ಜೈಲಲ್ಲಿ ಶಶಿಕಲಾ ಭೇಟಿ ಮಾಡಿದ ಮುಖಂಡ: ಮಹತ್ವದ ರಾಜಕೀಯ ಚರ್ಚೆ

By Web DeskFirst Published Nov 10, 2018, 8:23 AM IST
Highlights

ಅಕ್ರಮ ಆಸ್ತಿ ಗಳಿಕೆ  ಪ್ರಕರಣದಲ್ಲಿ ಜೈಲು ಸೇರಿರುವ ಜಯಲಲಿತಾ ಆಪ್ತೆ ಶಶಿಕಲಾ ಅವರನ್ನು ತಮಿಳುನಾಡಿದ ಎಐಎಡಿಎಂಕೆ ಬಂಡಾಯ ನಾಯಕ ಟಿ.ಟಿ.ವಿ ದಿನಕರನ್‌ ಮಾತುಕತೆ ನಡೆಸಿದ್ದಾರೆ. 

ಬೆಂಗಳೂರು: ಎಐಎಡಿಎಂಕೆ ಬಂಡಾಯ ನಾಯಕ ಟಿ.ಟಿ.ವಿ ದಿನಕರನ್‌ ಹಾಗೂ ಶಾಸಕ ಸ್ಥಾನದಿಂದ ಅನರ್ಹಗೊಂಡ 18 ಬಂಡಾಯ ಶಾಸಕರ ಪೈಕಿ ಕೆಲ ಶಾಸಕರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಗರದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಪದಚ್ಯುತ ನಾಯಕಿ ವಿ.ಕೆ. ಶಶಿಕಲಾ ಅವರನ್ನು ಶುಕ್ರವಾರ ಭೇಟಿ ಮಾಡಿದರು.

‘ಈ ಸಂದರ್ಭದಲ್ಲಿ ಶಾಸಕರ ಅನರ್ಹ ಆದೇಶ ಎತ್ತಿಹಿಡಿದ ಹೈಕೋರ್ಟ್‌ ತೀರ್ಪು ಸೇರಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಚುನಾವಣೆ ಎದುರಿಸುವುದೇ ಸೂಕ್ತ ಎಂದು ಶಶಿಕಲಾ ಅವರು ಹೇಳಿದ್ದಾರೆ,’ ಎಂದು ಶಾಸಕ ಟಿ.ಟಿ.ವಿ ದಿನಕರನ್‌ ಹೇಳಿದ್ದಾರೆ.

ಶಾಸಕರ ಅನರ್ಹತೆಗೊಳಿಸಿದ ತಮಿಳುನಾಡು ವಿಧಾನಸಭೆ ಸ್ಪೀಕರ್‌ ಪಿ.ಧನಪಾಲ್‌ ಅವರ ಆದೇಶವನ್ನು ಮದ್ರಾಸ್‌ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಇದಾದ ಬಳಿಕ ಶಶಿಕಲಾ ಅವರನ್ನು ಮಾಜಿ ಶಾಸಕರು ಭೇಟಿ ಮಾಡಿದ್ದು ಇದೇ ಮೊದಲು.

click me!