ಕಣಿವೆಯಲ್ಲಿ ಹಾರಾಡುತ್ತಿದೆ ಭದ್ರತಾ ಹಕ್ಕಿ: ಧೋವಲ್ ಕಂಡ ಸ್ಥಳೀಯರು ಕಕ್ಕಾಬಿಕ್ಕಿ!

By Web DeskFirst Published Aug 10, 2019, 9:19 PM IST
Highlights

ಖುಷ್ ಹೋ ಕ್ಯಾ ಎಂದು ಕೇಳಿದ ಅಜಿತ್ ಧೋವಲ್| ರಾಷ್ಟ್ರೀಯ ಭದ್ರತಾ ಸಲಹೆಗಾರ ಕೇಳಿದ ಕೇಳಿದ ಪ್ರಶ್ನೆಗೆ ಬಾಲಕನ ಉತ್ತರವೇನು?| ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ ಹಿನ್ನೆಲೆ| ಕಣಿವೆ ಭದ್ರತಾ ಪರಿಶೀಲನೆಯ ಜವಾಬ್ದಾರಿ ಹೊತ್ತ ಅಜಿತ್ ಧೋವಲ್| ಸ್ಥಳೀಯರೊಂದಿಗೆ ಹರಟುವ ಮೂಲಕ ಜನರ ವಿಶ್ವಾಸ ಗೆಲ್ಲುವ ಪ್ರಯತ್ನ|

ಶ್ರೀನಗರ(ಆ.10): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ಬಳಿಕ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಕಣಿವೆ ಪ್ರವಾಸದಲ್ಲಿದ್ದಾರೆ.

ಕಣಿವೆಯ ಭದ್ರತಾ ಪರಿಶೀಲನೆಯ ಜವಾಬ್ದಾರಿ ಹೊತ್ತಿರುವ ಅಜಿತ್ ಧೋವಲ್, ಅನಂತ್’ನಾಗ್ ಜಿಲ್ಲೆಯಲ್ಲಿ ಸ್ಥಳೀಯರೊಂದಿಗೆ ಹರಟುವ ಮೂಲಕ ಜನರ ವಿಶ್ವಾಸ ಗೆಲ್ಲುವ ಪ್ರಯತ್ನ ಮಾಡಿದರು.

"

ಈ ವೇಳೇ ಧೋವಲ್ ಶಾಲಾ ವಿದ್ಯಾರ್ಥಿಯೋರ್ವನನ್ನು ಮಾತನಾಡಿಸಿದ್ದು, ವಿಶೇಷ ಸ್ಥಾನಮಾನದ ಕುರಿತು ಆತನಿಗಿರುವ ಜ್ಞಾನವನ್ನು ಪರೀಕ್ಷಿಸಿದ್ದಾರೆ. ನಂತರ  ನಗರದ ಇತರೆಡೆ ಸಂಚಾರ ನಡೆಸಿದ ಧೋವಲ್ ವಿವಿಧ ವೃತ್ತಿಯಲ್ಲಿ ತೊಡಗಿರುವ ಜನರೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದರು.

click me!