
ಬೆಂಗಳೂರು(ಜು.28): ಎಐಎಡಿಎಂಕೆ ನಾಯಕಿ ಶಶಿಕಲಾಗೆ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವಿಶೇಷ ಸೌಲಭ್ಯ ನೀಡಲು 2 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಡಿಐಜಿ ರೂಪ ಅರೋಪಕ್ಕೆ ಡಿಜಿಪಿ ಸತ್ಯಾನಾರಾಯನ್ ತಿರುಗೇಟು ನೀಡಿದ್ದಾರೆ. ಕೋರ್ಟ್ ಅದೇಶ ಮೇರೆಗೆ ಸೌಲಭ್ಯ ನೀಡಿದ್ದಾಗಿ ಡಿಜಿಪಿ ಸ್ಪಷ್ಟಪಡಿಸಿದ್ದು, ರೂಪ ನೆತ್ತಿಯ ಮೇಲೆ ಮಾನನಷ್ಟ ತೂಗುಗತ್ತಿ ನೇತಾಡುತ್ತಿದೆ.
ಕೋರ್ಟ್ ಆದೇಶದಂತೆ ಶಶಿಕಲಾಗೆ ’ಎ’ ಕ್ಲಾಸ್ ಸೌಲಭ್ಯ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾಗೆ ರಾಜಾತಿಥ್ಯ ಪ್ರಕರಣವನ್ನು ಸಾಕ್ಷಿ ಸಮೇತ ಬಿಚ್ಚಿಟ್ಟ ಡಿಐಜಿ ರೂಪಾ ರಾತ್ರೋರಾತ್ರಿ ದೇಶದ ಐಕಾನ್ ಆಗಿದ್ದರು. ಡಿಜಿಪಿ ಸತ್ಯಾನಾರಾಯಣ್ ರಾವ್ ಹಾಗೂ ಜೈಲಿನ ಸಿಬ್ಬಂದಿ ಜೊತೆಯಾಗಿ ಅಕ್ರಮ ಎಸಗಿದ್ದಾರೆಂದು ಆರೋಪಿಸಲಾಗಿತ್ತು. ಆದರೆ ಈ ಪ್ರಕರಣ ಇದೀಗ ರೂಪಾ ಅವರಿಗೇ ತಿರುಗುಬಾಣವಾಗುವ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರ ಶಶಿಕಲಾಗೆ ಕೋರ್ಟ್ ಆದೇಶದ ಮೇರೆಗೆ ಎ ಕ್ಲಾಸ್ ಸೌಲಭ್ಯ ನೀಡಲಾಗಿದಿಯಂತೆ. 2017ರ ಫೆಬ್ರವರಿಯಲ್ಲಿ 36 ನೇ ಹೆಚ್ಚುವರಿ ಸಿವಿಲ್ ಕೋರ್ಟ್ ಎ ಕ್ಲಾಸ್ ನೀಡಲು ಆದೇಶ ನೀಡಿದ್ದು, ಅದರಂತೆ ನಡೆದುಕೊಳ್ಳಲಾಗಿದೆ ಎಂದು ಡಿಜಿ ಸತ್ಯನಾರಾಯಣ್ ರಾವ್ ಸ್ಪಷ್ಟ ಪಡಿಸಿದ್ದಾರೆ.
3 ದಿನಗಳಲ್ಲಿ ಕ್ಷಮೆಯಾಚನೆಗೆ ಸತ್ಯನಾರಾಯಣ್ ರಾವ್ ನೋಟಿಸ್
ಡಿಐಜಿ ಸತ್ಯನಾರಾಯಣ್ ರಾವ್ ಶಶಿಕಲಾಗೆ ರಾಜಾತಿಥ್ಯ ನೀಡಿದ್ದರಲ್ಲಿ ತಪ್ಪೇ ಇಲ್ಲ. ರಾಜಕೀಯ ಪ್ರಭಾವಿ ಆಗಿರುವುದರಿಂದ ಶಶಿಕಲಾ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇದ್ದುದರಿಂದ ಜೈಲಿನ ಉಪ ಅಧೀಕ್ಷಕಿ ಅನಿತಾವರನ್ನು ಶಶಿಕಲಾ ಕೊಠಡಿಯ ಕರ್ತವ್ಯಕ್ಕೆ ನೀಯೋಜನೆ ಮಾಡಲಾಗಿದೆ. ಲಂಚ ಪಡೆದು ರಾಜಾತಿಥ್ಯ ನೀಡಲಾಗಿದೆ ಎಂದು ಆರೋಪ ಮಾಡಿರುವ ಡಿಐಜಿ ರೂಪಾ ಮೂರು ದಿನಗಳಲ್ಲಿ ಬೇಷರತ್ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ 50 ಕೋಟಿ ರೂಪಾಯಿ ಮಾನನಷ್ಟ ಕೇಸ್ ಹಾಕೋದಾಗಿ ಸತ್ಯನಾರಾಯಣ್ ರಾವ್ ರೂಪಾ ಅವರಿಗೆ ನೋಟಿಸ್ ನೀಡಿದ್ದಾರೆ.
ಕೇವಲ ಊಹಾಪೋಹಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆದ ರೂಪಾಗೆ ಕಂಠಕ ಆರಂಭವಾಗುವ ಲಕ್ಷಣ ಗೋಚರವಾಗುತ್ತಿದೆ. ರೂಪಾ ಅವರು ಕ್ಷಮೆ ಕೇಳ್ತಾರಾ ಅಥಾವ ಮಾನನಷ್ಟ ಮೊಕದ್ದಮೆ ಎದುರಿಸಲು ಸಜ್ಜಾಗ್ತಾರಾ ಅನ್ನೋದು ಸದ್ಯದ ಕುತೂಹಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.