ನೀರಿಗಾಗಿ ಇಲ್ಲಿ ಗುದ್ದಾಡಬೇಕು! ಬಾವಿಗಳ ಬಳಿ ಜನರ ದಂಡು

Published : Jun 05, 2018, 07:22 AM ISTUpdated : Jun 05, 2018, 01:05 PM IST
ನೀರಿಗಾಗಿ ಇಲ್ಲಿ ಗುದ್ದಾಡಬೇಕು!  ಬಾವಿಗಳ ಬಳಿ ಜನರ ದಂಡು

ಸಾರಾಂಶ

ರಾಜ್ಯದ ಹಲವು ಭಾಗಗಳಲ್ಲಿ ಮುಂಗಾರು ಅಬ್ಬರಿಸುತ್ತಿದ್ದರೂ ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ. ಭೀಕರ ಬರಗಾಲ ಎದುರಿಸುತ್ತಿರುವ ಇಲ್ಲಿನ ಜನರು ತೆರೆದ ಬಾವಿಗಳಲ್ಲಿ ನೀರು ಎತ್ತಲು ಗುದ್ದಾಡುವಂತಾಗಿದೆ. ಸಾವಿನ ಭಯವನ್ನೂ ತೊರೆದು ಬಾವಿಯಲ್ಲಿ ಸರ್ಕಸ್‌ ಮಾಡಿ ನೀರು ಪಡೆಯುವಂತಾಗಿದೆ.

ಔರಾದ್‌ :  ರಾಜ್ಯದ ಹಲವು ಭಾಗಗಳಲ್ಲಿ ಮುಂಗಾರು ಅಬ್ಬರಿಸುತ್ತಿದ್ದರೂ ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ. ಭೀಕರ ಬರಗಾಲ ಎದುರಿಸುತ್ತಿರುವ ಇಲ್ಲಿನ ಜನರು ತೆರೆದ ಬಾವಿಗಳಲ್ಲಿ ನೀರು ಎತ್ತಲು ಗುದ್ದಾಡುವಂತಾಗಿದೆ. ಸಾವಿನ ಭಯವನ್ನೂ ತೊರೆದು ಬಾವಿಯಲ್ಲಿ ಸರ್ಕಸ್‌ ಮಾಡಿ ನೀರು ಪಡೆಯುವಂತಾಗಿದೆ.

ಈ ಭಾಗದ ಹೆಚ್ಚಿನ ಭಾಗಗಳಲ್ಲಿ ನೀರು ತಳ ತಲುಪಿದೆ. ತಾಲೂಕಿನ ಚಿಮ್ಮೇಗಾಂವ್‌ ತಾಂಡಾದಲ್ಲಿ ನೀರಿನ ಸಮಸ್ಯೆ ಹೇಳ ತೀರದಾಗಿದೆ. ಹೀಗಾಗಿ ನೀರು ಇರುವ ಬಾವಿಗಳಿಗೆ ಕಿ.ಮೀ.ಗಟ್ಟಲೆ ನಡೆದು ಹೋಗುತ್ತಿದ್ದಾರೆ. ಅಬಾಲವೃದ್ಧರೆನ್ನದೇ ಜನರು ಹಗ್ಗಗಳನ್ನು ಬಾವಿಗಿಳಿಸಿ, ಇತರರೊಂದಿಗೆ ಸೆಣಸಾಡಿ ನೀರು ಪಡೆಯಬೇಕಾಗಿದೆ. ಈ ನಡುವೆ ನೀರು ಎಲ್ಲಿ ಖಾಲಿಯಾಗುತ್ತೋ ಎಂಬ ಆತಂಕದಿಂದ ಕೆಲವು ಯುವಕರು ಬಾವಿಯೊಳಗೆ ನಿಂತು ತಮ್ಮ ಕುಟುಂಬದವರಿಗೆ ಸಹಾಯ ಮಾಡುವುದು ಸರ್ವೇಸಾಮಾನ್ಯವಾಗಿದೆ.

ತಾಲೂಕಿನ ದಾಪಕಾ, ಕಮಲನಗರ, ಚಿಂತಾಕಿ, ಸಂತಪೂರ ಹೋಬಳಿಗಳಲ್ಲೂ ನೀರಿನ ಸಮಸ್ಯೆ ವ್ಯಾಪ​ಕ​ವಾ​ಗಿದೆ. ಕೆಲವು ಬಾವಿ​ಗ​ಳಂತೂ 55ರಿಂದ 100 ಅಡಿಗೂ ಅಧಿಕ ಆಳ​ವಿದ್ದು ಒಂದು ಹಂತದ ಬಳಿಕ ಮೋಟಾರು ಪಂಪು​ಗಳಿಗೂ ನೀರು ಮೇಲೆ​ತ್ತುವ ಸಾಮ​ರ್ಥ್ಯ​ ಇರು​ವು​ದಿ​ಲ್ಲ. ​ಪರಿ​ಸ್ಥಿತಿ ಇಷ್ಟುಶೋಚ​ನೀ​ಯ​ವಾ​ಗಿ​ದ್ದ​ರೂ ಅಧಿಕಾರಿಗಳು ಹಾಗೂ ಜನಪ್ರನಿಧಿಗಳು ತಮಗೂ ಇದ​ಕ್ಕೂ ಸಂಬಂಧವಿಲ್ಲವೆಂಬಂತೆ ನಿರ್ಲಕ್ಷ್ಯ ತೋರುತಿದ್ದಾರೆ ಎಂಬುದು ನಾಗ​ರಿ​ಕರ ಅಳ​ಲು.

ರಾಜ್ಯದ ಹೆಚ್ಚಿನ ಪ್ರದೇ​ಶ​ಗಳು ಮುಂಗಾರು ಪೂರ್ವ ಮಳೆ​ಯಲ್ಲಿ ತೊಯ್ದ​ರೂ ಈಗಾ​ಗಲೇ ಮುಂಗಾರು ಪ್ರವೇ​ಶಿ​ಸಿ​ದ್ದರೂ ಬೀದರ್‌ ಜಿಲ್ಲೆ​ಯ ಔರಾದ್‌ ತಾಲೂ​ಕಿ​ನಲ್ಲಿ ಮಾತ್ರ ಜೀವ​ಜ​ಲ​ಕ್ಕಾಗಿ ಪರ​ದಾ​ಟ ಮುಂದು​ವ​ರಿ​ದಿದೆ. ನೀರಿನ ಬರ​ವನ್ನು ಎದು​ರಿಸುತ್ತಿ​ರುವ ಇಲ್ಲಿನ ಕೆಲ ಪ್ರದೇ​ಶ​ಗ​ಳ ಜನರು  ಹತ್ತಾರು ಕಿ.ಮೀ. ನಡೆಯಬೇ​ಕಾದ ಪರಿ​ಸ್ಥಿತಿ ಇದೆ. ಅಷ್ಟುದೂರ ನಡೆದು ಆಳದ ಬಾವಿ​ಗಿಳಿದರೂ ನೀರು ಸಿಕ್ಕೇ ಸಿಗು​ತ್ತದೆ ಎಂಬು​ದಕ್ಕೆ ಯಾವುದೇ ಖಾತ್ರಿ ಇರು​ವು​ದಿಲ್ಲ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ