
ಕೋಲಾರ : ಕೋಲಾರದ ಮಾಲೂರು ಪಟ್ಟಣದಲ್ಲಿ ನಡೆದ ನವಮಧು ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ನವವಧು ನಾಪತ್ತೆಯಾಗಿದ್ದಾಳೆ ಅಂತ ಮದುವೆಗೆ ಬಂದವರೆಲ್ಲಾ ತಲೆಕೆಡಿಸಿಕೊಂಡಿದ್ದರೆ, ಅತ್ತ ವರನೂ ನಾಪತ್ತೆಯಾಗಿದ್ದಾನೆ. ಬಂಗಾರಪೇಟೆ ತಾಲೂಕಿನ ನರ್ನಹಳ್ಳಿಯ ಸೌಮ್ಯ ಹಾಗೂ ಗುರೇಶ್ ಮದುವೆ ಇವತ್ತು ನಡೆಯಬೇಕಿದ್ದು ನಿನ್ನೆ ಆರತಕ್ಷತೆ ಕೂಡಾ ನಡೆದಿತ್ತು.
ಆದರೆ ಬೆಳ್ಳಂಬೆಳಗ್ಗೆ ವಧು ಸೌಮ್ಯ ನಾಪತ್ತೆಯಾಗಿದ್ದಳು. ಪದ್ಮಾವತಿ ಕಲ್ಯಾಣ ಮಂಟಪಕ್ಕೆ ಬರಬೇಕಿದ್ದ ವಧು ಸೌಮ್ಯ ಮನೆಯಿಂದ ಕಾಣೆಯಾಗಿದ್ದಳು. ಹೀಗಾಗಿ ಮನೆಯವರೆಲ್ಲಾ ಸೇರಿ, ಸೌಮ್ಯಳ ತಂಗಿ ವೆಂಕಟ ರತ್ನಮ್ಮಳನ್ನು ಗುರೇಶ್ಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸಿದ್ದರು.
ಬೆಳಗ್ಗೆ ಅರಶಿಣಶಾಸ್ತ್ರ ಕೂಡಾ ನಡೆದಿತ್ತು. ಆದರೆ ವರ ಗುರೇಶ್ಗೆ ಮಾತ್ರ ವೆಂಕಟ ರತ್ನಮ್ಮಳನ್ನು ಮದುವೆ ಆಗೋದು ಇಷ್ಟ ಇರಲಿಲ್ಲ. ಹೀಗಾಗಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮದುವೆ ಮಂಠಪದಿಂದ ಎಸ್ಕೇಪ್ ಆಗಿದ್ದಾನೆ. ಈ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.