಿದೆ. ಈ ಬಗ್ಗೆ  ನಿರ್ದೇಶಕ ಲೋಕಿ ದೂರು ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡಿದ್ದ  ಪ್ರಥಮ್  ಸೆಲ್ಫೀ ವೀಡಿಯೋವನ್ನು  ಪ್ರಶ್ನಿಸಿ ಲೋಕಿ ಫೇಸ್ ಬುಕ್ ನಲ್ಲೊಂದು ಸೆಲ್ಫೀ ಅಪ್ ಲೋಡ್ ಮಾಡಿದ್ದರು. ಈ ವೇಳೆ ಲೋಕಿಗೆ ಕರೆ ಮಾಡಿದ ಪ್ರಥಮ್  ವೀಡಿಯೋ ಡಿಲೀಟ್ ಮಾಡಿಸಿ ನಂತರ ಅವಾಚ್ಯ ಶಬ್ಧಗಳಿಂದ  ನಿಂದಿಸಿದ್ದಾರೆ. ಬಳಿಕ ಸ್ನೇಹಿತ ಲೋಕಿಯನ್ನ ಕುರುಬರಹಳ್ಳಿ  ಸರ್ಕಲ್'ನಲ್ಲಿ  ಭೇಟಿ ಮಾಡುವಂತೆ ಪ್ರಥಮ್​ ಹೇಳಿದ್ದಾನೆ. ಅದರಂತೆ ಲೋಕಿ ನಿನ್ನೆ ರಾತ್ರಿ 11.30ರ ಸುಮಾರಿಗೆ ಸ್ಥಳಕ್ಕೆ ತೆರಳುತ್ತಿದ್ದಂತೆ ಕಾರಿನಿಂದ ಇಳಿದ ಪ್ರಥಮ್ ಏಕಾಏಕಿ ಹಲ್ಲೆ ಮಾಡಿ  ಪರಾರಿಯಾಗಿದ್ದಾನೆ. ಹೀಗಂತಾ ಲೋಕಲ್​​ ಲೋಕಿ ಠಾಣೆಯಲ್ಲಿ   ದೂರು ದಾಖಲಿಸಿದ್ದಾರೆ.

ಫೇಸ್'ಬುಕ್ ಲೈವ್'ನಲ್ಲಿ ಹೇಳಿದ್ದೇನು?

ಇದಾದ ಬಳಿಕ ಒಳ್ಳೆ ಹುಡುಗ ಪ್ರಥಮ್​ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪ್ರಥಮ್​ ಮಾಡಿದ ಲೈವ್ ಚಾಟ್ ವಿಡಿಯೋ ಸಾಕಷ್ಟು ವೈರಲ್​  ಆಗಿದೆ. ವಿಡಿಯೋದಲ್ಲಿ 'ಈ ವಿಚಾರವಾಗಿ  ​ನಾನು ಮಾನಸಿಕವಾಗಿ ತುಂಬಾ ನೊಂದಿದ್ದೇನೆ, ಡಿಸ್ಟರ್ಬ್ ಆಗಿದ್ದೇನೆ. ಇನ್ನು ನನ್ನ ಕೈಯಲ್ಲಿ ಬದುಕುವುದಕ್ಕೆ ಆಗುವುದಿಲ್ಲ  ನನಗೆ ಸಹಾಯ ಮಾಡಿ ಎಲ್ಲರಿಗೂ ನಾನು ಚಿರಋಣಿ ಎಂದಿರುವ ಪ್ರಥಮ್​ ಫೇಸ್​ಬುಕ್​ನಲ್ಲಿ ತನ್ನ ಅಳಲನ್ನ ತೋಡಿಕೊಂಡಿದ್ದಾರೆ.

ಈ ಹಿಂದೆ ಪ್ರಥಮ್​ ಮಾತನಾಡಿದ್ದ ವಿಡಿಯೋವನ್ನು  ಲೋಕೇಶ್​ ಅಪ್'​ಲೋಡ್​ ಮಾಡಿದ್ದರು. ಈ ವಿಚಾರವಾಗಿ ಪ್ರಥಮ್​ ಮತ್ತು ಸ್ನೇಹಿತ ಲೋಕೇಶ್​ ನಡುವೆ 3 ದಿನಗಳ ಹಿಂದೆ ಜಗಳವಾಗಿತ್ತು. ಇದರಿಂದ ನೊಂದಿದ್ದ ಪ್ರಥಮ್​ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಾಟಾದ ತಾಜ್‌, ಐಟಿಸಿಗೆ ಅದಾನಿ ಗ್ರೂಪ್ ಟಕ್ಕರ್, ಐಷಾರಾಮಿ ಹೋಟೆಲ್‌ ಉದ್ಯಮಕ್ಕೆ ಎಂಟ್ರಿ, ಏರ್ಪೋರ್ಟ್‌ಗಳೇ ಟಾರ್ಗೆಟ್!
ಬೆಂಗಳೂರು ಕಾಲೇಜಿನಲ್ಲಿ ಹಾಜರಾತಿ ಹಗರಣ; ಅಲಯನ್ಸ್ ವಿವಿ ದೂರು, 6 ಜನರ ವಿರುದ್ಧ ಎಫ್‌ಐಆರ್!