
ಬೆಂಗಳೂರು (ಡಿ.08): ಪತ್ರಕರ್ತ ರವಿ ಬೆಳಗೆರೆ ಬಂಧನ ವಿಚಾರವಾಗಿ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಸುವರ್ಣ ನ್ಯೂಸ್'ಗೆ ಹೇಳಿದ್ದಾರೆ. ಈ ಬಗ್ಗೆ ನನಗೆ ಒಂದೂವರೆ ಗಂಟೆ ಹಿಂದೆ ವಿಷಯ ಗೊತ್ತಾಗಿದೆ.
ನಾನು ಬೆಂಗಳೂರಲ್ಲಿ ಇಲ್ಲ. ಹೀಗಾಗಿ ತಡವಾಗಿ ವಿಷಯ ತಿಳಿದಿದೆ. ತಂದೆಯ ಮನೆಯಲ್ಲಿ ಬಂದೂಕು ಸಿಕ್ಕಿರುವುದು ನಿಜ. ಆದರೆ ನನ್ನ ತಂದೆ ಕೊಲೆಗೆ ಸುಪಾರಿ ಕೊಟ್ಟಿರುವುದು ಸುಳ್ಳು. ಯಾವ ಆಧಾರದಲ್ಲಿ ಸುಪಾರಿ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ? ಫೇಸ್ಬುಕ್ ಸ್ಟೇಟಸ್'ಗೂ ಕೊಲೆ ಸುಪಾರಿಗೂ ಸಂಬಂಧ ಇಲ್ಲ. ಸುನೀಲ್ ಕೊಲೆ ಮಾಡಬೇಕಿದ್ದರೆ ಮತ್ತೆ ಕಚೇರಿಗೆ ಬರಬೇಕಿರಲಿಲ್ಲ. ನಿನ್ನೆಯೂ ಸಹ ಸುನೀಲ್ ಹೆಗ್ಗರವಳ್ಳಿ ಕಚೇರಿಗೆ ಬಂದಿದ್ದಾರೆ. ಹೆಗ್ಗರವಳ್ಳಿ ಕೂಡ ನಮ್ಮ ತಂದೆ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ ಎಂದು ಭಾವನಾ ಹೇಳಿದ್ದಾರೆ.
ಗೌರಿ ಹತ್ಯೆ ಕೇಸನ್ನು ಡೈವರ್ಟ್ ಮಾಡಲು ಮಾಡುತ್ತಿದ್ದಾರೋ ಗೊತ್ತಿಲ್ಲ. ನಮ್ಮ ತಂದೆ ಹಾಗೂ ಹೆಗ್ಗರವಳ್ಳಿ ನಡುವೆ ಸಣ್ಣ ಮನಸ್ತಾಪ ಇತ್ತು. ಸುನೀಲ್ ಹೆಗ್ಗರವಳ್ಳಿ ನಮ್ಮ ಫ್ಯಾಮಿಲಿಯವರಲ್ಲಿ ಒಬ್ಬನಾಗಿದ್ದ. ಮತ್ತೆ ಬರವಣಿಗೆಯಲ್ಲಿ ತೊಡಗಿದ್ದಾರೆ ಎಂಬ ಖುಷಿಯಲ್ಲಿ ನಾವಿದ್ದೆವು. ಗೌರಿ ಹತ್ಯೆ ಕೇಸ್'ನ ಮಧ್ಯೆ ಸೇರಿಸಲು ನಡೆಸಿರುವ ಕುತಂತ್ರ ಎಂದು ಸುವರ್ಣನ್ಯೂಸ್ಗೆ ರವಿ ಬೆಳಗೆರೆ ಹೇಳಿದ್ದಾರೆ.
ಈ ವಿಷಯ ಕೇಳಿ ನನಗೆ ಶಾಕ್ ಆಗಿದೆ. ಅವರು ನನ್ನ ಮಾವ. ಈ ರೀತಿ ಕೆಲಸ ಮಾಡುವವರಲ್ಲ. ನಮ್ಮ ಇಡೀ ಕುಟುಂಬ ರವಿ ಬೆಳಗೆರೆ ಬೆಂಬಲಕ್ಕೆ ಇದೆ. ಕಾನೂನು ಹೋರಾಟ ನಡೆಸುತ್ತೇನೆ ಎಂದು ಅಳಿಯ ಶ್ರೀನಗರ ಕಿಟ್ಟಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.