
ಮೈಸೂರು : ಮೈಸೂರು ರಾಜ ಮನೆತನಕ್ಕೆ ಬಿಗ್ ರಿಲೀಫ್ ದೊರಕಿದ್ದು, ಈ ಸಂಬಂಧ ರಾಣಿ ಪ್ರಮೋದಾ ದೇವಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಅರಮನೆಯ ಸಂಪತ್ತು ತೆರಿಗೆ, ಆಸ್ತಿ ತೆರಿಗೆ ಬಗ್ಗೆ ಇದ್ದ ಗೊಂದಲ ನಿವಾರಣೆಯಾಗಿದೆ. 1975 ರಿಂದ ಈ ತನಕ ಗೊಂದಲವಿತ್ತು. 2012ರಲ್ಲಿ 6 ಪ್ರಕರಣಗಳು ಸುಪ್ರೀಂಕೋರ್ಟ್ ನಲ್ಲಿದ್ದವು. ಈ ತೀರ್ಪು ಒಡೆಯರ್ ಅವರು ಇದ್ದಾಗಲೇ ಬಂದಿದ್ದರೆ ಸಂತೋಷ ಪಡುತ್ತಿದ್ದರು. ತೆರಿಗೆ ಯಾವುದೂ ಬಾಕಿ ಇಲ್ಲ. ನಮಗೆ ಹೆಚ್ಚುವರಿ ಮೊತ್ತ ವಾಪಸ್ ತರಲಿದೆ. ಆಸ್ತಿ, ಬಾಡಿಗೆ ಅಟ್ಯಾಚ್ ಮಾಡಿತ್ತು. ಸರ್ಕಾರದಿಂದ ನಮಗೆ ತೆರಿಗೆ ಪಾವತಿಗೆ ಒತ್ತಡ ಇರಲಿಲ್ಲ. ಪ್ರಕರಣಗಳು ಕೋರ್ಟ್ ವಿಚಾರಣೆಯಲ್ಲಿದ್ದರಿಂದ ತೆರಿಗೆ ಕಟ್ಟಲೇಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.
ಇನ್ನು ಸಂಪತ್ತಿನ ಅಂದಾಜನ್ನು ಸರಿಯಾಗಿ ಮಾಡಿರಲಿಲ್ಲ ಇದನ್ನ ಒಡೆಯರ್ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದರು. 2014ರಲ್ಲಿ ಶ್ರೀಕಂಠದತ್ತರು ಕಾಲವಾದ ಬಳಿಕ ಹೋರಾಟವನ್ನು ಮುಂದುವರೆಸಲಾಗಿತ್ತು. ಬಡ್ಡಿ ಸಮೇತ ಹಣ ಪಾವತಿ ಆಗುತ್ತಿದೆ 2015ರಲ್ಲೆ ತೀರ್ಪು ಬಂದಿದ್ದರೂ ಪುನರ್ ವಿಮರ್ಶೆ ನಡೆಯುತ್ತಿತ್ತು ಈಗ ಆದಾಯ ತೆರಿಗೆ ಇಲಾಖೆ ಕ್ಲೀನ್ ಚಿಟ್ ನೀಡಿದೆ. ಯಾವುದೇ ತೆರಿಗೆ ರಾಜಮನೆತನದ್ದು ಬಾಕಿ ಇಲ್ಲ . ಎಷ್ಟು ಮೊತ್ತ ವಾಪಸ್ ಬಂದಿದೆ ಹೇಳಲಾಗದು. ಮೈಸೂರು ನಗರದ ಹಲವಾರು ಆಸ್ತಿಗಳು ಅಟ್ಯಾಚ್ ಆಗಿತ್ತು. ನಮ್ಮ ಆಸ್ತಿಗಳನ್ನ ತೆರಿಗೆಗಾಗಿ ಜಪ್ತಿ ಮಾಡಿ ಹರಾಜು ಮಾಡಿದ ಉದಾಹರಣೆಗಳಿವೆ ಎಂದು ಪ್ರಮೋದಾ ದೇವಿ ತಿಳಿಸಿದ್ದಾರೆ. ಇನ್ನು ಹಲವಾರು ಲಕ್ಷಗಳು ವಾಪಸ್ ಬಂದಿದೆ ಎಂದು ಭಾವಿಸಬಹುದು ಎಂದರು.
ಇನ್ನು ಅಮಿತ್ ಶಾ ಭೇಟಿಯ ಬಗ್ಗೆ ಮಾತನಾಡಿದ ಅವರು ಚರ್ಚೆಯ ಬಗ್ಗೆ ಹೇಳಲಾಗದ ಯಾವುದೇ ಸಂಗತಿಗಳು ಇಲ್ಲ. ನಾನು ಹಿಂದೆಯೂ ಹೇಳಿದ್ದೆ ರಾಜಕೀಯಕ್ಕೆ ಬರಲ್ಲ ಅಂತಾ ಎಲೆಕ್ಷನ್ ಸಂದರ್ಭ ಬಂದಿದ್ದರಿಂದ ಚರ್ಚೆಯಾಗಿದೆ. ರಾಜ್ಯಸಭಾ ಆಫರ್ ಕೊಟ್ಟಿಲ್ಲ, ಕೊಟ್ಟ ತಕ್ಷಣ ತಮ್ಮಮುಂದೆ ಹೇಳುವೆ. ಹಿಂದೆ ರಾಜಕೀಯ ಒತ್ತಡದಿಂದಾಗಿ ಅರಮನೆ ವ್ಯಾಜ್ಯ ಬಗೆಹರಿದಿಲ್ಲ. ಹಿಂದೆ ರಾಜಮನೆತನಕ್ಕಿದ್ದ ಕ್ಲೀನ್ ಇಮೇಜ್ ನಿಂದಾಗಿ ಅವಕಾಶ ಆಗದಿರಬಹುದು.
ನಾವು ಯಾವುದೇ ನಿರ್ದಿಷ್ಟ ಪಕ್ಷದ ಪರವಾಗಿ ಪ್ರಚಾರವನ್ನೂ ಮಾಡುವುದಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ. ನನಗೆ ರಾಜ್ಯಸಭಾ ಸದಸ್ಯತ್ವದ ಆಫರ್ ಮಾಡಿಲ್ಲ, ಅದೆಲ್ಲವೂ ಸುಳ್ಳು ಎಂದೂ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.