
ಶ್ರೀನಗರ: ಚಲಿಸುತ್ತಿರುವ ರೈಲಿನ ಅಡಿ ಹಳಿಗಳ ನಡುವೆ ಮಲಗಿ ಸಾಹಸ ಪ್ರದರ್ಶಿಸಿದ ಕಾಶ್ಮೀರಿ ಯುವಕನೊಬ್ಬನ ವಿಡಿಯೋ ಈಗ ವೈರಲ್ ಆಗಿದೆ. ವೇಗವಾಗಿ ರೈಲು ಬರುತ್ತಿರುವಾಗ ಮುಖ ಕೆಳಗೆ ಮಾಡಿ ಈತ ಮಲಗುತ್ತಾನೆ.
ಆಗ ರೈಲು ವೇಗವಾಗಿ ಹಾದು ಹೋಗುತ್ತದೆ. ಅದೃಷ್ಟವಶಾತ್ ಯುವಕ ಬಚಾವಾಗುತ್ತಾನೆ ಹಾಗೂ ತಾನು ಬಚಾವಾದೆ ಎಂದು ರೈಲು ಹೋದ ನಂತರ ಕುಣಿದು ಕುಪ್ಪಳಿಸ್ತುತಾನೆ. ಯಾರೋ ಪರಿಚಯದವರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಮಾಧ್ಯಮಗಳಿಗೆ ಹಾಕಿದ್ದಾರೆ.
ಈ ಸಾಹಸ ಮಾಡಿದ ಯುವಕನನ್ನು ಬಿಜ್‌ಬೆಹರಾ ಪಟ್ಟಣದ ಆದಿಲ್ ಎಂದು ಗುರುತಿಸಲಾಗಿದೆ. ಇದರ ಬೆನ್ನಲ್ಲೇ ಆದಿಲ್ ಮತ್ತು ಆತನ ಸ್ನೇಹಿತನನ್ನು ಬಂಧಿಸಲಾಗಿದೆ.
ಈತನ ದುಸ್ಸಾಹಸಕ್ಕೆ ಅನೇಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.