
ನವದೆಹಲಿ (ಏ.09): ದೇಶಕ್ಕಾಗಿ ವಿವಿಧ ಸಂದರ್ಭಗಳಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೆರವು ಒದಗಿಸಲು ಬಯಸುವವರಿಗೆ ಅನುಕೂಲವಾಗಲು ಸಿದ್ಧಪಡಿಸಿಲಾಗಿರುವ ‘ಭಾರತ್ ಕೇ ವೀರ್’ https://bharatkeveer.gov.in ವೆಬ್’ಸೈಟ್ ಹಾಗೂ ಮೊಬೈಲ್ ಅಪ್ಲಿಕೇಶನ್’ಗೆ ಇಂದು ಚಾಲನೆ ನೀಡಲಾಯಿತು.
ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಈ ವೆಬ್’ಸೈಟ್’ಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡಾ ಉಪಸ್ಥಿತರಿದ್ದರು.
ಸಿಆರ್’ಪಿಎಫ್ ಹಾಗೂ ಅರೆ-ಸೇನಾ ಪಡೆಗಳ ಹುತಾತ್ಮ ಯೋಧರ ಕುಟುಂಬಗಳಿಗೆ ಈ ವೆಬ್’ಸೈಟ್ ಮೂಲಕ ಆರ್ಥಿಕ ನೆರವನ್ನು ಒದಗಿಸಬಹುದು. ಈ ಪರಿಹಾರ ನಿಧಿಗೆ ಹಣವನ್ನು ದಾನ ಮಾಡುವ ದಾನಿಗಳಿಗೆ, ತಾವು ಬಯಸುವ ಹುತಾತ್ಮ ಯೋಧರನ್ನು ಆಯ್ಕೆ ಮಾಡಬಹುದಾಗಿದೆ.
ಎಲ್ಲ ಹುತಾತ್ಮ ಯೋಧರ ಕುಟುಂಬಗಳಿಗೆ ಇದರ ಪ್ರಯೋಜನ ಸಿಗುವಂತಾಗಲು, ರೂ.15 ಲಕ್ಷ ಮಿತಿಯನ್ನು ಇಡಲಾಗಿದೆ. ಒಮ್ಮೆ ಆ ಮಿತಿ ತಲುಪಿದಾಗ ದಾನಿಗಳಿಗೆ ಆ ಬಗ್ಗೆ ಅಲರ್ಟ್ ಕೂಡಾ ಮಾಡುವಂತಹ ವ್ಯವಸ್ಥೆ ಈ ವೆಬ್’ಸೈಟ್’ನಲ್ಲಿದೆ. ಆಗ ದಾನಿಗಳು ಉಳಿದ ಹಣವನ್ನು ಇತರ ಹುತಾತ್ಮ ಯೋಧರ ಖಾತೆಗೆ ಜಮಾಯಿಸಬಹುದಾಗಿದೆ. ನ್ಯಾಷನಲ್ ಇಂಫಾರ್ಮೆಟಿಕ್ಸ್ ಸೆಂಟರ್, ಭಾರತೀಯ ಸ್ಟೇಟ್ ಬ್ಯಾಂಕಿನ ಸಹಯೋಗದೊಂದಿಗೆ ವಿನ್ಯಾಸಗೊಳಿಸಿದೆ. ಕೇವಲ ಎರಡುವರೆ ತಿಂಗಳುಗಳೊಳಗೆ ಈ ವೆಬ್’ಸೈಟನ್ನು ಸಿದ್ದಪಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.