ತಂತಿ ಸಮೇತ ರೈತರನ್ನು ಮೇಲಕ್ಕೆತ್ತಿದ ಬೆಸ್ಕಾಂ

By Suvarna Web DeskFirst Published Feb 5, 2017, 1:05 AM IST
Highlights

ನಮಗೆಪರಿಹಾರನೀಡದೆಇಲ್ಲಿವಿದ್ಯುತ್ತಂತಿಎಳೆಯಲುನಾವುಬಿಡುವುದಿಲ್ಲ. ನಮಗೆಸೂಕ್ತಪಡಿಹಾರನೀಡಲೇಬೇಕೆಂದುವಿದ್ಯುತ್ತಂತಿಹಿಡಿದುಆಗ್ರಹಿಸಿದರು.

ಅನಂತಪುರ(ಫೆ.05): ಹೈ ಪವರ್ ವಿದ್ಯುತ್ ತಂತಿ ಎಳೆಯಲು ತಡೆಯೊಡ್ಡಿದ ರೈತರನ್ನು ಬೆಸ್ಕಾಂ ಸಿಬ್ಬಂದಿ ತಂತಿ ಸಮೇತವಾಗಿ ಮೇಲಕ್ಕೆತ್ತಿದ ಘಟನೆ ಅನಂತಪುರ ಜಿಲ್ಲೆಯ ಮಡಕಶಿರ ತಾಲೂಕಿನ ಮೆಲುವಾಯಿ ಗ್ರಾಮದಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಪಾವಗಡದಿಂದ ಮಧುಗಿರಿಗೆ ಹೈ ಪವರ್ ವಿದ್ಯುತ್ ಕನೆಕ್ಷನ್ ನೀಡಬೇಕೆಂದು ಬೆಸ್ಕಾಂ ಅದಿಕಾರಿಗಳು ಮುಂದಾಗಿದ್ದರು. ಅದಕ್ಕಾಗಿ ಮಡಕಶಿರಾ ಬಳಿಯ ಮೆಲುವಾಯಿ ಗ್ರಾಮದಲ್ಲಿ ಹೈ ಟೆನ್ಷನ್ ತಂತಿ ಎಳೆಯಲು ಸಿದ್ದತೆ ನಡೆಸಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದಇಬ್ಬರು ರೈತರು, ನಮಗೆ ಪರಿಹಾರ ನೀಡದೆ ಇಲ್ಲಿ ವಿದ್ಯುತ್ ತಂತಿ ಎಳೆಯಲು ನಾವು ಬಿಡುವುದಿಲ್ಲ. ನಮಗೆ ಸೂಕ್ತ ಪಡಿಹಾರ ನೀಡಲೇಬೇಕೆಂದು ವಿದ್ಯುತ್ ತಂತಿ ಹಿಡಿದು ಆಗ್ರಹಿಸಿದರು. ಈ ವೇಳೆ ಅಧಿಕಾರಿಗಳು ಇಬ್ಬರು ರೈತರ ಸಮೇತ ತಂತಿಯನ್ನು ಮೇಲೆಳೆದಿದ್ದಾರೆ. ಈ ವೇಳೆ ಒಬ್ಬರು ಕೈ ಬಿಟ್ಟು ಕೆಳಗೆ ಬಿದ್ದರೆ, ಇನ್ನೊಬ್ಬರು ತಂತಿ ಸಮೇತ ಮೇಲಕ್ಕೆ ಹೋಗಿದ್ದರು. ನಂತರ ಅವರು ಸಹ 30 ಅಡಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ.ತಂತಿ ಹಿಡಿದು ಪ್ರತಿಭಟಿಸಿದವರು ಪರಿಹಾರಕ್ಕಾಗಿ ಆಗ್ರಹಿಸಿದ ತಂದೆ ಮಗ ಎನ್ನುವುದು ಇಲ್ಲಿ ಗಮನಾರ್ಹ.

click me!