ಎಫ್'ಐಆರ್'ಗೆ ಹೈಕೋರ್ಟ್ ತಡೆ; ಆರ್ ಅಶೋಕ್'ಗೆ ಬಿಗ್ ರಿಲೀಫ್

By Suvarna Web DeskFirst Published Jan 25, 2018, 2:13 PM IST
Highlights

ಬಗರ್ ಹುಕುಂ ಸಾಗುವಳಿ ಸಮಿತಿಯಿಂದ ಅಕ್ರಮ ಭೂಮಿ ಹಂಚಿಕೆ ಆರೋಪದಡಿ ಮಾಜಿ ಡಿಸಿಎಂ ಆರ್ ಅಶೋಕ್ ವಿರುದ್ಧ ಎಸಿಬಿ ದಾಖಲಿಸಿದ್ದ ಎಫ್ಐಆರ್'ಗೆ ಹೈಕೋರ್ಟ್ ತಡೆ ನೀಡಿದೆ. ಇದರಿಂದಾಗಿ ಅಶೋಕ್'ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಬೆಂಗಳೂರು (ಜ.25): ಬಗರ್ ಹುಕುಂ ಸಾಗುವಳಿ ಸಮಿತಿಯಿಂದ ಅಕ್ರಮ ಭೂಮಿ ಹಂಚಿಕೆ ಆರೋಪದಡಿ ಮಾಜಿ ಡಿಸಿಎಂ ಆರ್ ಅಶೋಕ್ ವಿರುದ್ಧ ಎಸಿಬಿ ದಾಖಲಿಸಿದ್ದ ಎಫ್ಐಆರ್'ಗೆ ಹೈಕೋರ್ಟ್ ತಡೆ ನೀಡಿದೆ. ಇದರಿಂದಾಗಿ ಅಶೋಕ್'ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಏನಿದು ಆರೋಪ?

ಬಗರ್ ಹುಕುಂ ಸಾಗುವಳಿ ಸಮಿತಿಯಿಂದ ಅಕ್ರಮ ಭೂಮಿ ಹಂಚಿಕೆ ಆರೋಪದಡಿ ಮಾಜಿ ಡಿಸಿಎಂ ಆರ್. ಅಶೋಕ್ ವಿರುದ್ಧ ಎಸಿಬಿ ಎಫ್'ಐಆರ್ ದಾಖಲಿಸಿತ್ತು. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆ.13(1)(C), 13(1) (D), 13(2) ಐಪಿಸಿ 420, 120(ಬಿ)ಅಡಿ ಎಸಿಬಿ ಪ್ರಕರಣ ದಾಖಲು ಮಾಡಿಕೊಂಡಿತ್ತು.  ಬಗರ್ ಹುಕುಂ ಭೂ ಸಕ್ರಮೀಕರಣ ಸಮಿತಿ ಅಧ್ಯಕ್ಷರಾಗಿದ್ದ ಆರ್. ಅಶೋಕ್ ಅಕ್ರಮ ಭೂ ಹಂಚಿಕೆ ವಿಚಾರವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಈಗಾಗಲೇ ತಹಶೀಲ್ದಾರ್ ರಾಮಚಂದ್ರಯ್ಯ ಸೇರಿದಂತೆ ಕಂದಾಯ ಅಧಿಕಾರಿ ಗವೀಗೌಡ, ಚೌಡೇಗೌಡ ಹಾಗೂ ಅಂದಿನ ಗ್ರಾಮ ಲೆಕ್ಕಿಗಾಧಿಕಾರಿ ಶಶಿಧರ ವಿರುದ್ಧವೂ ಆರೋಪ ಕೇಳಿಬಂದಿತ್ತು.

ಇಂದು ಹೈಕೋರ್ಟ್ ಏಕಸದಸ್ಯ ಪೀಠ  ಮಧ್ಯಂತರ ತಡೆಯಾಜ್ಞೆ ನೀಡಿದೆ.

 

 

 

click me!