
ಬೆಂಗಳೂರು(ಜು.28): ಸಿದ್ದರಾಮಯ್ಯ ಅಹಿಂದ ವರ್ಗಗಳ ಪ್ರಶ್ನಾತೀತ ನಾಯಕರಾಗಿರಬಹುದು. ಆದರೆ ಇದಕ್ಕೆ ಪರೋಕ್ಷ ಕಾರಣ ಮಾಜಿ ಸಿಎಂ ಧರಂಸಿಂಗ್. ಧರಂಸಿಂಗ್ ಸಿಎಂ ಆಗಿದ್ದ ವೇಳೆಯಲ್ಲಿಯೇ ಅಹಿಂದ ಕಾನ್ಸೆಪ್ಟ್ ಪ್ರವರ್ಧಮಾನಕ್ಕೆ ಬಂತು. ಅಹಿಂದ ಬೆಳೆಯಲು ಧರಂಸಿಂಗ್ ಪ್ರೇರಕರಾಗದಿದ್ದರೂ, ಕಾರಣವಾಗಿದ್ದಂತೂ ಸತ್ಯ ಎನ್ನುವುದು ವಿಶ್ಲೇಷಕರ ಮಾತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಅಹಿಂದದ ಪ್ರಶ್ನಾತೀತ ನಾಯಕ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ. ಸಿದ್ದರಾಮಯ್ಯ ಅಹಿಂದ ವರ್ಗದ ಪ್ರಶ್ನಾತೀತ ನಾಯಕನಾಗಿ ಬೆಳೆದಿದ್ದಕ್ಕೆಕಾರಣ ಅಂದಿನ ಮುಖ್ಯಮಂತ್ರಿ ಧರಂಸಿಂಗ್. ಇದನ್ನು ರಾಜಕೀಯ ವಿಶ್ಲೇಷಕರು ಒಪ್ಪಿಕೊಳ್ಳುತ್ತಾರೆ.
ಧರಂಸಿಂಗ್ ಸಿಎಂ ಆಗಿದ್ದು ದೇವೇಗೌಡರ ಕೃಪಾಕಟಾಕ್ಷದಿಂದ
2004 ರಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕೃಪಾಕಟಾಕ್ಷದಿಂದ ಎನ್ ಧರಂಸಿಂಗ್ ಮುಖ್ಯಮಂತ್ರಿಯಾದರು. ಆದ್ರಿಲ್ಲಿ ಸಿಎಂ ಆಗಬೇಕೆಂದು ಸಿದ್ದರಾಮಯ್ಯ ಭಾರೀ ಕಸರತ್ತು ನಡೆಸಿದ್ದರಾದರೂ ಗೌಡರ ಆಶೀರ್ವಾದ ಸಿಕ್ಕಿದ್ದು ಧರಂಸಿಂಗ್ ಅವರಿಗೆ. ಧರಂಸಿಂಗ್-ದೇವೇಗೌಡರಿಗೆ ಹತ್ತಿರವಾಗುತ್ತಿದ್ದಂತೆ ಇತ್ತ ಸಿದ್ದರಾಮಯ್ಯ ದೇವೇಗೌಡರಿಂದ ದೂರವಾಗುತ್ತಾ ಹೋಗುತ್ತಾರೆ.
ಧರಂಸಿಂಗ್ ಸರ್ಕಾರದಲ್ಲಿ ಡಿಸಿಎಂ ಆಗಿದ್ದುಕೊಂಡೇ ಅಹಿಂದ ಸಂಘಟನೆ
ಸಿದ್ದರಾಮಯ್ಯ ಧರಂಸಿಂಗ್ ಸರ್ಕಾರದಲ್ಲಿ ಡಿಸಿಎಂಯಾಗಿದ್ದುಕೊಂಡೇ ಅಹಿಂದದ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತಾರೆ.. ಆದ್ರೂ ಧರಂಸಿಂಗ್ ಚಕಾರ ಎತ್ತಿಲ್ಲ. ಈ ಮೂಲಕ ಅಹಿಂದ ಸಂಘಟನೆ ಬೆಳೆಯಲು ಧರಂ ಪರೋಕ್ಷವಾಗಿ ಬೆಂಬಲ ನೀಡಿದರು.
ಈಶ್ವರಪ್ಪರ ರಾಯಣ್ಣ ಬ್ರಿಗೇಡ್'ನಂತೆ ಸಿದ್ದರಾಮಯ್ಯರ ಅಹಿಂದ ಸಂಘಟನೆ
ಸಿದ್ದರಾಮಯ್ಯ ಉಪಮುಖ್ಯಮಂತ್ರಿಯ ಜೊತೆಗೆ ಹಣಕಾಸು ಸಚಿವರೂ ಆಗಿದ್ದರು. ಹೀಗಾಗಿ ಅಹಿಂದ ಸಂಘಟನೆಗೆ ಆರ್ಥಿಕವಾಗಿಯೂ ಸಮಸ್ಯೆಯಾಗಲಿಲ್ಲ.. ಸಿದ್ದರಾಮಯ್ಯ ರಾಜ್ಯದ ಮೂಲೆ ಮೂಲೆಗಳಲ್ಲಿ ಅಹಿಂದ ಸಮಾವೇಶಗಳನ್ನು ಮಾಡುತ್ತ ಹೊರಟರು ಧರಂಸಿಂಗ್ ತುಟಿ ಬಿಚ್ಚಲಿಲ್ಲ. ಇಂದು ಕೆ ಎಸ್ ಈಶ್ವರಪ್ಪ , ಬಿಎಸ್ ವೈ ವಿರುದ್ಧ ರಾಯಣ್ಣ ಬ್ರಿಗೇಡ್ ಸಂಘಟನೆಗೆ ಮುಂದಾದಂತೆ ಅಂದು ಸಿದ್ದರಾಮಯ್ಯ, ದೇವೇಗೌಡರ ವಿರುದ್ಧ ಅಹಿಂದ ಸಂಘಟನೆಗೆ ಮುಂದಾದರು.
ಸಿದ್ದರಾಮಯ್ಯರ ರಾಜಕೀಯ ಔನತ್ಯಕ್ಕೆ ಪರೋಕ್ಷ ಕಾರಣ ಧರಂಸಿಂಗ್
ಹೀಗೆ ಅಹಿಂದ ಸಂಘಟನೆ ಮೂಲಕ ದೇವೇಗೌಡರ ಕೆಂಗಣ್ಣಿಗೆ ಗುರಿಯಾದ ಸಿದ್ದರಾಮಯ್ಯ ನಂತರ ಜೆಡಿಎಸ್ ನಿಂದ ಹೊರಬಂದರು. ಬಳಿಕ ಅಹಿಂದ ಹೆಸರಲ್ಲಿ ಎಬಿಪಿಜೆಡಿ ಪಕ್ಷವನ್ನು ಕಟ್ಟಿದರು. ಬಳಿಕ 2007ರಲ್ಲಿ ಎಬಿಪಿಜೆಡಿ ಪಕ್ಷವನ್ನ ಕಾಂಗ್ರೆಸ್ ನೊಂದಿಗೆ ವಿಲೀನ ಮಾಡಿ ಬಳಿಕ 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗ್ತಾರೆ. ಅಂದ್ರ ಸಿದ್ದರಾಮಯ್ಯರ ಇಂದಿನ ರಾಜಕೀಯ ಔನತ್ಯಕ್ಕೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಕಾರಣರಾಗಿದ್ದು ಧರಂಸಿಂಗ್ ಎನ್ನುವುದು ರಾಜಕೀಯ ವಿಶ್ಲೇಷಕರ ಮಾತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.