ಇತ್ತೀಚಿಗೆ ನಿಧನರಾದ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್| ಸುಷ್ಮಾ ಸ್ಮರಣಾರ್ಥ ದೇಗುಲದಲ್ಲಿ ಸಾವಿರ ದೀಪ ಬೆಳಗಿಸಿದ ಭೂತಾನ್ ದೊರೆ| ಭೂತಾನ್ ರಾಜಧಾನಿ ಥಿಂಪುವಿನ ಸಿಂತೋಖಾ ಜೋಂಗ್ ದೇವಾಲಯದಲ್ಲಿ ವಿಶೇಷ ಪೂಜೆ| ಭೂತಾನ್ ದೊರೆ ಜಿಗ್ಮೆ ಕೇಸರ್ ನಾಮ್ಗೇಲ್ ವಾಂಗ್‌ಚುಕ್’ರಿಂದ ವಿಶೇಷ ಪೂಜೆ| ಭಾರತ ಮತ್ತು ಭೂತಾನ್ ನಡುವಿನ ಸೌಹಾರ್ದ ಸಂಭಂಧಕ್ಕೆ ಸಾಕ್ಷಿ|
ಥಿಂಪು(ಆ.10): ಇತ್ತೀಚಿಗೆ ನಿಧನರಾದ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಸ್ಮರಣಾರ್ಥ ಭೂತಾನ್ ದೊರೆ ಸ್ಥಳೀಯ ದೇಗುಲದಲ್ಲಿ ಒಂದು ಸಾವಿರ ದೀಪ ಬೆಳಗಿಸಿ ಗೌರವ ಸಲ್ಲಿಸಿದ್ದಾರೆ.
ಸುಷ್ಮಾ ಆತ್ಮಕ್ಕೆ ಶಾಂತಿ ಕೋರಿ ಭೂತಾನ್ ದೊರೆ ಜಿಗ್ಮೆ ಕೇಸರ್ ನಾಮ್ಗೇಲ್ ವಾಂಗ್‌ಚುಕ್, ರಾಜಧಾನಿ ಥಿಂಪುವಿನ ಸಿಂತೋಖಾ ಜೋಂಗ್ ದೇವಾಲಯದಲ್ಲಿ ಸಾವಿರ ದೀಪ ಬೆಳಗಿಸಿ ಗೌರವ ಸೂಚಿಸಿದರು.
undefined
A post shared by His Majesty King Jigme Khesar (@kingjigmekhesar) on Aug 7, 2019 at 5:16am PDT
ಈ ಕುರಿತಂತೆ ಭೂತಾನ್ ರೇಡಿಯೋ ಕೂಡ ವರದಿ ಮಾಡಿದ್ದು, ದೊರೆಯ ಈ ಕಾರ್ಯ ಭಾರತ ಮತ್ತು ಭೂತಾನ್ ದೇಶಗಳ ನಡುವಿನ ಸೌಹಾರ್ದ ಮತ್ತು ಆತ್ಮೀಯ ಸಂಬಂಧವನ್ನು ಬಿಂಬಿಸುತ್ತದೆ ಎಂದು ಹೇಳಿದೆ.
ಸುಷ್ಮಾ ವಿದೇಶಾಂಗ ಸಚಿವರಾಗಿದ್ದ ವೇಳೆ ಭೂತಾನ್ ದೊರೆ ವಾಂಗ್‌ಚುಕ್ ಪತ್ನಿ ಮತ್ತು ಮಗು ಸಮೇತ ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸುಷ್ಮಾ ಭೂತಾನ್ ದೊರೆ ಮತ್ತು ಕಟುಂಬಕ್ಕೆ ಆತ್ಮೀಯ ಆತಿಥ್ಯ ನೀಡಿದ್ದರು.