ಯೋಗೇಶ್ ಗೌಡ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪತ್ನಿ ಮಲ್ಲಮ್ಮನನ್ನು ಹೈಜಾಕ್ ಮಾಡಿದ್ರಾ ಸಚಿವರು?

Published : Dec 15, 2017, 10:14 AM ISTUpdated : Apr 11, 2018, 12:51 PM IST
ಯೋಗೇಶ್ ಗೌಡ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪತ್ನಿ ಮಲ್ಲಮ್ಮನನ್ನು ಹೈಜಾಕ್ ಮಾಡಿದ್ರಾ ಸಚಿವರು?

ಸಾರಾಂಶ

ಧಾರವಾಡ ಜಿಲ್ಲಾ ಪಂಚಾಯತ್​ ಮಾಜಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕೊಲೆ ಪ್ರಕರಣ ಉಲ್ಟಾ ಹೊಡೆಸಲು ಸಚಿವ ವಿನಯ್ ಕುಲಕರ್ಣಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗ್ತಿದೆ. ಕುರುಬ ಜಾತಿ ಟ್ರಂಪ್ ಕಾರ್ಡ್ ಬಳಸಿ ಯೋಗೀಶ್ ಗೌಡ ಪತ್ನಿ ಮಲ್ಲಮ್ಮನನ್ನು ಕಾಂಗ್ರೆಸ್ ಸೇರ್ಪಡೆಗೆ ಪ್ಲಾನ್ ರೂಪಿಸಲಾಗಿದೆ. ಮಲ್ಲಮ್ಮನನ್ನು ಸಚಿವರು ಹೈಜಾಕ್ ಮಾಡಿ ಗೌಪ್ಯ ಸ್ಥಳದಲ್ಲಿಟ್ಟು ನಿರಂತರ ಒತ್ತಡ ಹೇರುತ್ತಿದ್ದಾರೆ. ಸಚಿವರ ಬೆಂಬಲಿಗ, ನಾಗರಾಜ್ ಗೌರಿ, ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಗೌಡ ಪಾಟೀಲ್, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಶಿವಾನಂದ ಕರಿಗಾರ್ ಮೂಲಕ ಮಲ್ಲಮ್ಮ ಮೇಲೆ‌ ನಿರಂತರ ಒತ್ತಡ ಹೇರಲಾಗ್ತಿದೆ ಎನ್ನಲಾಗುತ್ತಿದೆ.

ಬೆಂಗಳೂರು (ಡಿ.15): ಧಾರವಾಡ ಜಿಲ್ಲಾ ಪಂಚಾಯತ್​ ಮಾಜಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕೊಲೆ ಪ್ರಕರಣ ಉಲ್ಟಾ ಹೊಡೆಸಲು ಸಚಿವ ವಿನಯ್ ಕುಲಕರ್ಣಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗ್ತಿದೆ.

ಕುರುಬ ಜಾತಿ ಟ್ರಂಪ್ ಕಾರ್ಡ್ ಬಳಸಿ ಯೋಗೀಶ್ ಗೌಡ ಪತ್ನಿ ಮಲ್ಲಮ್ಮನನ್ನು ಕಾಂಗ್ರೆಸ್ ಸೇರ್ಪಡೆಗೆ ಪ್ಲಾನ್ ರೂಪಿಸಲಾಗಿದೆ. ಮಲ್ಲಮ್ಮನನ್ನು ಸಚಿವರು ಹೈಜಾಕ್ ಮಾಡಿ ಗೌಪ್ಯ ಸ್ಥಳದಲ್ಲಿಟ್ಟು ನಿರಂತರ ಒತ್ತಡ ಹೇರುತ್ತಿದ್ದಾರೆ. ಸಚಿವರ ಬೆಂಬಲಿಗ, ನಾಗರಾಜ್ ಗೌರಿ, ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಗೌಡ ಪಾಟೀಲ್, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಶಿವಾನಂದ ಕರಿಗಾರ್ ಮೂಲಕ ಮಲ್ಲಮ್ಮ ಮೇಲೆ‌ ನಿರಂತರ ಒತ್ತಡ ಹೇರಲಾಗ್ತಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಸುವರ್ಣನ್ಯೂಸ್​'ಗೆ ಯೋಗೀಶ್ ಸೋದರ ಗುರುನಾಥ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.  ಕಾಂಗ್ರೆಸ್ ರಾಜಿ ಮಾಡುವ ವಿಚಾರ ಸುಮಾರಿಂದ ಗೊತ್ತಾಯಿತು.  ರಾಜಿ ಆಗುವಂತೆ ಒತ್ತಾಯ ಮಾಡಿದ್ದಾರೆಂದು ಸುಮಾ ಹೇಳಿದರು.  ವಿಷಯ ತಿಳಿದು ಮಲ್ಲಮ್ಮಗೆ ಫೋನ್ ಮಾಡಿದ್ರೆ ರಿಸೀವ್ ಮಾಡಿಲ್ಲ. ಈಗಾಗಲೇ ನನ್ನ ಸೋದರನನ್ನು ಕಳೆದುಕೊಂಡಿದ್ದೇವೆ.  ಈಗ ಮಲ್ಲಮ್ಮನನ್ನು ಕಳೆದುಕೊಳ್ಳಲು ಇಷ್ಟಪಡಲ್ಲ.   ಕೊಲೆ ಪ್ರಕರಣವನ್ನು ಕಾಂಗ್ರೆಸ್ ತನ್ನ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ.  ಯಾವುದೇ ಕಾರಣಕ್ಕೂ ಕಾಂಗ್ರೆಸ್​​ ರಾಜಿಗೆ ಒಪ್ಪದಂತೆ ಮಲ್ಲಮ್ಮಗೆ ಮನವಿ ಮಾಡಿರುವುದಾಗಿ  ಸುವರ್ಣನ್ಯೂಸ್​ಗೆ ಯೋಗೀಶ್ ಸೋದರ ಗುರುನಾಥ್ ಗೌಡ ಹೇಳಿದ್ದಾರೆ.   

ನನ್ನನ್ನು ಮಲ್ಲಮ್ಮ ಚಿಕಿತ್ಸೆಗೆಂದು ಹೇಳಿ ಶಿರಸಿಗೆ ಕರೆದುಕೊಂಡು ಹೋದರು. ಆದರೆ ಹೋಗಿದ್ದು ಆಸ್ಪತ್ರೆಗಲ್ಲ. ಶಿರಸಿಯ ವೈಷ್ಣವಿ ಹೋಟೆಲ್​​​ಗೆ. ಹೋಟೆಲ್'​ನಲ್ಲಿರುವ  ಸಿಸಿ ಕ್ಯಾಮೆರಾ ಬಂದ್ ಮಾಡಿಸಿದ್ದರು.  ಅಲ್ಲಿಗೆ  ಕಾಂಗ್ರೆಸ್​ ನಾಯಕರೂ ಬಂದಿದ್ದರು.  ಸಚಿವ ವಿನಯ್ ಕುಲಕರ್ಣಿ ಬೆಂಬಲಿಗ ನಾಗರಾಜ್ ಗೌರಿ, ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಗೌಡ ಪಾಟೀಲ್,   ಜಿಲ್ಲಾ ಪಂಚಾಯತ್​​​​ ಉಪಾಧ್ಯಕ್ಷ ಶಿವಾನಂದ ಕರಿಗಾರ್ ಬಂದಿದ್ದರು. ಮೂವರು ಕಾಂಗ್ರೆಸ್​ ನಾಯಕರಿಂದ ಮಲ್ಲಮ್ಮ ಜೊತೆ ಚರ್ಚೆ ನಡೆಸಿದ್ದಾರೆ.  ಕಾಂಗ್ರೆಸ್ ಸೇರುವಂತೆ ಈ ಮೂವರು ನಾಯಕರು ಕೇಳಿದ್ದರಂತೆ. ಈ ವಿಚಾರವನ್ನು ಮಲ್ಲಮ್ಮ ನನಗೆ ತಿಳಿಸಿದ್ರು.  ನಾನು ಮಾವನವರ ಜತೆ ಚರ್ಚಿಸುವಂತೆ ಹೇಳಿದೆ.  ಈ ವೇಳೆ ಮಲ್ಲಮ್ಮ ಆತಂಕದಲ್ಲಿದ್ದರು.  ಮಲ್ಲಮ್ಮಗೆ ಮೋಸ ಮಾಡಲ್ಲ ಎಂದು ಹೇಳಿ ನಂಬಿಸಿದ್ದಾರೆ. ಸ್ವತಃ ಸಚಿವ ವಿನಯ್​​​ ಕುಲಕರ್ಣಿ ಅವರೇ ಫೋನ್ ಮಾಡಿದ್ದರಂತೆ.  ನಿನಗೆ ಮೋಸ ಮಾಡಲ್ಲ, ಪಕ್ಷ ಸೇರುವಂತೆ ಸಚಿವರು ಹೇಳಿದ್ದಾರೆ ಎಂದು ಮಲ್ಲಮ್ಮ ನನಗೆ ಹೇಳಿದ್ದರು. ಬಳಿಕ ಬೆಂಗಳೂರಿಗೆ ಹೋಗಿ ಬರುತ್ತೇನೆಂದು ಮಲ್ಲಮ್ಮ ಹೇಳಿದ್ದಾರೆ ಎಂದು ಅವರ ಸ್ನೇಹಿತೆ ಸುಮಾ ಸುವರ್ಣ ನ್ಯೂಸ್'ಗೆ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಲ್ಲೂರು ದೇವಳ ಹೆಸರಲ್ಲಿ ನಕಲಿ ವೆಬ್‌ಸೈಟ್: ಭಕ್ತರಿಗೆ ವಂಚಿಸುತ್ತಿದ್ದ ಆರೋಪಿ ನಾಸೀರ್ ಹುಸೇನ್ ಬಂಧನ
ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ