ಇದು ನಮ್ಮ ಭಾರತೀಯ ಸೈನಿಕರು ಎದುರಿಸುತ್ತಿರುವ ದುಸ್ಥಿತಿ..!

First Published Jun 5, 2018, 7:15 AM IST
Highlights

ಒಂದೆಡೆ ಸಾವಿರಾರು ಕೋಟಿ ರು.ವೆಚ್ಚ ಮಾಡಿ ವಿದೇಶಗಳಿಂದ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಸುತ್ತಿರುವ ಸರ್ಕಾರ, ಇನ್ನೊಂದೆಡೆ ಸೈನಿಕರಿಗೆ ಸೇನಾ ಸಮವಸ್ತ್ರ ಖರೀದಿಸಲೂ ಹಣವಿಲ್ಲದ ಸ್ಥಿತಿ ತಲುಪಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ನವದೆಹಲಿ: ಒಂದೆಡೆ ಸಾವಿರಾರು ಕೋಟಿ ರು.ವೆಚ್ಚ ಮಾಡಿ ವಿದೇಶಗಳಿಂದ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಸುತ್ತಿರುವ ಸರ್ಕಾರ, ಇನ್ನೊಂದೆಡೆ ಸೈನಿಕರಿಗೆ ಸೇನಾ ಸಮವಸ್ತ್ರ ಖರೀದಿಸಲೂ ಹಣವಿಲ್ಲದ ಸ್ಥಿತಿ ತಲುಪಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ತುರ್ತು ಶಸ್ತ್ರಾಸ್ತ್ರ ಖರೀದಿಗೆ ಹೆಚ್ಚುವರಿ ಹಣ ಒದಗಿಸಿಲ್ಲ. ಹೀಗಾಗಿ ಸರ್ಕಾರಿ ಸಶಸ್ತ್ರ ಕಾರ್ಖಾನೆಗಳಿಂದ ಸೇನೆಗೆ ಪೂರೈಕೆ ಪ್ರಮಾಣವನ್ನು ಶೇ.94ರಿಂದ ಶೇ.50ಕ್ಕೆ ಇಳಿಸಲಾಗಿದೆ. 

ಈ ಹಣವನ್ನು ತುರ್ತು ಸಮಯಕ್ಕೆ ಬೇಕಾದ ಶಸ್ತ್ರಾಸ್ತ್ರ ಖರೀದಿಗೆ ಬಳಸಲು ಸೇನೆ ನಿರ್ಧರಿಸಿದೆ. ಹೀಗೆ ಹಣಕಾಸಿನ ನೆರವಿನ ಕಡಿತದ ಪರಿಣಾಮ ಯೋಧರು ತಮ್ಮ ಸಮವಸ್ತ್ರ, ಟೋಪಿ, ಬೆಲ್ಟ್‌ಗಳು, ಶೂಗಳನ್ನು ತಾವೇ ಖರೀದಿಸಬೇಕಾಗಿದೆ. 

ಕೆಲವು ವಾಹನಗಳ ಬಿಡಿಭಾಗಗಳ ಖರೀದಿಗೂ ಸೇನೆಯಲ್ಲಿ ಅನುದಾನದ ಕೊರತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

click me!